
ದಾವಣಗೆರೆ :ಒಂದಾನೊಂದು ಕಾಲದಲ್ಲಿ ಶೋಷಣೆಗೆ ಒಳಗಾಗಿದ್ದ ದಲಿತರು ಈಗ ಎಚ್ಚೆತ್ತುಕೊಂಡಿದ್ದು, ಸಂಘಟನೆ ಮಾಡಿಕೊಳ್ಲುತ್ತಾ ತಮ್ಮ ಅಸ್ತಿತ್ವ ಕಾಪಾಡಿಕೊಳ್ಳುತ್ತಿದೆ. ಅಂತಹ ಸಂಘಟನೆಯಲ್ಲಿ ಭೀಮ್ ಆರ್ಮಿ ಸಂಘಟನೆ ಕೂಡಾ ಒಂದಾಗಿದ್ದು, ಹೋರಾಟದಲ್ಲಿ ಮುಂಚೂಣಿಯಲ್ಲಿದೆ. ಹೀಗಾಗಿ ರಾಜ್ಯದ ನಾನಾ ಕಡೆ ಸಂಘಟನೆಗೆ ಒತ್ತು ನೀಡುತ್ತಿದ್ದು, ದಾವಣಗೆರೆಯಲ್ಲಿ ಒಬ್ಬ ಉತ್ತಮ ವ್ಯಕ್ತಿ, ಹೋರಾಟಗಾರ, ಲೇಖಕರೊಬ್ಬರನ್ನು ತನ್ನ ಹೋರಾಟಕ್ಕೆ ಶಕ್ತಿ ತುಂಬಲು ನೇಮಕ ಮಾಡಿಕೊಂಡಿದೆ.
ಹೌದು..ದಾವಣಗೆರೆಯಲ್ಲಿ ತನ್ನದೇ ಆದ ಹೆಸರನ್ನು ಮಾಡಿರುವ, ಲೇಖನಗಳ ಮೂಲಕ ಸಮಾಜ ತಿದ್ದುಪಡಿ ಮಾಡುವ ಮಲ್ಲೇಶ್ ಎಂ.ನಾಯ್ಕ್ ಭೀಮ್ ಆರ್ಮಿ ಸಂಘಟನೆಗೆ ಜಿಲ್ಲಾ ಮುಖ್ಯ ಸಂಚಾಲಕರಾಗಿ ನೇಮಕಗೊಂಡಿದ್ದಾರೆ.
ನಗರದ ಐಬಿಯಲ್ಲಿ ನಡೆದ ಭೀಮ್ ಆರ್ಮಿ ಏಕತ ಮಿಷನ್ ಕರ್ನಾಟಕದ ರಾಜ್ಯಾದ್ಯಕ್ಷ ಮತ್ತು ರಾಜ್ಯ ಕಾರ್ಯ ಉಪಾದ್ಯಕ್ಷ್ಯ ಜಯಕುಮಾರ್ ಹಾಡಿಗೆ ಮತ್ತು ಪ್ರದೀಪ್ ರವರು ಕಾರ್ಯಕಾರಿ ಸಭೆ ಕರೆದಿದ್ದು ಆ ಸಭೆಯಲ್ಲಿ ಮಲ್ಲೇಶ್ ಎಂ ನಾಯ್ಕ ರವರನ್ನು ದಾವಣಗೆರೆ ಜಿಲ್ಲಾ ಮುಖ್ಯ ಸಂಚಾಲಕರಾಗಿ ಭೀಮ್ ಆರ್ಮಿ ಏಕತ ಕರ್ನಾಟಕ ನೇಮಿಸಿ ಆಧಿಕಾರ ನೀಡಲಾಗಿದೆ. ಈ ಸಭೆಯಲ್ಲಿ ರಾಜು ಎಂಡಿಆರ್ , ದುಶ್ಯಂತ್ , ನಿಂಗಪ್ಪ ,ರಘು , ಸಮ್ಮು , ಅಜಯ್ ಇನ್ನಿತರು ಭಾಗವಹಿಸಿದ್ದರು