ದಾವಣಗೆರೆ : ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ವಿಚಾರ ಸಂಬಂಧಪಟ್ಡಂತೆ ಬಿಜೆಪಿಗೆ ಯಾವುದೇ ಸಂಬಂಧವಿಲ್ಲ ಎಂದು ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಜ್ವಲ್ ಸಂಸದನಾಗಿದ್ದು ಕಾಂಗ್ರೆಸ್ ಜೆಡಿಎಸ್ ಮೈತ್ರಿ ವೇಳೆ. ಈಗ ಬಿಜೆಪಿಗೆ ಏನು ಸಂಬಂಧ, 2019ರಲ್ಲಿ ಯಾರ ಮೈತ್ರಿ MP ಅವರು.ಕಾಂಗ್ರೆಸ್ ಜೆಡಿಎಸ್ ಮೈತ್ರಿ MP ಪ್ರಜ್ವಲ್.ಈಗ ತನಿಖೆ ಮಾಡೋರು ಯಾರು..? ಕರ್ನಾಟಕದಲ್ಲಿ ಸರ್ಕಾರ ಯಾರದ್ದು…?ಅವರು ಪರಾರಿ ಆಗೋವರೆಗೆ ರಾಜ್ಯ ಸರ್ಕಾರ ಮಲಕೊಂಡಿತ್ತಾ..?ವ್ಯವಸ್ಥಿತವಾಗಿ ಪ್ರಕರಣ ಮುಚ್ಚಿಹಾಕಲು ಯತ್ನ ನಡೆದಿದೆ*
ವ್ಯವಸ್ಥಿತವಾಗಿ ಈ ಪ್ರಕರಣ ಮುಚ್ಚಬೇಕು ಅಂತ ಕೆಲವೊಂದು ಅಡ್ಜಸ್ಟ್ಮೆಂಟ್ ರಾಜಕಾರಣಿಗಳ ಉದ್ದೇಶವಿದೆ*
ಈ ರಾಜ್ಯದಲ್ಲಿನ PSI ಹಗರಣ ಏನಾಯ್ತು…! ಏನಾದರೂ ಹೊರಗೆ ಬಿತ್ತಾ ….?ಗಾಂಜಾ ಅಫಿಮ್ ಕೇಸ್ ಏನಾಯ್ತು….? ಪೋಕ್ಸೋ ಎರಡು ಪ್ರಕರಣ ದಾಖಲಾದರು ಏನು ಆಗ್ತಿಲ್ಲ..!
ಸಿನಿಮಾ ನಟಿಯರು ಬಂಧನ ವಾಯಿತು, ಅವರ ಮೊಬೈಲ್ ಸಿಕ್ತು.ಅದರಲ್ಲಿ ಯಾವ ರಾಜಕಾರಣಿ ಮಗ ಇದ್ದ ಎಂದು ಬಹಿರಂಗವಾಯಿತಾ..?ಅದನ್ನು ಮುಚ್ಚಿ ಹಾಕಿದ್ರು.ಇದೆ ಪೋಕ್ಸೋದಲ್ಲಿ ಎರಡು ಪ್ರಕರಣ ದಾಖಲಾಯಿತು, ಸುಪ್ರಿಂ ಕೋರ್ಟ್ ಆ ಸ್ವಾಮೀನಾ ಒಳಗೆ ಹಾಕಲು ಹೇಳಿತು.
ನೀವು ಅಡ್ಜಸ್ಟ್ಮೆಂಟ್ ಇದಿರಾ, ನಿಮಗೆ ಆಗಲ್ಲಾ ಅಂದ್ರೆ ಸಿಬಿಐಗೆ ಕೊಡಿ.ನಾವು ಸಿಬಿಐಗೆ ಡಿಮಾಂಡ್ ಮಾಡ್ತಾ ಇದೆವಿ, ನೀವು ಕೊಡ್ತಾ ಇಲ್ಲ.ಚುನಾವಣೆ ಹಿನ್ನೆಲೆಯಲ್ಲಿ ಈ ಕೆಲಸ ಆಗಿದೆ. ರಾಜ್ಯದಲ್ಲಿ ಎರಡು ಫ್ಯಾಕ್ಟರಿ ಇವೆ, ಅದರಲ್ಲೊಬ್ಬರ ಹೆಸರು ಕುಮಾರಸ್ವಾಮಿ ಹೇಳಿದ್ದಾರೆ. ಇನ್ನೊಂದು ಫ್ಯಾಕ್ಟರಿ ಹೆಸರು 8ನೇ ತಾರೀಖು ನಾನು ಹೇಳುತ್ತೇನೆ .ಆ ಎರಡು ಫ್ಯಾಕ್ಟರಿಗಳ ಕೆಲಸಾನೆ ಅದು.
ಇಬ್ಬರು ಬೇರೆ ಬೇರೆ ಪಾರ್ಟಿಯಲ್ಲಿದ್ದಾರೆ, ಇಬ್ಬರದೂ ಸಿಡಿ ಬಿಸಿನೆಸ್ ಒಂದೇ ಇದೆ. ಇವರಿಬ್ಬರೂ ಹಲ್ಕಾ ರಾಜಕಾರಣ ಮಾಡ್ತಾ ಇದ್ದಾರೆ. ಎರಡು ಕುಟುಂಬಗಳು ರಾಜ್ಯದ ರಾಜಕಾರಣ ಹಾಳು ಮಾಡ್ತಿದ್ದಾರೆ
ತನಿಖೆಯಿಂದ ಪೆನ್ ಡ್ರೈವ್ ಯಾರು ಬಿಡುಗಡೆ ಮಾಡಿದ್ದು ಅಂತಾ ಗೊತ್ತಾಗಲಿದೆ.ಮಹಿಳೆಯರ ಗೌರವ ದೃಷ್ಟಿಯಿಂದ ಗೌಪ್ಯವಾಗಿಡ ಬೇಕಿತ್ತು. ಉದ್ದೇಶಪೂರ್ವಕವಾಗಿ ಚುನಾವಣೆ ವೇಳೆ ಬ್ಲಾಕ್ ಮೇಲ್ ಮಾಡಲು ಬಳಕೆ ಮಾಡಿದ್ದಾರೆ
ಭಯ ಬಿಳಿಸಿ ಆ ಕುಟುಂಬದ ಮರ್ಯಾದೆ ಕಳೆಯಲು ಬಿಡುಗಡೆ ಮಾಡಿದ್ದಾರೆ.ಚುನಾವಣೆ ಮುಂಚಿತವಾಗಿಯೇ ಬಿಡುಗಡೆ ಮಾಡಬೇಕಿತ್ತು…?.ಕಾಂಗ್ರೆಸ್ ಜೆಡಿಎಸ್ ಮೈತ್ರಿ ಇದ್ದಾಗ ಬಿಡುಗಡೆ ಮಾಡಬೆಕಿತ್ತು…?.ಈಗ ಚುನಾವಣೆ ಉದ್ದೇಶದಿಂದ ಬಿಡುಗಡೆ ಮಾಡಿದ್ದಾರೆ ಎಂದರು.
ವಿಜಯಾನಂದ ಕಾಶಪ್ಪನವರ ವಿಚಾರಕ್ಕೆ ಪ್ರತಿಕ್ರಿಯಿಸಿ,
ಒಂದು ವರ್ಷ ಆಯಿತು ಬಾಯಿ ತೆಗೆದಿಲ್ಲ ಅವನು,
ಸ್ವಂತ ತನ್ನ ಹೆಂಡತಿಗೆ ಟಿಕೆಟ್ ಕೊಡಿಸಲು ಆಗ್ಲಿಲ್ಲ, ಮೀಸಲಾತಿ ಎಲ್ಲಿ ಕೊಡ್ಸ್ತಾನೆ ಎಂದರು.
ವಚನಾನಂದ ಸ್ವಾಮೀಜಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಸ್ವಾಮಿಗೆ ಕೆಲಸ ಏನಿದೆ….?,ಇಷ್ಟು ದಿನ ಕಾಂಗ್ರೆಸ್ ಗೆ ಓಟು ಹಾಕಲು ಹೇಳಿದ್ದ. ಈಗ ಪ್ರಲ್ಹಾದ ಜೋಶಿಗೆ ಪೋನ್ ಮಾಡಿದ್ರಂತೆ, ಆಶಿರ್ವಾದ ಮಾಡ್ತೆನಿ ಬಾ ಅಂದ್ರಂತೆ. ಸಿದ್ದೇಶ್ವರಗೆ ನಾಳೆ ಭೇಟಿಗೆ ಹೇಳಿದ್ದಾರಂತೆ
ಇಲ್ಲಿವರೆಗೂ ಕೊಟ್ಟಿಲ್ಲ ಈಗ ಬರೋಕೆ ಹೇಳಿದ್ದಾರಂತೆ.
ಬಿಜೆಪಿ ಗಾಳಿ ಚೆನ್ನಾಗಿದೆ, 25 ಸಿಟ್ ಗೆಲ್ಲುತ್ತೆ ನನ್ನ ಮಾನ ಹರಾಜ ಆಗಲಿದೆ ಎಂದು ಭಯಾ ಆಗಿದೆ.ಅದಕ್ಕೆ ಈಗ ಬಿಜೆಪಿಯವರಿಗೆ ಬರಲು ಹೇಳುತ್ತಿದ್ದಾನೆ
ಐದು ಸಲ ಕೇಳಿದ್ರು ಸಿದ್ದೇಶ್ವರ್ ಗೆ ಅವಕಾಶ ಕೊಟ್ಟಿಲ್ಲ
ಇವರೆಲ್ಲ ಹಗರಣದ ಸ್ವಾಮೀಗಳು, ತುಂಗಾರತಿ 30ಕೋಟಿ, 10ಕೋಟಿ ಬಿಎಸ್ವೈ, ಬೊಮ್ಮಾಯಿ ಕೊಟ್ಟಿದ್ದು, ನಾಲ್ಕುವರಿ ಈಶ್ವರಪ್ಪ ಕೊಟ್ಟಿದ್ದು,ಡುಪ್ಲಿಕೇಟ್ ಪಿಡಿಓ ಸಹಿ ಮಾಡಿಸಿ ರೊಕ್ಕ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಂಚಮಸಾಲಿ ಸಮಾಜ ಕೂಡಲ ಸಂಗಮ ಶ್ರೀಗೆ ಋಣಿಯಾಗಿರಬೇಕು.ಬಿಜೆಪಿಗೆ ವೋಟ್ ಹಾಕಬೇಡ ಎಂದು
ಇವರಿಗೆ ಯಾರ ಪರ್ಮಿಷನ್ ಕೊಟ್ಟಿದ್ದಾರೆ.ಕಳ್ಳ ಸ್ವಾಮಿ ಮಾತು ಕೇಳಬೇಡಿ, ಎಸಿ ರೂಂ ಸ್ವಾಮಿಜಿ ನಮಗೆ ಬೇಕಾಗಿಲ್ಲ.ಪರೋಕ್ಷವಾಗಿ ಹರಿಹರ ವಚನಾನಂದ ಸ್ವಾಮಿಜಿ ವಿರುದ್ದ ಯತ್ನಾಳ್ ಕಿಡಿಕಾರಿದರು.
ನಿನ್ನ ಬಾಯಿ ಸರಿ ಇದ್ದರೆ ನೀನೆ ಮುಖ್ಯಮಂತ್ರಿ ಆಗ್ತಿದ್ದೆ ಎಂದು ಸಂಸದ ಜಿಎಂ ಸಿದ್ದೇಶ್ವರ್ ಹೇಳ್ತಾ ಇದ್ರು.ನಾನು ಆಸ್ತಿ ಮಾಡಿಲ್ಲ, ಐಟಿ, ಇಡಿ ರೇಡ್ ಮಾಡಿದರೆ ಏನೂ ಸಿಗಲ್ಲ.
ಇಡೀ ರಾಜ್ಯದಲ್ಲಿ ಮೂರು ಕುಟುಂಬಗಳು ವೀರಶೈವ ಲಿಂಗಾಯತ ಕಪಿಮುಷ್ಠಿಯಲ್ಲಿದೆ.ಇವ್ರು ಎಲ್ಲಾದರು ಹಾಸ್ಟೇಲ್ ಕಟ್ಟಿದ್ದಾರಾ.ಎಲ್ಲಾ ರಾಜಕೀಯ ಪಕ್ಷದವರು ಪಂಚಮಸಾಲಿ ತುಳಿದಿದ್ದಾರೆ
ನನ್ನ ಹೊರಗೆ ಹಾಕುವ ಶಕ್ತಿ ಯಾರಿಗೂ ಇಲ್ಲ.ಎರಡು ವರ್ಷದ ಹಿಂದೇನೆ ಹೋರ ಹಾಕ್ತಾ ಇದ್ರು.ನನ್ನ ಹಿಂದೇ ಹಿಂದೂ ಸಮಾಜ, ಪಂಚಮಸಾಲಿ ಸಮಾಜ ಇದೆ..
ಪಂಚಮಸಾಲಿ ಸಮಾಜಕ್ಕೆ 2d ಸಿಕ್ಕಿದೆ..ದೆಹಲಿಗೆ ಅಮಿತ್ ಷಾ ಕರೆಸಿ ಮೀಸಲಾತಿ ಬಗ್ಗೆ
ಮಾತನಾಡಿದ್ರು..ಪ್ರಧಾನಿ ಡಿಕ್ಲೇರ್ ಮಾಡಿದ್ದಾರೆ ಧರ್ಮಾಧೀತ ಮೀಸಲಾತಿ ಕೊಡಲು ಬರಲ್ಲ
ದಲಿತ ಹಿಂದೂಳಿದವರ ಮೀಸಲಾತಿ ಕಿತ್ತು ಮುಸ್ಲಿಂಗೆ ಮೀಸಲಾತಿ ಕೊಡ್ತಿದ್ದಾರೆ..ಇನ್ನೇನೂ ನಮ್ಮ ಸಮುದಾಯದವರೆಗೆ ಅನುಕೂಲ ಮಾಡಲು ಸಾಧ್ಯ. ಎಲ್ಲಿಯವರೆಗೆ ಹಾಲುಮತ 2ಎ ನಲ್ಲಿ ಇರುತ್ತೆ ಅಲ್ಲಿವರೆಗೂ ಪಂಚಮಸಾಲಿ 2ಎ ಗೆ ಹೋಗಲಾಗದು.ಸಿದ್ದರಾಮಯ್ಯ ಅದಕ್ಕೆ ಅವಕಾಶ ಕೊಡೋದಿಲ್ಲ.ಎಲ್ಲರಿಗೂ ಆಗದ ಮೇಲೆ ಯತ್ನಾಳ್ ಬಳಿ ಬಂದ್ರು. ಯತ್ನಾಳ್ ಪ್ರತಿಭಟನೆಗೆ ಬರ್ತಾರೆ ಅಂದ ತಕ್ಷಣ ಸಿದ್ದು ಅಪಾರ್ಟ್ಮೆಂಟ್ ಕೊಟ್ಟರು.ಕೂಡಲ ಸಂಗಮ ಸ್ವಾಮೀಜಿ ಹೆದರುತ್ತಾರೆ, ಮತ್ತೊಬ್ಬ ಸ್ವಾಮೀ ರೀತಿ ಧೈರ್ಯ ಇಲ್ಲ
ಇದು ಕಾಂಗ್ರೆಸ್ ಬಿಜೆಪಿ ಚುನಾವಣೆ ಅಲ್ಲ.ಈ ಚುನಾವಣೆಯಲ್ಲಿ ನಾವು ಬಿಜೆಪಿಗೆ ಬೆಂಬಲ ನೀಡಬೇಕು
ಎಂಪಿ ಟಿಕೆಟ್ ಕೊಟ್ಟಿಲ್ಲ ಎಂದು ಇಷ್ಟೊಂದು ಕೆಡಿಸಿದ್ದಾರೆ ,
ನಮಗೆ ಎಂಪಿ ಟಿಕೆಟ್ ಗಿಂತ, ಮೀಸಲಾತಿ ಮುಖ್ಯ.
ರಾಜ್ಯದಲ್ಲಿ ಕಾಂಗ್ರೆಸ್ ಗೆ ಪಂಚಮಸಾಲಿಯವರು ಯಾರು ಮತ ನೀಡಬಾರದು ಎಂದು ತಿರ್ಮಾನ ಮಾಡಲಾಗಿದೆ
ನಾನು ಸಿಎಂ ಆಗ್ತೆನೊ ಬಿಡ್ತೆನೊ ಗೊತ್ತಿಲ್ಲ, ಆದರೆ ಮೀಸಲಾತಿ ಹೋರಾಟ ಬಿಡಲಾರೆ.ಸಮಾಜಕ್ಕೆ ನ್ಯಾಯ ಸಿಗಬೇಕಂದ್ರೆ ಕೂಡಲ ಸಂಗಮ ಸ್ವಾಮೀಜಿಯಿಂದ ಮಾತ್ರ ಸಾಧ್ಯನಾವು ಯಾವತ್ತೂ ಮೋಸ ಮಾಡುವುದಿಲ್ಲ, ಆ ರೀತಿ ಮೋಸ ಮಾಡಿದ್ರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದರು.
ವಚನಾನಂದ ಸ್ವಾಮೀಜಿಗೆ ಯತ್ನಾಳ್ ಟಾಂಗ್
ಬಿಜೆಪಿಗೆ ಓಟು ಹಾಕಬೇಡ ಎನ್ನುವುದಕ್ಕೆ ಇವರ್ಯಾರು
ಹರಿಹರ ವಚನಾನಂದ ಸ್ವಾಮೀಜಿಗೆ ಯತ್ನಾಳ್ ಟಾಂಗ್ ನೀಡಿದರು. ನಮ್ಮ ರಾಜ್ಯದಲ್ಲಿ ಮೂರು ಕುಟುಂಬ ಇವೆ
ವೀರಶೈವ ಲಿಂಗಾಯತ ಬಿಟ್ಟರೆ ಏನ್ ಕಟ್ಟಿದ್ದಾರೆ. ಸಿದ್ದರಾಮೋತ್ಸವಕ್ಕೆ ಕೌಂಟರ್ ಕೊಡ್ತೆವಿ ಅಂತ ಸಮಾವೇಶ ಮಾಡಿದ್ರು. ಸಮಾವೇಶದ ಶಕ್ತಿ ಪ್ರದರ್ಶನದಲ್ಲಿ 8 ಸಾವಿರ ಜನ ಸೇರಿದ್ರು ಎಂದು ಹೇಳುವ ಮೂಲಕ ದಾವಣಗೆರೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಸಮಾವೇಶ ಕುರಿತು ವ್ಯಂಗ್ಯವಾಡಿದರು. ಅಲ್ಲದೆಎಲ್ಲಾ ಮನೆಯವರೆ ಆಗಬೇಕು ಎಂದು ಶಾಮನೂರು ಶಿವಶಂಕರಪ್ಪಗೆ ಟಕ್ಕರ್ ದಾವಣಗೆರೆಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಕೌಂಟರ್ ನೀಡಿದರು.