
ಹರಿಹರ ; ನೀವೇನಾದ್ರೂ ವಾಕಿಂಗ್ ಮಾಡುವ ವೇಳೆ ಮಾತನಾಡುತ್ತಾ ನಾನು ಇಂದು ಇರೋದಿಲ್ಲ. ಊರಿಗೆ ಹೋಗುತ್ತೇನೆಯೆಂದು ಹೇಳಬೇಕಾದರೆ ಸ್ವಲ್ಪ ಎಚ್ಚರಿಕೆಯಿಂದ ಇರೀ…ಅಷ್ಟಕ್ಕೂ ಈ ಮಾತು ಹೇಳೊದಕ್ಕೆ ಕಾರಣವಿದೆ. ಅದೇನೂ ಅಂತೀರಾ ಈ ಸ್ಟೋರಿ ನೋಡಿ..
ಎಲ್ಲರಿಗೂ ತಿಳಿದಂತೆ ಕುಂಭ ಮೇಳಕ್ಕೆ ಚಿಕ್ಕ ವಯಸ್ಸಿನಿಂದ ಹಿಡಿದು ವೃದ್ದರತನಕ ಹೋಗಿದ್ದಾರೆ..ಹೀಗಿರುವಾಗ ವೃದ್ದೆಯೊಬ್ಬರು ವಾಕಿಂಗ್ ಮಾಡುವಾಗ ನಾನು ಇಂದು ಕುಂಭ ಮೇಳಕ್ಕೆ ಹೋಗುತ್ತೇನೆ ಎಂದಿದ್ದಾರೆ. ಹೀಗಿರುವಾಗ ಇಂದಿನಿಂದ ಈ ಮಾತನ್ನು ಕೇಳಿದ ಕಳ್ಳ ಮನೆಗೆ ನುಗ್ಗಿ ಚಿನ್ನಾಭರಣ ಕದ್ದಿದ್ದ.ಅಲ್ಲದೇ ದಾವಣಗೆರೆ ವಿದ್ಯಾನಗರದಲ್ಲಿ ಈತ ಮನೆ ಮಾಡಿದ್ದು, ಕಳ್ಳತನ ಮಾಡುವುದೇ ಕುಲಕಸಬಾಗಿದ್ದು, ಹರಿಹರದ ನಾಕಾ ಬಂಧಿಯಲ್ಲಿ ಡಿ.ಎಸ್ಪಿ ಬಸವರಾಜ್ ನೇತೃತ್ವದ ತಂಡಕ್ಕೆ ಸಿಕ್ಕಿಬಿದ್ದಿದ್ದಾನೆ.
ರಾಣೆಬೆನ್ನೂರಿನ ಗಾರ್ಮೇಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಆಕಾಶ್ ಮುದೋಳಕರ (23) ಬಂಧಿತ ಆರೋಪಿಯಾಗಿದ್ದು,ಆರೋಪಿಯಿಂದ 123.5 ಗ್ರಾಂ ಬಂಗಾರ 59.72 ಗ್ರಾಂ ತೂಕದ ಬೆಳ್ಳಿ ಲೋಟ ಎರಡು ಮೋಟಾರ್ ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಮತ್ತೊಬ್ಬ ಆರೋಪಿಯಾದ ರಾಣೆಬೆನ್ನೂರಿನ ಮಾಸೂರು ರಟ್ಟಿಹಳ್ಳಿ ನಿವಾಸಿ ಪ್ರವೀಣ ಆನಂದಪ್ಪ ಹಡಗಲಿ ತಲೆ ಮರೆಸಿ ಕೊಂಡಿದ್ದಾನೆ. ಈ ಕಳ್ಳರು ವಿವಿಧ ಜಿಲ್ಲೆಗಳಲ್ಲಿ ಮನೆ ಕಳ್ಳತನ ಮಾಡುತ್ತಿದ್ದರು. ಆರೋಪಿಯೊಬ್ಬನನ್ನು ಬಂಧಿಸಿದ ಹರಿಹರ ನಗರಠಾಣೆ ಪೊಲೀಸರು 10,30,000ರೂ ಮೊತ್ತದ ಬಂಗಾರ ಬೆಳ್ಳಿ ಸೇರಿದಂತೆ ವಿವಿಧ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಇವರು ಸಿಕ್ಕಿದ್ದು ಹೇಗೆ
ಇಬ್ಬರೂ ಕಳ್ಳತನ ಮಾಡಿದ ಮೋಟಾರ್ ಬೈಕ್‍ನಲ್ಲಿ ಬರುತ್ತಿದ್ದಾಗ ಅನುಮಾನಗೊಂಡ ಪೋಲೀಸರು ತಡೆದು ನಿಲ್ಲಿಸಿ ವಿಚಾರಣೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.


ಆರೋಪಿಗಳ ಹಿನ್ನೆಲೆ ; ದಾವಣಗೆರೆಯ ವಿದ್ಯಾನಗರ ಠಾಣಾ ವ್ಯಾಪ್ತಿಯಲ್ಲಿ 123.5 ಗ್ರಾಂ ಬಂಗಾರದ ಆಭರಣ 59.72 ಗ್ರಾಂ ತೂಕದ ಒಂದು ಬೆಳ್ಳಿ ಲೋಟ, ಕೃತ್ಯಕ್ಕೆ ಬಳಕೆ ಮಾಡಿದ ಹೈಡ್ರಾಲಿಕ್ ಕಟ್ಟರ್ ಮಿಷಿನ್, ಬ್ಯಾಡಗಿ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಎನ್.ಎಸ್-200 ಮೋಟಾರ್ ಬೈಕ್ ಹರಿಹರ ನಗರ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಹೊಂಡಾ ಶೈನ್ ಮೋಟಾರ್ ಬೈಕ್ ಶಿವಮೊಗ್ಗ ಜಿಲ್ಲೆ ವಿನೋಬನಗರ ಠಾಣೆಯಲ್ಲಿ-02,ತೀರ್ಥಹಳ್ಳಿ ಯಲ್ಲಿ -01 ಸರಗಳ್ಳತನ ಪ್ರಕರಣಗಳು. ಹುಬ್ಬಳ್ಳಿ- ದಾರವಾಡ- ಕೇಶವಪುರ ಠಾಣೆ-01 ವ್ಯಾಪ್ತಿಯಲ್ಲಿ ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ತಿಳಿದು ಬಂದಿದೆ.
ಹರಿಹರದ ಜೆ.ಸಿ. ಬಡಾವಣೆಯ ಸಮಾಜ ಸೇವಕ ಪಿ.ಎನ್ ಗೋಪಿ ಇವರು ತಮ್ಮ ಹೊಂಡಾ ಶೈನ್ ಬೈಕ್ ಕಳ್ಳತನವಾದ ಬಗ್ಗೆ ಹರಿಹರ ನಗರ ಠಾಣೆ ಪ್ರಕರಣ ದಾಖಸಿದ್ದರು.
ಸದರಿ ಪ್ರಕರಣದ ಆರೋಪಿತರ ಪತ್ತೆ ಹಾಗೂ ಸ್ವತ್ತಿನ ಪತ್ತೆಗಾಗಿ ಹೆಚ್ಚುವರಿ ಪೋಲೀಸ್ ಅಧೀಕ್ಷಕ ವಿಜಯಕುಮಾರ ಕುಮಾರ್ ಎಂ ಸಂತೋಷ್ ಹಾಗೂ ಪೋಲೀಸ್ ಉಪಾಧೀಕ್ಷಕ ಗ್ರಾಮಾಂತರ ಉಪ-ವಿಭಾಗದ ಜಿ.ಮಂಜುನಾಥರ ಮಾರ್ಗದರ್ಶನದಲ್ಲಿ ಹರಿಹರ ನಗರ ಠಾಣೆ ಪಿಐ ಎಸ್.ದೇವಾನಂದ ನೇತೃತ್ವದಲ್ಲಿ ಪಿ.ಎಸ್.ಐ ಜಿ.ಎಸ್.ವಿಜಯ್, ಶ್ರೀಪತಿ ಗಿನ್ನಿ ಪಿ.ಎಸ್.ಐ, ಅಪರಾಧ ವಿಭಾಗ ಸಿಬ್ಬಂದಿಗಳಾದ ನಾಗರಾಜ ಸುಣಗಾರ, ಸಿದ್ದೇಶ.ಹೆಚ್, ರವಿ.ಆರ್, ರುದ್ರಸ್ವಾಮಿ.ಕೆ.ಸಿ, ಹನುಮಂತಪ್ಪ ಗೋಪನಾಳ, ರವಿನಾಯ್ಕ್, ಶಾಂತರಾಜ್.ಎಂ.ಎಸ್, ಸಿದ್ದರಾಜು, ರವಿ.ಕೆ, ಚಾಲಕ ರಂಗನಾಥ ಪ್ರಕರಣದಲ್ಲಿ 1ನೇ ಆರೋಪಿ ತಲೆಮರೆಸಿಕೊಂಡಿರುತ್ತಾನೆ ಆತನ ಪತ್ತೆಕಾರ್ಯದಲ್ಲಿ ತಂಡದ ಕಾರ್ಯಾಚರಣೆ ಮುಂದುವರೆದಿರುತ್ತದೆ.
ಮೇಲ್ಕಂಡ ಪ್ರಕರಣದಲ್ಲಿ ಆರೋಪಿಗಳ ಪತ್ತೆಕಾರ್ಯದಲ್ಲಿ ಯಶಸ್ವಿ ಯಾದ ಅಧಿಕಾರಿ ಸಿಬ್ಬಂದಿಯವರನ್ನು ಪೋಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ರವರು ಪ್ರಶಂಸಿದ್ದಾರೆ.
….