ಹೂವಿನಹಡಗಲಿ (ವಿಜಯನಗರ)
ಬರಗಾಲದಿಂದ ತತ್ತರಿಸಿದ್ದ ರಾಜ್ಯಕ್ಕೆ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರಲಿಂಗೇಶ್ವರ ಕಾರ್ಣಿಕ ಜನರಿಗೆ, ರೈತಾಪಿ, ರಾಜಕೀಯದಲ್ಲಿ ಒಂದಿಷ್ಟು ನೆಮ್ಮದಿಯನ್ನು ನೀಡಿದೆ. ಹಾಗಾದ್ರೆ ಈ ವರ್ಷದ ಮೈಲಾರಲಿಂಗೇಶ್ವರನ ಕಾರ್ಣೀಕ, ಭವಿಷ್ಯವಾಣಿ ಏನು ಅಂತೀರಾ ಈ ಸ್ಟೋರಿ ನೋಡಿ…
ದೊಡ್ಡಮೈಲಾರ ಲಿಂಗೇಶ್ವರ ಕಾರ್ಣಿಕೋತ್ಸವ ಸಾಕಷ್ಟು ಭಕ್ತರು ಆಗಮಿಸಿದ್ದು ಇಲ್ಲಿನ ಗೊರವಯ್ಯ ಸಂಪಾದೀತಲೇ ಪರಾಕ್’ ಎಂದು ದೈವವಾಣಿ ನುಡಿದಿದ್ದಾರೆ.
‘ಈ ವರ್ಷ ಉತ್ತಮ ಮಳೆಯಾಗಿ ಸಮೃದ್ಧ ಬೆಳೆ ಬರುತ್ತವೆ. ರೈತಾಪಿ ಕುಟುಂಬಗಳು ಸಂತಸವಾಗಿರುತ್ತವೆಯೆಂದು ಕಾರ್ಣಿಕ ಕುರಿತು ರೈತರು ವಿಶ್ಲೇಷಿಸಿದರೆ, ವ್ಯಾಪಾರಿಗಳು ಕಾರ್ಣಿಕ ಉತ್ತಮ ವಹಿವಾಟು ನಿರೀಕ್ಷಿಸಬಹುದು ಎಂದು ವಿಶ್ಲೇಷಿಸಿದ್ದಾರೆ.
ಇನ್ನು ಮೈಲಾರಲಿಂಗೇಶ್ವರ ದೇವರ ಕಾರ್ಣಿಕದ ಬಗ್ಗೆ ಹಲವರಿಗೆ ನಂಬಿಕೆ ಇದ್ದು, ವರ್ಷದ ಭವಿಷ್ಯವಾಣಿಯಾಗಿದೆ. ಭರತ ಹುಣ್ಣಿಮೆಯಾಗಿ ಮೂರು ದಿನಕ್ಕೆ ನಡೆಯುವ ವರ್ಷದ ದೈವವಾಣಿ ಕೇಳಲು ಲಕ್ಷಾಂತರ ಜನರು ಇಲ್ಲಿಗೆ ಆಗಮಿಸುವುದು ವಿಶೇಷ.
ದೊಡ್ಡ ಮೈಲಾರ ಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನೂರಾರು ಗೊರವಪ್ಪಗಳ ಢಮರುಗದ ನಿನಾದ, ನೆರೆದಿದ್ದ ಸಾವಿರಾರು ಭಕ್ತರ ಏಳು ಕೋಟಿ.. ಏಳು ಕೋಟಿ.. ಚಹಾಂಗ ಬಲೋ.. ಭಕ್ತಿಯ ಘೋಷಮಯವಾಗಿತ್ತು.
ಬೆಳಗ್ಗೆಯಿಂದ ಮರಡಿ ಕಟ್ಟೆಯಲ್ಲಿ ಸ್ವಾಮಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ಮಧ್ಯಾಹ್ನ ಆಚರಿಸಿದ ಬೆಲ್ಲದ ಬಂಡಿ ಉತ್ಸವದಲ್ಲಿ ಭಕ್ತರು ಎತ್ತಿನ ಬಂಡಿಗಳನ್ನು ಓಡಿಸಿ ಭಕ್ತಿ ಸಮರ್ಪಿಸಿದರು. 9 ದಿನ ಉಪವಾಸ ವ್ರತ ಆಚರಿಸಿದ್ದ ಗೊರವಯ್ಯ ಕೋಟೆಪ್ಪ ಅವರನ್ನು ಪಾದಗಟ್ಟೆಯ ಮರಡಿಯಿಂದ ಮೆರವಣಿಗೆ ಮೂಲಕ ಕರೆತರಲಾಯಿತು
ಹೇಗೆ ನಡೆಯುತ್ತದೆ ಪರಾಕ್
ಡೆಂಕನಮರಡಿಯಲ್ಲಿ ಲಕ್ಷಾಂತರ ಭಕ್ತರ ಮಧ್ಯ ಆಗಮಿಸಿದ ಗೊರವಯ್ಯ ಸ್ವಾಮೀ 18 ಅಡಿ ಎತ್ತರದ ಬಿಲ್ಲನ್ನೇರಿ ಸದ್ದಲೆ ಅನ್ನುತ್ತಲೆ ಕಿಕ್ಕಿರಿದು ಸೇರಿದ ಜನರ ನಡುವೆ ಕಾರ್ಣಿಕ ನುಡಿಯುತ್ತಾನೆ. ಬಿಲ್ಲನ್ನೇರಿ ಸದ್ದಲೆ ಅನ್ನುತ್ತಲೆ ನೆರೆದಿದ್ದ ಸಾವಿರಾರು ಜನರು ಮೌನಕ್ಕೆ ಜಾರುತ್ತಾರೆ. ನಂತರ ಗೊರವಯ್ಯ ಸ್ವಾಮೀ ವರ್ಷದ ಭವಿಷ್ಯವಾಣಿ ನುಡಿದು ಬಿಲ್ಲಿನಿಂದ ಕೆಳಕ್ಕೆ ಬೀಳುತ್ತಾನೆ. ಪ್ರಸಕ್ತ ವರ್ಷ ಬಿಲ್ಲನ್ನೇರಿದ ಗೊರವಯ್ಯ ಚಿನ್ನದ ಚೊಂಬು ತುಂಬಿ ತುಳುಕಿತಲೇ ಪರಾಕ್ ಎಂದು ನುಡಿದರು.
ರೈತರಿಗೆ ಸಂತಸ
ಸುಮಾರು ವರ್ಷಗಳಿಂದ ರೈತರು ಮೈಲಾರಲಿಂಗೇಶ್ವರ ದೇವರ ಕಾರ್ಣಿಕವನ್ನು ಕೇಳಿ ಮಳೆ ಬೆಳೆ ನಿರ್ಧರಿಸುತ್ತಾರೆ. ರಾಜಕೀಯವಾಗಿಯೂ ಮೈಲಾರಲಿಂಗೇಶ್ವರ ದೇವರ ಕಾರ್ಣಿಕ ಮಹತ್ವ ಪಡೆದುಕೊಂಡಿದೆ. ಈ ಬಾರಿಯ ಕಾರ್ಣಿಕ ವಾಣಿ ಆಲಿಸಿದ ಕಿಕ್ಕಿರಿದು ಸೇರಿದ್ದ ರೈತಾಪಿ ವರ್ಗದ ಜನರಿಗೆ ಮಳೆ ಬೆಳೆಗಳು ಉತ್ತಮವಾಗಲಿದೆ. ಕಳೆದ ವರ್ಷ ಮಳೆ ಸರಿಯಾಗಿ ಆಗಿರಲಿಲ್ಲ, ಈ ಭಾರೀ ಮಳೆ ಬೆಳೆ ಚೆನ್ನಾಗಿ ಆಗಲಿದೆ ಎಂದು ಹಿರಿಯರು ಮಾತನಾಡಿಕೊಳ್ಳುತ್ತಿದ್ದು ಕಂಡು ಬಂತು. ಒಟ್ಟಾರೆ ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿರೋ ಮೈಲಾರಲಿಂಗೇಶ್ವರ ದೇವರ ಕಾರ್ಣಿಕ ವರ್ಷದ ಭವಿಷ್ಯವಾಣಿ ಅಂತಾನೆ ಫೇಮಸ್ ಆಗಿದೆ. ಸಾಕ್ಷಾತ್ ಮೈಲಾರಲಿಂಗೇಶ್ವರ ದೇವರೆ ಗೊರವಪ್ಪನ ಮೈಮೇಲೆ ಬಂದು ವರ್ಷದ ಭವಿಷ್ಯವಾಣಿ ನುಡಿಸುತ್ತಾನೆ ಅನ್ನೋದು ಕಾರ್ಣಿಕವಾಣಿ ವಿಶೇಷತೆಗೆ ಸಾಕ್ಷಿ.