ಶಿವಮೊಗ್ಗ : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಶಿವಮೊಗ್ಗ ತಾಲೂಕು ಮಟ್ಟದ ಸ್ಥಳೀಯ ಸಂಸ್ಥೆಯ ವತಿಯಿಂದ, ನೂತನವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಆಗಮಿಸಿರುವ ರಮೇಶ್ ಕೆ. ಇ. ಎಸ್., ರವರನ್ನು ಸಂಸ್ಥೆಯ ಅಧ್ಯಕ್ಷರನ್ನಾಗಿ ಕೇಂದ್ರ ಸ್ಥಾನಿಕ ಆಯುಕ್ತರಾದ ವಿಜಯ್ ಕುಮಾರ್, ಕಾರ್ಯಧ್ಯಕ್ಷ ಶ್ರೀ ಚೂಡಾಮಣಿ ಈ ಪವಾರ್ ಹಾಗೂ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಶ್ರೀ ರಾಜೇಶ್ ವಿ ಅವಲಕ್ಕಿ ರವರು ಆಹ್ವಾನಿಸಿದರು ಮತ್ತು ತಾಲ್ಲೂಕು ಮಟ್ಟದ ಚಟುವಟಿಕೆಯಲ್ಲಿ ಮಾರ್ಗದರ್ಶನ ನೀಡಲು ಕೋರಿದರು .
ಇದೇ ಸಂದರ್ಭದಲ್ಲಿ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಯುತ ರಮೇಶ್ ಅವರು ಸ್ಕೌಟ್ ಅಂಡ್ ಗೈಡ್ಸ್ ನಲ್ಲಿ ನಡೆಯುವ ಮಕ್ಕಳ ಚಟುವಟಿಕೆಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು