
ದಾವಣಗೆರೆ : ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕ, ಅಂಕಣಕಾರ ಹಾಗೂ ಪ್ರೇರಣ ಭಾಷಣಕಾರರಾದ ವೆಂಕಟೇಶ್ ಬಾಬುರ ವರಿಗೆ ಕರ್ನಾಟಕ ರಾಜ್ಯದ ಅತ್ಯಂತ ಹಳೆಯ ವಿಶ್ವವಿದ್ಯಾನಿಲಯ ವಾದ ಮೈಸೂರು ವಿದ್ಯಾನಿಲಯದ 105ನೇ ವಾರ್ಷಿಕ ಘಟಿಕೋತ್ಸವದಲ್ಲಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ ಲೋಕನಾಥ್ ರವರು ವಾಣಿಜ್ಯ ಶಾಸ್ತ್ರ ವಿಭಾಗದಲ್ಲಿ ಪಿಎಚ್ಡಿ. ಪದವಿಯನ್ನು ಪ್ರಧಾನ ಮಾಡಿದರು.
ವೆಂಕಟೇಶ್ ಬಾಬು ಅವರು ಮೈಸೂರ್ ನ ಕೆ ಎಸ್ ಎಸ್ ಸಂಶೋಧನಾ ಕೇಂದ್ರದ ಮಾರ್ಗದರ್ಶಕರಾದ ಡಾ. ಶಂಕ್ರಪ್ಪ ಎಸ್ ರವರ ಮಾರ್ಗದರ್ಶನದಲ್ಲಿ ಪರ್ಫಾರ್ಮೆನ್ಸ್ ಇವ್ಯಾಲ್ಯೂಯೇಷನ್ ಆಫ್ ಪ್ರಿಂಟಿಂಗ್ ಅಂಡ್ ಪಬ್ಲಿಸಿಂಗ್ ಇಂಡಸ್ಟ್ರಿ ಇನ್ ಇಂಡಿಯಾ. ಎಂಬ ಮಹಾ ಪ್ರಬಂಧವನ್ನು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ್ದರು.
ಗಡಿಕೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯದ ಉನ್ನತ ಶಿಕ್ಷಣ ಸಚಿವರಾದ ಶ್ರೀ ಎಮ್ ಸಿ ಸುಧಾಕರ್ ಅವರು ಅಖಿಲ ಭಾರತ ವೈದ್ಯಕೀಯ ಸಂಸ್ಥೆಯ ಪ್ರಾಧ್ಯಾಪಕರಾದ ಟಿಪಿ ಸಿಂಗ್ ರವರು ವಿಶ್ವವಿದ್ಯಾನಿಲಯದ ಕುಲಸಚಿವರುಗಳು ಎಲ್ಲಾ ಸಿಂಡಿಕೇಟ್ ಸದಸ್ಯರು ಭಾಗವಹಿಸಿದ್ದರು.


ವೆಂಕಟೇಶ್ ಬಾಬು ಅವರು ದಾವಣಗೆರೆ ನಗರದ ದಿ ಶ್ರೀ ಶಿವಾನಂದ ಸೀತಿಮನಿ ಹಾಗೂ ಶಾಂತಮ್ಮನವರ ಪುತ್ರರಾಗಿರುತ್ತಾರೆ.
ವೆಂಕಟೇಶ್ ಬಾಬು ಅವರು ಯುವಕರ ಪ್ರೇರಣೆ ಹಾಗೂ ಯುವಕರ ವಿಕತನ ಕುರಿತು ಲೇಖನಗಳನ್ನು ಹಾಗೂ ಭಾಷಣಗಳನ್ನು ಮಾಡುವುದರ ಮೂಲಕ ಸಮಾಜಕ್ಕೆ ಸೇವೆಯನ್ನು ಸಲ್ಲಿಸುತ್ತಿದ್ದಾರೆ.ಉನ್ನತ ಶಿಕ್ಷಣದಲ್ಲಿ ಮತ್ತು ಯುವ ಸಬಲೀಕರಣದಲ್ಲಿ ಇನ್ನಷ್ಟು ಉನ್ನತ ಮಟ್ಟಕ್ಕೆ ಏರಲಿ ಎಂದು ಎಲ್ಲರೂ ಹಾರೈಸಿರುತ್ತಾರೆ.

