
ದಾವಣಗೆರೆ : ದಾವಣಗೆರೆ ಒಂದಾನೊಂದು ಕಾಲದಲ್ಲಿ ಕಾಟನ್ ಸಿಟಿಗೆ ಫೇಮೇಸ್ ಆಗಿದ್ದವು. ಹೀಗಿರುವಾಗ ನಷ್ಟದ ಹಾದಿ ಹಿಡಿದಿದ್ದ ಫ್ಯಾಕ್ಟರಿಗಳು ಮುಚ್ಚತೊಡಗಿದ್ದವು. ಈ ನಡುವೆ ಕಾರ್ಮಿಕರ ಬದುಕು ಮೂರಾಬಟ್ಟೆಯಾಯಿತು. ಜೀವನ ಮಾಡುವುದೇ ಕಷ್ಟವಾಗಿತ್ತು. ಹೀಗಿದ್ದರೂ, ಹಲವು ಕಾರ್ಮಿಕರು ಬೆವರು ಸುರಿಸಿ ದುಡಿಮೆ ಮಾಡಿ ಮಕ್ಕಳನ್ನು ಓದಿಸಿದರು. ಅವರ ಬೆವರಿನ ಶಕ್ತಿಯೇ ಇಂದು ಮಕ್ಕಳ ರೂಪದಲ್ಲಿ ಶಿಲೆಯಾಗಿದೆ.
ಅಷ್ಟಕ್ಕೂ ಇಷ್ಟೊಂದು ಪೀಠಿಕೆಯಾಕುವುದಕ್ಕೂ ಕಾರಣವಿದೆ. ಈ ಕಾಟನ್ ಮಿಲ್ ನಲ್ಲಿ ಕೆಲಸ ಮಾಡಿದ ಕಾರ್ಮಿಕನ ಮಗನಿಗೆ ಡಾಕ್ಟರೇಟ್ ಪದವಿ ಸಿಕ್ಕಿದೆ.
ಹೌದು..ಸರಕಾರಿ ಪದವಿ ಪೂರ್ವ ಕಾಲೇಜಿನ ಸಹ ಪ್ರಾಧ್ಯಾಪಕ ವೆಂಕಟೇಶ್ ಬಾಬುರವರೇ ಕಾಟನ್ ಮಿಲ್ ನಲ್ಲಿ ಕೆಲಸ ಮಾಡುತ್ತಿದ್ದರವರ ಮಗ.


ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಕೋಳೂರು ಎಂಬ ಗ್ರಾಮದ ಕೃಷಿಕ ಕುಟುಂಬದ ಶಿವಾನಂದ್ ಟಿ. ಸೀತಿಮನಿ ಮತ್ತು ಶಾಂತಮ್ಮ ದಂಪತಿಗಳ ಜೇಷ್ಠ ಪುತ್ರರಾಗಿ ವೆಂಕಟೇಶ್ ಬಾಬು ಜನಿಸಿದರು. ತದನಂತರ ತಂದೆಯವರ ಕೆಲಸದ ನಿಮಿತ್ತ ದಾವಣಗೆರೆಗೆ ಬಂದಾಗ ಅವರೊಂದಿಗೆ ಇಲ್ಲಿಗೆ ಬಂದು ತಮ್ಮ ಪ್ರಾಥಮಿಕ ಪ್ರೌಢ ಮತ್ತು ಶಿಕ್ಷಣವನ್ನು ಸರ್ಕಾರಿ ಶಾಲೆಯಲ್ಲಿ ಕಲಿತರು.
ನಂತರ ತಮ್ಮ ಪಿಯು ಕಾಲೇಜು ಶಿಕ್ಷಣವನ್ನು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮತ್ತು ಬಿಕಾಂ ಪದವಿಯನ್ನು ಮಾ ಸ ಬ ಕಾಲೇಜಿನಲ್ಲಿ ಪಡೆದು ಕುವೆಂಪು ವಿಶ್ವದ್ಯಾನಿಲಯದ ದಾವಣಗೆರೆ ಶಿವಗಂಗೋತ್ರಿಯಲ್ಲಿ ಸ್ನಾತಕೋತ್ತರ ಪದವಿಯನ್ನು ವಾಣಿಜ್ಯ ಶಾಸ್ತ್ರದಲ್ಲಿ ಅತ್ಯಂತ ಶ್ರೇಣಿಯಲ್ಲಿ ಪಡೆದರು.
ವೆಂಕಟೇಶ್ ಬಾಬು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಅದರಲ್ಲೂ ವಿಶೇಷವಾಗಿ ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ತಮ್ಮದೇ ಆದ ಚಾಪನ್ನು ಮೂಡಿಸಿ ಯುವ ವಿದ್ಯಾರ್ಥಿಗಳ ಸ್ಪೂರ್ತಿಯ ಚಿಲುಮೆಯಾಗಿ ಯುವಕರಿಗೆ ಒಂದು ರೋಲ್ ಮಾಡಲಾಗಿ ತಮ್ಮ ವೃತ್ತಿ ಮತ್ತು ಪ್ರವೃತ್ತಿಯನ್ನು ಮುಂದುವರಿಸುತ್ತಿದ್ದಾರೆ.
ಯುವ ಮಿತ್ರರಾಗಿರುವ ಹಿತ ವೆಂಕಟೇಶ್ ಬಾಬುರವರು ಮೈಸೂರು ವಿಶ್ವವಿದ್ಯಾನಿಲಯದಿಂದ ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ಪಿ ಹೆಚ್ ಡಿ ಪದವಿಯನ್ನು ಪಡೆದಿರುವುದು ಸಂತಸವೇ ಸರಿ.
ವೆಂಕಟೇಶ್ ಬಾಬುರವರ ತಂದೆ ದಿವಂಗತ ಶಿವಾನಂದ್ ದಾವಣಗೆರೆಯ ಚಂದ್ರೋದಯ ಕಾಟನ್ ಮಿಲ್ ನಲ್ಲಿ ಕಾರ್ಮಿಕರಾಗಿ ಸೇರಿಕೊಂಡು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬೆವರು ಹರಿಸುತ್ತಾ ಬಂದವರು.
ಹೀಗಿರುವಾಗ ದಾವಣಗೆರೆ ಕಾಟನ್ ಮಿಲ್ ನಲ್ಲಿ ಸುಮಾರು 16 ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರದಲ್ಲಿ ಕಾರ್ಖಾನೆ ಮುಚ್ಚಿ ಹೋಗುತ್ತದೆ. ಆಗ ದಾವಣಗೆರೆಯ ಸುಮಾರು ಕಾರ್ಮಿಕ ಕುಟುಂಬಗಳು ತಮ್ಮ ತಮ್ಮ ಊರುಗಳಿಗೆ ಗುಳೆ
ಹೋದರು. ಈ ನಡುವೆ ಹಲವು ಕಾರ್ಮಿಕರು ನಿಧನ ಹೊಂದಿದರು. ಇಂತಹ ಸಮಯದಲ್ಲಿ ಬಾಬು ತಂದೆ
ಗಟ್ಟಿ ಮನಸ್ಸಿನಿಂದ ಮಕ್ಕಳನ್ನು ಓದಿಸಲೇಬೇಕೆಂಬ ದೃಢಸಂಕಲ್ಪದೊಂದಿಗೆ ಓದಿಸಿದರು.
ತಂದೆ ಶಿವಾನಂದ್ ಮತ್ತು ಶಾಂತಮ್ಮನವರು ಮರು ತಮ್ಮೂರಿಗೆ ಹೋಗದೆ ಇಲ್ಲೇ ವಿವಿಧ ರೀತಿಯ ಕೆಲಸಗಳನ್ನು ಮಾಡುತ್ತಾ ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವಲ್ಲಿ ಪಟ್ಟ ಪರಿಶ್ರಮದ ಪ್ರತಿಫಲವೇ ಬಾಬು ಸಾಧನೆಗೆ ಸ್ಫೂರ್ತಿ.
ವೆಂಕಟೇಶ್ ಬಾಬುರವರ ಹಿರಿಯ ಸಹೋದರಿ ಲಲಿತಾ ಪ್ರಸ್ತುತ ಕಲ್ಬುರ್ಗಿ ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಾಗೂ ಇವರ ಸಹೋದರ ರವಿಕುಮಾರ್ ಎಸ್ ಸಿ ಸಿತಿಮನಿ ರವರು 20 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಹೆಮ್ಮೆಯ ಸೈನಿಕನಾಗಿ ಸೇವೆಸಲ್ಲಿಸುತ್ತಿದ್ದಾರೆ.
ತಮ್ಮ ಸ್ನಾತಕೋತ್ತರ ಪದವಿಯ ನಂತರ ಶಿಕ್ಷಕ ಆಗಬೇಕೆಂದು ಹಠತೊಟ್ಟವರು. ಯಾವುದೇ ಆಸೆಗಳಿಲ್ಲದೆ ಆಕಸ್ಮಿಕವಾಗಿ ಶಿಕ್ಷಕ ವೃತ್ತಿಗೆ ತಮ್ಮನ್ನು ತೊಡಗಿಸಿಕೊಂಡ ಬಾಬುರವರು ಅಂದಿನಿಂದ ಇಲ್ಲಿಯವರೆಗೂ ಶಿಕ್ಷಣ ಕ್ಷೇತ್ರದಲ್ಲಿ ವಿಶಿಷ್ಟ ರೀತಿಯಾದ ತಮ್ಮ ಬೋಧನೆ ಹಾಗೂ ಪ್ರೇರಣಾತ್ಮಕ ಮಾತುಗಳಿಂದ ಸಾವಿರಾರು ವಿದ್ಯಾರ್ಥಿಗಳ ಸ್ಪೂರ್ತಿ ಯಾಗಿದ್ದಾರೆ.
ಆರಂಭಿಕ ಮೂರು ವರ್ಷಗಳ ಕಾಲ ಉಪನ್ಯಾಸಕನಾಗಿ ದಾವಣಗೆರೆಯ ಅಥಣಿ ಕಾಲೇಜು, ಎಸ್ ಬಿ ಸಿ ಕಾಲೇಜು ಬಿ ಎಸ್ ಸಿ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.
2007ರಲ್ಲಿ ಯುಜಿಸಿಯ ರಾಷ್ಟ್ರೀಯ ಅರ್ಥ ಪರೀಕ್ಷೆಯನ್ನು ತೇರ್ಗಡೆ ಹೊಂದಿ ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಪ್ರಾಧ್ಯಾಪಕರಾಗಿ ನೇಮಕಗೊಳ್ಳುತ್ತಾರೆ.
ವೆಂಕಟೇಶ್ ಬಾಬು ವಾಣಿಜ್ಯಶಾಸ್ತ್ರ ಬೋಧನೆಯೊಂದಿಗೆ ಇಂದಿನ ಯುವ ಪೀಳಿಗೆಯನ್ನು ಉದ್ಯೋಗಸ್ಥನಾಗಿ ಮಾಡಲು ಹಾಗೂ ಕೌಶಲ್ಯ ಭರಿತರನ್ನಾಗಿ ಮಾಡುವಂತಹ ಪ್ರಯತ್ನದಲ್ಲೂ ಕೂಡ ಸದಾ ಮುಂಚೂಣಿಯಲ್ಲಿರುತ್ತಾರೆ.
ದಾವಣಗೆರೆ ನಗರದ ಹಾಗೂ ರಾಜ್ಯದ ವಿವಿಧ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಗಳಲ್ಲಿ ಯುವ ಸ್ಪರ್ಧಾರ್ಥಿಗಳನ್ನು ಕುರಿತು ಪ್ರೇರಣ ಭಾಷಣಕಾರರಾಗಿ ಇವ್ರು ಕರ್ತವ್ಯ ನಿರ್ವಹಿಸಿರುತ್ತಾರೆ. ಇದುವರೆಗೂ ದಾವಣಗೆರೆಯ ವಿವಿಧ ಕಾಲೇಜುಗಳಲ್ಲಿ ಸ್ವರ್ಧಾತ್ಮಕ ಪರೀಕ್ಷಾ ಕೇಂದ್ರಗಳಲ್ಲಿ ಹಾಗೂ ಸರ್ಕಾರಿ ಹಾಸ್ಟೆಲ್ ಗಳಲ್ಲಿ ವಿದ್ಯಾರ್ಥಿಗಳನ್ನು ಕುರಿತು 200ಕ್ಕೂ ಹೆಚ್ಚು ಉಪನ್ಯಾಸ ನೀಡಿದ್ದಾರೆ. ಸಾವಿರಾರು ವಿದ್ಯಾರ್ಥಿಗಳು ಸರ್ಕಾರಿ ಉದ್ಯೋಗ ಪಡೆಯುವಲ್ಲಿ ಇವರು ನಿರಂತರವಾದ ಪ್ರಯತ್ನವನ್ನು ನಡೆಸುತ್ತಾ ಬಂದಿರುವುದು ವಿಶೇಷ.
ಪ್ರವೃತ್ತಿಯಲ್ಲಿ ಉತ್ತಮ ಭಾಷಣಕಾರ, ಅಷ್ಟೇ ಅಲ್ಲದೆಉತ್ತಮ ಬರಹಗಾರರು ಹೌದು. ಕನ್ನಡದ ವಿವಿಧ ಪತ್ರಿಕೆಗಳಲ್ಲಿ ವ್ಯಕ್ತಿತ್ವ ವಿಕಸನ ಸ್ಪರ್ಧಾತ್ಮಕ ಪರೀಕ್ಷೆ ಕುರಿತು ಇವರ ನಿರಂತರ ಲೇಖನಗಳನ್ನು ವಿದ್ಯಾರ್ಥಿಗಳು ಓದಿ ಸ್ಪೂರ್ತಿಗೊಂಡು ತಮ್ಮ ಜೀವನಕ್ಕೆ ದಾರಿ ಮಾಡಿಕೊಂಡಿರುವುದು ಕೂಡ ಉದಾಹರಣೆಯಾಗಿದೆ.
ಯುವಕರ ನೆಚ್ಚಿನ ಬಾಬು ಸರ್ ಆಗಿರುವ ಇವರು ತಮ್ಮ ವೃತ್ತಿಯಲ್ಲಿ ಪಿಎಚ್ಡಿ ಪದವಿ ಪಡೆಯಲು ರಾಜ್ಯದ ಹಳೆಯ ವಿಶ್ವವಿದ್ಯಾನಿಲಯವಾದ ಮೈಸೂರು ವಿಶ್ವವಿದ್ಯಾಲಯದಲ್ಲಿ ನೋಂದಣಿ ಮಾಡಿಸಿದ್ದರು. ಅವರ ನಿರಂತರ ಶ್ರಮದಿಂದ ಪಿಎಚ್ ಡಿ ಪದವಿ ಸಿಕ್ಕಿದೆ. ಮೈಸೂರ್ ವಿಶ್ವವಿದ್ಯಾನಿಲಯದ ಜೆಎಸ್ಎಸ್ ಸಂಶೋಧನಾ ಕೇಂದ್ರದಲ್ಲಿ ವಾಣಿಜ್ಯಶಾಸ್ತ್ರ ವಿಭಾಗದ ಮಾರ್ಗದರ್ಶಕರಾದ ಡಾ ಶಂಕ್ರಪ್ಪ ಎಸ್ ರವರ ಮಾರ್ಗದರ್ಶನದಲ್ಲಿ performance evaluation of digital printing and publishing industry in India ಎಂಬ ಮಹಾಪ್ರಬಂಧವನ್ನು ಮಂಡಿಸಿದರು. ಮೈಸೂರು ವಿಶ್ವವಿದ್ಯಾನಿಲವೂ ಅದನ್ನು ಅಂಗೀಕರಿಸಿ ವಾಣಿಜ್ಯ ಶಾಸ್ತ್ರ ವಿಭಾಗದಲ್ಲಿ ಇವರಿಗೆ ಪಿ ಹೆಚ್ ಡಿ ಪದವಿ ನೀಡಿದೆ. ಒಟ್ಟಾರೆ ಕಷ್ಡದಿಂದ ಬಂದ ಬಾಬು ಮೇಷ್ಟ್ರು ಕನಸು ನನಸಾಗಿದೆ..
1 Comment
Thank u Nandeesh sir