ದಾವಣಗೆರೆ : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಘಟಕದ ಕಾರ್ಯ ನಿರ್ವಾಹಕ ಸಮಿತಿಯ ಮಹಿಳಾ ಮೀಸಲು ಸ್ಥಾನಕ್ಕೆ ದಾವಣಗೆರೆಯಿಂದ ಶಶಿಕಲಾ ನಲ್ಕುದುರೆ ಮತ್ತೊಮ್ಮೆ ನಾಮಪತ್ರ ಸಲ್ಲಿಸಿದ್ದಾರೆ.
ದಾವಣಗೆರೆ ವಿಭಾಗದಿಂದ ಶಶಿಕಲಾ ನಾಮ ಪತ್ರ ಸಲ್ಲಿಸಿದ್ದಾರೆ. ಈ ಭಾಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಶಶಿಕಲಾ ಹೋರಾಟದಲ್ಲಿ ಎತ್ತಿದ ಕೈ. ರಾಜಕೀಯದಲ್ಲೂ ಅವರದ್ದೇ ಆದ ಇಮೇಜ್ ಇದ್ದು, ಮಾಯಕೊಂಡ ಭಾಗದಲ್ಲಿ ಕೈಲಾದಷ್ಟು ಸೇವೆ ಮಾಡಿದ್ದಾರೆ.
ವೀರಶೈವ ಲಿಂಗಾಯತ ತತ್ವಗಳು ಮತ್ತು ಸಂಸ್ಕೃತಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಜವಾಬ್ದಾರಿಯನ್ನು ಈ ಹಿಂದೆ ಮಾಡಿರುವುದರಿಂದ ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ. ವೀರಶೈವ ಲಿಂಗಾಯಿತ ಸಮಾಜದಲ್ಲಿ ತನ್ನದೇ ಸ್ಥಾನ ಹೊಂದಿರುವ ಶಶಿಕಲಾ ಸಮಾಜ ಬೆಳೆಸುವಲ್ಲಿ ತಮ್ಮದೇ ಪಾತ್ರವಹಿಸಿದ್ದಾರೆ. ಸಾಹಿತಿಯೂ ಆಗಿರುವ ಕಾರಣ ಲಿಂಗ ಪೂಜೆಯ ಮಹತ್ವ ತಿಳಿಸಿಕೊಡುವ ಜತೆಗೆ ಅವರು ವೀರಶೈವ ಲಿಂಗಾಯತ ಪರಂಪರೆಯನ್ನು ಜೀವನದಲ್ಲಿ ಅನ್ವಯಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ.
ಶಶಿಕಲಾ ಈ ಹಿಂದೆ ಸಮಾಜದಲ್ಲಿ ಕೆಲಸ ಮಾಡುವಾಗ ವೀರಶೈವ ಮಹಾಸಭಾದ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪ ನೇತೃತ್ಬದಲ್ಲಿ ಸಾಕಷ್ಟು ಹೋರಾಟ ನಡರಸಿದ್ದಾರೆ. ಎಲ್ಲ ಮಹಿಳೆಯರನ್ನು ಒಟ್ಟುಗೂಡಿಸಿ ಸಂಘಟನೆ ಮಾಡುವಲ್ಲಿ ಇವರ ಪಾತ್ರ ಪ್ರಮುಖ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ, ದಾವಣಗೆರೆ ಚನ್ನಗಿರಿ ತಾಲೂಕಿನ ವೀರಶೈವ ಮಹಾಸಭಾ ಚುನಾವಣೆ ಶಶಿಕಲಾ ನೇತೃತ್ವದಲ್ಲಿ ನಡೆದಿದ್ದು, ಯಶಸ್ವಿಯೂ ಆಗಿದೆ. ಈ ಎರಡು ಕ್ಷೇತ್ರಗಳನ್ನು ಇಡೀ ರಾಜ್ಯ ನೋಡುತ್ತಿದ್ದು, ವೀಕ್ಷಕರಾಗಿ ಕೆಲಸ ಮಾಡಿದ್ದಾರೆ.
ವೀರಶೈವ ಸಮಾಜ ತುಳಿತಕ್ಕೆ ಒಳಗಾಗುತ್ತಿದ್ದು, ಸಮಾಜದ ಸಂಘಟನೆಗಳು ಸಂಘಟಿತರಾಗಿ ಸಮಾಜವನ್ನು ಮತ್ತಷ್ಟು ಮೇಲೆತ್ತುವ ಪ್ರಯತ್ನ ಮಾಡಲು ಸಾಕಷ್ಟು ಪ್ರಯತ್ನ ಪಟ್ಟಿದ್ದಾರೆ.
ಸಮಾಜವನ್ನು ಹತ್ತಿಕ್ಕುವ ಪ್ರಯತ್ನ ನಡೆದಾಗ ಇದಕ್ಕೆ ಅವಕಾಶ ನೀಡದೆ ಸಂಘಟನೆಗಳ ಮೂಲಕ ಮತ್ತಷ್ಟು ಸಮಾಜವನ್ನು ಬಲಪಡಿಸುವ ಪ್ರಯತ್ನ ಮಾಡಿದ್ದಾರೆ. ಸಮಾಜ ದೊಡ್ಡದೇ ಹೊರತು ಪಕ್ಷ ಅಲ್ಲ ಎಂಬ ಧ್ಯೇಯವಾಕ್ಯವಾಗಿದ್ದು, ಸಂಘವನ್ನು ಮತ್ತಷ್ಟು ಸಧೃಡಗೊಳಿಸುವ ಮೂಲಕ ಸಮಾಜದ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಸಮಾಜದ ಹೆಸರಿಗೆ ಯಾವುದೇ ತರಹದ ಧಕ್ಕೆಗಳು ಬರದಂತೆ ಸಂಘವನ್ನು ಬಲಿಷ್ಠಗೊಳಿಸುವುದೇ ಇವರ ಉದ್ದೇಶವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಕೆಲಸ ಮಾಡಲಿ ಎಂದು ಆಶಿಸೋಣ.