ಶಿವಮೊಗ್ಗ: ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಘಟಕದ ಕಾರ್ಯಕಾರಿ ಸಮಿತಿ ಸದಸ್ಯರ ಚುನಾವಣೆಯಲ್ಲಿ ಜಿಲ್ಲೆಯಿಂದ ಸ್ಪರ್ಧಿಸಿರುವ ಏಕೈಕ ಅಭ್ಯರ್ಥಿ ಶಿಕಾರಿಪುರದ ಈರೇಶ್ ಎನ್.ವಿ. ಇವರಿಗೆ ಮತ ನೀಡಿ ಗೆಲ್ಲಿಸಲು ಇಂದು ಬಸವಕೇಂದ್ರದಲ್ಲಿ ನಡೆದ ಮಹಾಸಭಾದ ಸಭೆಯಲ್ಲಿ ನಿರ್ಧಾರ ಮಾಡಲಾಯಿತು.ಅಲ್ಲದೆ, ಮಹಾಸಭಾದ ಕೇಂದ್ರ ಸಮಿತಿ ನಿರ್ಧಾರದಂತೆ 27 ಅಭ್ಯರ್ಥಿಗಳನ್ನು ಗೆಲ್ಲಿಸಲು ತೀರ್ಮಾನಿಸಲಾಯಿತು.ಮಹಾಸಭಾದ ಜಿಲ್ಲಾ ಅಧ್ಯಕ್ಷ ರುದ್ರಮುನಿ ಸಜ್ಜನ್, ಜಿಲ್ಲಾ ನಿರ್ದೇಶಕ ಬಳ್ಳಕೆರೆ ಸಂತೋಷ್, ತಾಲೂಕು ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ಸುಧೀರ್, ವಿಜಯಕುಮಾರ್, ಸಮಾಜದ ಪ್ರಮುಖರಾದ ಸಿ.ಎಸ್. ಷಡಾಕ್ಷರಿ ಮತ್ತಿತರರು ಉಪಸ್ಥಿತರಿದ್ದರು.