*✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕*
🤍 *ಧಾರ್ಮಿಕ ವಿಚಾರ*🤍
🪷,ವರಮಹಾಲಕ್ಷ್ಮಿ ಹಬ್ಬ ತಾರೀಕು, 16/08/2024 ರಂದು ಶುಕ್ರವಾರ,
🤔,ಅಂದೇ ಏಕಾದಶಿ. ಅವತ್ತೇ ಶ್ರೀ ವರಮಹಾ ಲಕ್ಷ್ಮಿ ಹಬ್ಬ . ಏಕಾದಶಿ ಬಂದಿದ್ದರಿಂದ ಕಲಶ ಕೂಡಿಸಬಹುದು. ಸಂಕಲ್ಪ ಮಾಡಿ ಮಂತ್ರಾಕ್ಷತೆ ನೀರು ಬಿಡಬೇಕು. ಆವಾಹನೆ ಮಾಡಿ ಅರಸಿನಕುಂಕುಮಏರಿಸಬೇಕು . ಅರ್ಘ್ಯ ಪಾದ್ಯ ಮಾಡಬೇಕು. ದೇವರಪೂಜೆ ಮಾಡಿ ಒಂದು ಸಲ ತೀರ್ಥ ಲಕ್ಷ್ಮೀ ದೇವಿಗೆ ಕೊಡಬೇಕು . ಯಥಾ ಶಕ್ತಿ ನಮಸ್ಕಾರ ಮಾಡಬೇಕು. ಇಷ್ಟಕ್ಕೆ ಸೀಮಿತ ಏಕಾದಶಿ ದಿನ. ಮರುದಿನ ದ್ವಾದಶಿ ಷೋಡಶೋಪಚಾರ ಪೂಜೆ ಯಿಂದ ಪ್ರಾರಂಭಮಾಡಬೇಕು,
🪷,ದೇವಿಗೆ ಪೂಜಾ ವಿಧಿ ಪ್ರಕಾರ ಎಲ್ಲವೂ ಮಾಡಬೇಕು. ನಂತರ ಅಲಂಕಾರ , ನೈವೇದ್ಯ , ಮಂಗಳಾರತಿ , ವೈಶ್ಯ ದೇವ , ತೀರ್ಥ ಎಲ್ಲವೂನಡೆಯಬೇಕು . ದಂಪತಿಗಳಿಗೆಏನೇನುಕೊಡಬೇಕೋ,ಅದೆಲ್ಲ ದ್ವಾದಶಿ ದಿನವೇ ನಡೆಯ ಬೇಕು.ನಂತರ ಬಂದ ದಂಪತಿಗಳಿಗೆ ಭೋಜನ ನಂತರ ಮನೆಯವರು . ಎಲ್ಲವೂ ಕ್ರಮ ಬದ್ಧವಾಗಿ ನಡೆಯ ಬೇಕು. ತಪ್ಪಾದರೆ ದೇವರು ಕ್ಷಮಿಸುತ್ತಾನೆ ಆದರೆ ಅಮ್ಮನವರದು ಬಹಳ ಮಡಿ ಮಡಿ,
🤔,ಪೂಜೆಮಾಡುವಾಗ ಈ ಕೆಲವೊಂದು ಅಂಶಗಳತ್ತ ಗಮನವಿಡಬೇಕು.
👩🦰,ಮುಖ್ಯವಾಗಿ ಲಕ್ಷ್ಮಿಯ ಜೊತೆ ನಾರಾಯಣನನ್ನು ಪೂಜಿಸಬೇಕು. ಬರೀ ಲಕ್ಷ್ಮಿಯನ್ನು ಪೂಜಿಸಿದರೆ ಫಲವಿಲ್ಲ,
👩,ಇದು ಮುತ್ತೈದೆಯರೇ ಆಚರಿಸುವ ವಿಶೇಷವಾದ ವ್ರತವಾದ್ದರಿಂದ ಈ ಪೂಜೆಗೆ ಕುಳಿತುಕೊಳ್ಳುವಾಗ ರೇಷ್ಮೆ ಸೀರೆ ಉಡುವುದು ಶ್ರೇಷ್ಠ,
👩,ಇನ್ನು ಪೂಜೆಗೆ ಕುಳಿತುಕೊಳ್ಳುವಾಗ ಒದ್ದೆ ಕೂದಲಾಗಲೀ ಅಥವಾ ಕೂದಲು ಬಿಚ್ಚಿ ಹರಡಿಕೊಳ್ಳಬಾರದು. ಜಡೆ ಹಾಕಿರಬೇಕು,
🧛♀️,ಮುತ್ತೈದೆಯರಿಗೆ ಹಣೆಯಲ್ಲಿನ ಸಿಂಧೂರವೇ ಪ್ರಾಮುಖ್ಯ ವಾದ್ದರಿಂದ ಹಣೆಯಲ್ಲಿ ದೊಡ್ಡದಾದ ಕುಂಕುಮವಿರಲಿ,
🍃,ಮನೆಯ ಬಾಗಿಲಿಗೆ ಕಟ್ಟುವ ತೋರಣ ಮತ್ತು ಪೂಜೆಯಲ್ಲಿ ಬಳೆಸುವ ಬಾಳೆಯೆಲೆ ಮತ್ತು ಬಾಳೆಕಂಬಗಳು ಕೃತಕವಾಗಿ ಪ್ಲಾಸ್ಟಿಕ್ ಮಯ ವಾಗಿರದೇ ನಿಜವಾದ ಮಾವಿನ ಸೊಪ್ಪು ಹಾಗೂ ಬಾಳೆ ಎಲೆ ಮತ್ತು ಕಂದುಗಳಿದ್ದರೆ ಪೂಜೆಗೆ ನಿಜವಾದ ಸಾರ್ಥಕತೆ ದೊರೆಯುತ್ತದೆ,
🪷,ಹಬ್ಬದ ಇಡೀ ದಿನ ಮತ್ತು ಪೂಜಾ ಸಮಯದಲ್ಲಿ ಅಪಶಬ್ದ ಅಥವಾ ಅನಾವಶ್ಯಕ ದುರಾಲೋಚನೆಗಳು ಬರದಂತೆ ಎಚ್ಚರವಹಿಸ ಬೇಕು,
🪷,ಇನ್ನು ದಾನದ ರೂಪದಲ್ಲಿ ಪುರೋಹಿತರಿಗೆ ಕೊಡುವ ಸ್ವಯಂಪಾಕದಲ್ಲಿ ಕೊಡುವ ತರಕಾರಿ, ಅಕ್ಕಿ- ಬೇಳೆ ಇತ್ಯಾದಿ ಪದಾರ್ಥಗಳು ಹಾಳಾಗಿರದೆ, ಉತ್ತಮ ಗುಣಮಟ್ಟದಲ್ಲಿ ಬಳಸುವಂತೆ ಇರಬೇಕು. ಸ್ವಯಂ ಪಾಕ ಪಡೆದವರು ಕನಿಷ್ಠ ಒಂದು ಹೊತ್ತಿನ ಅಡುಗೆ ಮಾಡಿಕೊಂಡು ಊಟ ಮಾಡುವಂತಿರಬೇಕು.
🪷,ಇನ್ನು ಮುತ್ತೈದೆಯರಿಗೆ ಕೊಡುವ ಸೀರೆ ಮತ್ತು ಕುಪ್ಪಸದ ಕಣ ಅಥವಾ ಬ್ರಾಹ್ಮಣರಿಗೆ ನೀಡುವ ಪಂಚೆ- ಶಲ್ಯ ಇತ್ಯಾದಿ ವಸ್ತ್ರಗಳು ಥರಿಸಲಿಕ್ಕೆ ಯೋಗ್ಯವಾಗಿರು ವಂತಿರಬೇಕು.
🪷,ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟು ಕೊಂಡು ಶ್ರಧ್ಧಾ ಭಕ್ತಿಯಿಂದಪೂಜಿಸಿದಲ್ಲಿಮಾತ್ರವೇ,ಪೂಜೆಯಸಿದ್ಧಿಗಳುಪೂಜಿಸಿದವರಿಗೆ,ಲಭಿಸಿಅದರಿಂದಅವರ ಸಕಲ ಆರ್ಥಿಕ ಬಾಧೆಗಳು ನಿವಾರಣೆಯಾಗಿ. ವ್ಯಾಪಾರ ಅಭಿವೃದ್ಧಿ ಆಗಿ, ಮನೆಯಲ್ಲಿ ಸಕಲ ಸೌಭಾಗ್ಯ-ಸಂಪತ್ತು ಅಭಿವೃದ್ಧಿ ಆಗು ತ್ತದೆ.ಆದರೆ ಇಂದು ಬಹುತೇಕ ಪೂಜೆ ಪುನಸ್ಕಾರಗಳು ಅದರಲ್ಲೂ ವಿಶೇಷವಾಗಿ ವರಮಹಾ ಲಕ್ಷ್ಮೀ ಹಬ್ಬದಲ್ಲಿಭಕ್ತಿಗಿಂತ,ಆಡಂಬರವೇ,ಹೆಚ್ಚಾಗಿ ದೇವರಪೂಜೆಗಿಂತ ತಮ್ಮ ಸಿರಿ ಸಂಪತ್ತುಗಳನ್ನು ಪ್ರದರ್ಶಿಸುವ ಹಬ್ಬವಾಗ ಬಾರದು.
ಬಹುತೇಕರು ತಮ್ಮ ಮನೆಯಲ್ಲಿರುವ ಎಲ್ಲಾ ಒಡವೆಗಳನ್ನು ಮತ್ತು ಇನ್ನೂ ಕೆಲವರ ಮನೆಗಳಲ್ಲಿ ದೇವರ ಮುಂದೆ ಲಕ್ಷಾಂತರ ಹೊಸ ಹೊಸಾ ಗರಿ ಗರಿ ನೋಟು ಗಳನ್ನು ಪ್ರದರ್ಶನ ಕ್ಕಿಡುವುದು ಅಷ್ಟು ಸಮಂಜಸನ ಯೋಚನೆ ಮಾಡಿ, 🙏💐
🚩