


ಶಿವಮೊಗ್ಗ : ಶಿವಮೊಗ್ಗದಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಶಿವಮೊಗ್ಗ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.
ವಾಲ್ಮೀಕಿ ನಿಗಮದ ಅಭಿವೃದ್ಧಿ ಅಧಿಕಾರಿಗಳಾದ ನಿಗಮ ಮಂಡಳಿ ನಿರ್ದೇಶಕ ಎ 1 ಆರೋಪಿ ಪದ್ಮನಾಭ್, ಹಾಗೂ ಮಂಡಳಿ ಅಕೌಂಟೆಂಟ್ ಸುಪರ್ವೈಸರ್ ಪರಶುರಾಮ್‌ರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ಸಿಐಡಿ ಡಿ.ವೈ.ಎಸ್.ಪಿ. ಮೊಹಮ್ಮದ್ ರಫಿ ನೇತೃತ್ವದ ತಂಡ, 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರು ಪಡಿಸಿತ್ತು. ನಂತರ ಶಿವಮೊಗ್ಗದ 2 ನೇ ಹೆಚ್ಚುವರಿ ನ್ಯಾಯಾಲಯ ಈ ಆರೋಪಿ ಅಧಿಕಾರಿಗಳಿಗೆ ಜುಲೈ 3 ರವರೆಗೆ ಸಿಐಡಿ ವಶಕ್ಕೆ ನೀಡುವುದಾಗಿ ಆದೇಶ ಹೊರಡಿಸಿತು.
