ಶಿವಮೊಗ್ಗ.
ಶಿವಮೊಗ್ಗದ ರಾಷ್ಟ್ರಕವಿ ಕುವೆಂಪು ವಿಮಾನ ನಿಲ್ದಾಣಕ್ಕೆ ನಾಮಫಲಕ ಅಳವಡಿಸಲು ಕೋರಿ ಇಂದು ಜಿಲ್ಲಾಡಳಿತದ ಮೂಲಕ ಏಪೆರ್Çೀರ್ಟ್ ಅಥಾರಿಟಿಗೆ ರಾಜ್ಯ ನಾಗರಿಕರ ರಕ್ಷಣಾ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು.
2023ರ ಫೆಬ್ರವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಮಾನ ನಿಲ್ದಾಣವನ್ನು ಉದ್ಘಾಟನೆ ಮಾಡಿದರು. ಅದಾದ ನಂತರ ಶಿವಮೊಗ್ಗದಿಂದ ದೇಶದ ವಿವಿಧಡೆ ವಿಮಾನ ಹಾರಾಟ ಸಹ ಆರಂಭವಾಗಿದ್ದು ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ವಿಮಾನ ನಿಲ್ದಾಣ ನಿಮ್ಮ ಹೆಸರನ್ನು ಇಟ್ಟಿರುವುದು ಸಹ ಎಲ್ಲರಿಗೂ ತಿಳಿದಿದೆ. ಆದರೆ ಈ ಹೆಸರು ಕೇವಲ ವಿಮಾನದ ಟಿಕೆಟ್ ಬುಕ್ ಮಾಡುವಾಗ ಮತ್ತು ಟಿಕೆಟ್ ನಲ್ಲಿ ಮಾತ್ರ ತೋರಿಸುತ್ತಿದ್ದು ಭವ್ಯ ವಿಮಾನ ನಿಲ್ದಾಣದ ಮುಖ್ಯ ದ್ವಾರದಲ್ಲಾಗಲಿ ಮತ್ತು ಬೇರೆಲ್ಲೂ ನಾಮಫಲಕಗಳನ್ನು ಅಳವಡಿಸಿಲ್ಲ ಎಂದು ಹೇಳಿದರು.
ಕೂಡಲೇ ವಿಮಾನ ನಿಲ್ದಾಣದ ಮುಖ್ಯದ್ವಾರ ಮತ್ತು ವಿಮಾನ ನಿಲ್ದಾಣಕ್ಕೆ ಬರುವ ರಸ್ತೆ ಸೇರಿದಂತೆ ವಿಮಾನ ನಿಲ್ದಾಣದ ಒಳಗೆ ನಾಮಫಲಕಗಳನ್ನು ಅಳವಡಿಸಲು ಕೋರಿದರು.
ಈ ಸಂದರ್ಭದಲ್ಲಿ ಸಮಿತಿಯ ಪ್ರಮುಖರಾದ ಕೆ. ಶೇಖರ್, ಆರ್. ರಾಘವೇಂದ,್ರ ಶಿವಮೊಗ್ಗ ವಿನೋದ್, ಲಕ್ಷ್ಮಿಕಾಂತಪ್ಪ, ಸತ್ಯನಾರಾಯಣ್, ಬಾಬು ಉಪಸ್ಥಿತರಿದ್ದರು