ದಾವಣಗೆರೆ : ನಗರದ ಹಳೆಯ ಭಾಗದ ಬೇತೂರು ರಸ್ತೆಯಲ್ಲಿ ಗಣೇಶನ ವಿಸರ್ಜನೆ ಸಂದರ್ಭದಲ್ಲಿ ಆದ ಗಲಭೆ ಸಂಬಂಧ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಗಲಭೆ ಸ್ಥಳಕ್ಕೆ ಭೇಟಿ ನೀಡಿ ಬಿಜೆಪಿ ಕಾರ್ಯ ಕರ್ತರೊಂದಿಗೆ ಒಂದಿಷ್ಟು ಚರ್ಚೆ ನಡೆಸಿದರು. ಅಲ್ದೆ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿ ತಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲು ಆಗ್ರಹಿಸಿದರು.
ಹಿಂದೂ ಕಾರ್ಯಕರ್ತರ ಮೇಲೆ ಕಲ್ಲು ಹಾಗೂ ಬಾಟಲ್ ಗಳನ್ನು ಎಸೆದು ಹಿಂದೂ ಯುವಕರ ಮೇಲೆ ಹಲ್ಲೆ ಮಾಡಿರುವ ಘಟನೆಯನ್ನು ನಾನು ಖಂಡಿಸುತ್ತೇನೆ.
ಅಲ್ಲದೇ ಹಲ್ಲೆ ನಡೆಸಿದವರ ವಿರುದ್ಧ ತಕ್ಷಣ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು. ಇನ್ನು ಹಿಂದೂ, ಬಿಜೆಪಿ ಕಾರ್ಯರ್ತರನ್ನು ಭೇಟಿ ಮಾಡಿದ ಸಂಸದರು ನಿಮ್ಮೊಂದಿಗೆ ನಾನು ಇರುತ್ತೇನೆ ಎಂದು ಸ್ಪಷ್ಟಪಡಿಸಿದರು.
ದಾವಣಗೆರೆ ನಗರದ ಜನರು ಶಾಂತಿಪ್ರಿಯರು. ಸಾಮರಸ್ಯದಿಂದ ಜೀವನ ಸಾಗಿಸಬೇಕು.
ಯಾವುದೇ ಕಾರಣಕ್ಕೂ ಗಲಭೆ ಆಗಬಾರದು. ಪೊಲೀಸರು ಗಲಭೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು .ಎರಡೂ ಕೋಮಿನ ಜನರು ಶಾಂತಿಯುತವಾಗಿರಬೇಕು. ಕಾನೂನು ಕೈಗೆತ್ತಿಕೊಳ್ಳಬಾರದು. ಗಲಾಟೆ ಮಾಡುವುದರಿಂದ ಯಾರಿಗೂ ಅನುಕೂಲವಾಗದು. ಬಡವರು, ವ್ಯಾಪಾರಿಗಳು ಸೇರಿದಂತೆ ಎಲ್ಲಾ ವರ್ಗದವರಿಗೂ ತೊಂದರೆ ಆಗುತ್ತಿದೆ. ಪೊಲೀಸರು ತಪ್ಪು ಯಾರೇ ಮಾಡಿದ್ದರೂ ಮುಲಾಜಿಲ್ಲದೇ ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ನಾಯಕರಾದ ವೀರೇಶ್, ಶಿವಪ್ರಕಾಶ್, ಯಶವಂತ್ ರಾವ್ ಜಾಧವ್ ಶ್ರೀನಿವಾಸ್ ದಾಸಕರಿಯಪ್ಪ, ಶಿವನಗೌಡ ಪಾಟೀಲ್ ಸೇರಿದಂತೆ ಇತರರು ಇದ್ದರು.