ದಾವಣಗೆರೆ : ಬಿಜೆಪಿ ರಾಜ್ಯ ಅಧ್ಯಕ್ಷರಾಗಿ ವಿಜಯೇಂದ್ರ ಅಧಿಕಾರ ವಹಿಸಿಕೊಂಡ ಮೇಲೆ ಬಿಜೆಪಿ ಮನೆಯೊಂದು ಮೂರು ಬಾಗಿಲು ಆಗಿದೆ. ಕೆಲ ನಾಯಕರು ಪದೇಪದೆ ವಿಜಯೇಂದ್ರ ಬಗ್ಗೆ ಅಪಸ್ವರ ಎತ್ತುತ್ತಿದ್ದಾರೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿಜಯೇಂದ್ರ ವಿರುದ್ಧ ಮುಗಿ ಬಿದ್ದಿದ್ದಾರೆ. ಈ ನಡುವೆ ಜಾರಕಿಹೊಳಿ ಬೆಂಬಲಕ್ಕೆ ಬಿಜೆಪಿಯ ಹಿರಿಯ ಉನ್ನತ ನಾಯಕ ನಿಂತಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾದ್ರೆ ಡೆಲ್ಲಿ ಆ ನಾಯಕ ಯಾರು? ಅವರ ಅಸಂತೋಷಕ್ಕೆ ಕಾರಣವೇನು? ಈ ಕುರಿತುಅನಂತ್ ಕುಮಾರ್ ನಾಯಕತ್ವದಲ್ಲಿ ಬಿಜೆಪಿಯ ಸುವರ್ಣ ಯುಗ ಹೊಂದಿತ್ತು ಎಂದು ರಮೇಶ್ ಜಾರಕಿಹೊಳಿ ಹೊಗಳಿರುವುದು ಪಕ್ಷದಲ್ಲಿ ಬಿರುಗಾಳಿ ಎಬ್ಬಿಸಿದೆ. 2019ರವರೆಗೆ ಕಾಂಗ್ರೆಸ್ ನಲ್ಲಿದ್ದ ಜಾರಕಿಹೊಳಿಗೆ ಆ ಅವಧಿಯಲ್ಲಿ ಬಿಜೆಪಿಯ ಆಂತರಿಕ ವಿಚಾರ ಬಗ್ಗೆ ಹೇಗೆ ತಿಳಿದಿತ್ತು ಎಂದು ಬಿಜೆಪಿಯ ಒಳಗಿನವರಿಗೆ ಕಾಡುತ್ತಿದೆ. ಕೆಲ ಮಾಹಿತಿ ಪ್ರಕಾರ ತೆರೆಮರೆಯಲ್ಲಿ ಡೆಲ್ಲಿ ನಾಯಕನೊಬ್ಬ ಭಿನ್ನಮತಗೆ ಕಾರಣರಾಗಿದ್ದಾರೆ.
ಜಾರಕಿಹೊಳಿ ಮತ್ತು ಬಸನಗೌಡ ಯತ್ನಾಳ್ ಸೇರಿ ಕೆಲ ನಾಯಕರು ವಿಜಯೇಂದ್ರ ನಾಯಕತ್ವದ ಬಗ್ಗೆ ಆಗಾಗ್ಗೆ ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ. ಡೆಲ್ಲಿಯಲ್ಲಿರುವ ಅಸಂತೋಷದ ವ್ಯಕ್ತಿ ಇವರಿಗೆ ರಕ್ಷಣ ನೀಡುತ್ತಿದ್ದಾರೆ. ಭಿನ್ನಮತ ಹುಟ್ಟುಹಾಕುತ್ತಿರುವ ರಾಜ್ಯ ಬಿಜೆಪಿ ನಾಯಕರ ಮೇಲೆ ಕೇಂದ್ರದ ಹಿರಿಯ ನಾಯಕರು ಯಾವುದೇ ರೀತಿಯ ಕ್ರಮ ಕೈಗೊಳ್ಳದಂತೆ ಆ ವ್ಯಕ್ತಿ ರಕ್ಷಣೆ ನೀಡುತ್ತಿದ್ದಾರೆ. ಹೀಗಾಗಿ ಭಿನ್ನಮತೀಯ ನಾಯಕರು ಯಾವುದೇ ಭಯವಿಲ್ಲದೆ ವಿಜಯೇಂದ್ರ ವಿರುದ್ಧ ಹರಿಹಾಯುತ್ತಿದ್ದಾರೆ.
ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೀಡುತ್ತಿರುವ ಪ್ರತಿಕ್ರಿಯೆ ಇನ್ನಷ್ಟು ಕುತೂಹಲ ಹೆಚ್ಚಿಸಿದೆ. ಜಾರಕಿಹೊಳಿ ಪಕ್ಷ ಮತ್ತು ಸಿದ್ಧಾಂತದೊAದಿಗೆ ತೊಡಗಿಸಿಕೊಂಡಿರುವುದು ಒಳ್ಳೆಯದು. ಬಿಜೆಪಿ ಶಿಸ್ತಿನ ಪಕ್ಷ. ನನಗೆ ಯಾರೇ ಏನೆಂದರೂ ಪಕ್ಷಕ್ಕಾಗಿ ಸಹಿಸಿಕೊಳ್ಳುತ್ತೇನೆ ಎಂದು ಹೇಳುವ ಮೂಲಕ ಹಿರಿತನ ಮೆರೆದಿದ್ದಾರೆ.
ದೆಹಲಿಯಲ್ಲಿ ಮಹತ್ವದ ಪಾತ್ರವಹಿಸಿದ್ದರೂ ಸ್ಥಳೀಯ ಚುನಾವಣೆಯಲ್ಲಿ ಸ್ವಂತ ಬಲದಿಂದ ಗೆಲ್ಲಲು ಹರಸಾಹಸ ಪಡುತ್ತಿರುವ ಅಸಂತೋಷದ ವ್ಯಕ್ತಿಯೊಬ್ಬರು ಭಿನ್ನಮತೀಯರ ಬೆಂಬಲಕ್ಕೆ ನಿಂತಿದ್ದಾರೆ ಎದು ಕೆಲಬಿಜೆಪಿ ನಾಯಕರು ಹೇಳುತ್ತಾರೆ. ಈ ನಾಯಕ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ನಿಕಟ ಸಂಬAಧವನ್ನು ಹೊಂದಿದ್ದರು. ಈಗ ಕರ್ನಾಟಕದಲ್ಲಿ ಬಿಜೆಪಿಯ ಅನಿರೀಕ್ಷಿತ ಯಶಸ್ಸಿನಿಂದ ಹತಾಶರಾಗಿ ಅಶಾಂತಿಯನ್ನು ಹುಟ್ಟುಹಾಕಲು ಅವರ ಪ್ರಭಾವವನ್ನು ಬಳಸುತ್ತಿದ್ದಾರೆ ಎನ್ನಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಯತ್ನಾಳ್ ತೆರೆಮರೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
ವೈಯಕ್ತಿಕವಾಗಿ ವಿಜಯೇಂದ್ರ ಜೊತೆ ಯತ್ನಾಳಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ಯಡಿಯೂರಪ್ಪನವರ ಮಗ ಎಂಬ ಕಾರಣಕ್ಕೆ ವೈರತ್ವ ಮುಂದುವರಿಸಿದ್ದಾರೆ ಎಂದು ಪಕ್ಷದ ಮೂಲಗಳು ಹೇಳುತಿವೆ.
ಒಟ್ಟಿನಲ್ಲಿ ಕೈಲಾಗದವರು ಮೈಎಲ್ಲ ಪರಚಿಕೊಂಡು ಎನ್ನುವ ಮಾತಿನಂತೆ ಡೆಲ್ಲಿಯಲ್ಲಿರುವ ಬಿಜೆಪಿಯ ಆ ಅಸಂತೋಷದ ಮಹಾನಾಯಕ ಕತೆಯಾಗಿದೆ.