
ಚನ್ನಗಿರಿ: ತುಮಕೋಸ್ ಚುನಾವಣೆ ಫೆ.9ರಂದು ನಡೆಯಲಿದ್ದು, ಜಿದ್ದಾಜಿದ್ದಿ ಜೋರಾಗಿದೆ. ಸಹಕಾರಿ ಚುನಾವಣೆಯಾದರೂ ಈಗ ರಾಜಕೀಯ ಎಂಟ್ರಿ ಕೊಡುವ ಕಾರಣ ಈಗ ರಂಗೇರುತ್ತಿದೆ
ತುಮ್ಕೋಸ್ ಸಂಸ್ಥೆ ಅಡಿಕೆ ಬೆಳೆಗಾರರ ಹಿತವನ್ನು ಕಾಪಾಡುತ್ತಾ ಬಂದಿರುವ ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಅತ್ಯುತ್ತಮ ಸಹಕಾರಿ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದಿದ್ದು, ಈಗ ಮಾಜಿ ಅಧ್ಯಕ್ಷ ಶಿವಕುಮಾರ್ ಹಾಗೂ ಹಾಲಿ ಅಧ್ಯಕ್ಷ ರವಿಕುಮಾರ್ ನಡುವೆ ನೇರಾಹಣಾಹಣಿ ನಡೆಯುತ್ತಿದೆ. ಅದರಲ್ಲೂ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಮಾಡಾಳ್ ಮಲ್ಲಿಕಾರ್ಜುನ ಹಾಗೂ ಮಾಜಿ ಶಾಸಕ ರೇಣುಕಾಚಾರ್ಯ ಆ್ಯಂಡ್ ಟೀಂ ರವಿಕುಮಾರ್ ರನ್ನು ಬೆಂಬಲಿಸಿದರೆ, ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಶಿವಕುಮಾರ್ ರನ್ನು ಬೆಂಬಲಿಸಿದೆ.
ಈ ನಡುವೆ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಜೆ.ಆರ್.ಷಣ್ಮುಖಪ್ಪ ಆರ್.ಎಂ.ರವಿಯವರನ್ನು ಬೆಂಬಲಿಸಿದೆ. ಈಗಾಗಲೇ ರಾಜ್ಯ ರಾಜಕಾರಣದಲ್ಲಿ ಈ ಎರಡು ಬಣಗಳ ನಡುವೇ ನೇರ ಹಣಾಹಣಿ ಇದ್ದು, ಈಗ ತುಮಕೋಸ್ ಚುನಾವಣೆಗೂ ಲಗ್ಗೆ ಇಟ್ಟಿದೆ.


ಅಭಿವೃದ್ಧಿ ಹೆಸರಿನಲ್ಲಿ ಮತಯಾಚನೆ ಮಾಡುತ್ತಿರುವ ಶಿವಕುಮಾರ್
ಮಾಜಿ ಅಧ್ಯಕ್ಷ ಶಿವಕುಮಾರ್ ತುಮಕೋಸ್ ಅಭಿವೃದ್ಧಿ, ಹಾಗೂ ರೈತರ ಶ್ರೇಯೋಭಿವೃದ್ದಿಗಾಗಿ ಶ್ರಮಿಸುತ್ತೇನೆ ಎಂಬ ಅಜೆಂಡಾ ಮೂಲಕ ಹಳ್ಳಿ, ಹಳ್ಳಿಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ. ಸಾಕಷ್ಟು ಹಳ್ಳಿಗಳಲ್ಲಿ ಶಿವಕುಮಾರ್ ಫ್ಲೇಕ್ಸ್ ಗಳು ರಾರಾಜಿಸುತ್ತಿದೆ. ಇನ್ನು ತುಮ್ಕೋಸ್ ಸಂಸ್ಥೆ ಅತ್ಯುತ್ತಮ ಸಹಕಾರ ಸಂಘ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದೆ. ಇಂತಹ ಸಂಸ್ಥೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಚುನಾವಣೆಯಲ್ಲಿ ನಮ್ಮ ತಂಡದ ಅಭ್ಯರ್ಥಿಗಳು ಅಧಿಕಾರ ಚುಕ್ಕಾಣಿ ಹಿಡಿಯಲು ಅವಕಾಶ ಕಲ್ಪಿಸಿಕೊಡಬೇಕು’ ಎಂದು ಮನವಿ ಮಾಡುತ್ತಿದ್ದಾರೆ. ಈ ನಡುವೆ ಶಿವಕುಮಾರ್ ರಾಜ್ಯ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದು ನುಂಗಲಾರದ ತುತ್ತಾಗಿದೆ. ಇದೇ ಅಸ್ತ್ರವನ್ನು ಎದುರಾಳಿ ರವಿಕುಮಾರ್ ತಂಡ ಬೀಸಿದೆ.
ಆರ್.ಎಂ.ರವಿಕುಮಾರ್ ನೇತೃತ್ವದ ತಂಡದಿಂದಲೂ ಭರ್ಜರಿ ಪ್ರಚಾರ
ಆರ್.ಎಂ.ರವಿಕುಮಾರ್ ಸಹ ಚುನಾವಣೆಗೆ ಭರ್ಜರಿ ಪ್ರಚಾರ ಮಾಡುತ್ತಿದ್ದು, ಮಾಜಿ ಶಾಸಕರ ಪುತ್ರ ಮಾಡಾಳ್ ಮಲ್ಲಿಕಾರ್ಜುನ್, ಮಾಡಾಳ್ ವಿರೂಪಾಕ್ಷಪ್ಪ, ಮಾಜಿ ಶಾಸಕ ರೇಣುಕಾಚಾರ್ಯ ಕೃಪಾಕಟಕ್ಷವಿದೆ. ಅಲ್ಲದೇ ಎದುರಾಳಿ ಶಿವಕುಮಾರ್ ವಿರುದ್ದ ಅವರದ್ದೇ ಆದ ಅಸ್ತ್ರ ಬಿಡುತ್ತಿದ್ದಾರೆ.
ಕೊನೆ ದಿನ ಕುರುಡು ಕಾಂಚಾಣ, ಅಂದೇ ಯಾರು ಗೆಲ್ಲುತ್ತಾರೆಂದು ಡಿಸೈಡ್ ಆಗಲಿದೆ.
ತುಮಕೋಸ್ ಚುನಾವಣೆಗೆ ಎರಡೂ ದಿವಸ ಬಾಕಿ ಇದ್ದು, ಕೊನೆ ದಿವಸ ಕುರುಡು ಕಾಂಚಾಣ ಕೆಲಸ ಮಾಡಲಿದೆ. ಯಾರು ಹೆಚ್ಚು ಹಣ ಕೊಡಲಿದ್ದಾರೆ ಅಂತಹವರು ಬಹುತೇಕ ಗೆಲ್ಲುವರು. ಅದಕ್ಕಾಗಿ ತಯಾರಿ ನಡೆಯುತ್ತಿದ್ದು, ಕೊನೆ ಕ್ಷಣದ ಆಟ ಕಾದು ನೋಡಬೇಕಿದೆ.
15 ಸ್ಥಾನಕ್ಕೆ ಚುನಾವಣೆ
‘ತುಮ್ಕೋಸ್ ಆಡಳಿತ ಮಂಡಳಿಯಲ್ಲಿ ಒಟ್ಟು 15 ಸ್ಥಾನಗಳಿದ್ದು, ಎರಡು ಕಡೆ 14 ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಚುನಾವಣಾ ಕಣಕ್ಕೆ ಇಳಿಸಲಾಗಿದೆ. ಫೆ. 9ರಂದು ಚುನಾವಣೆ ನಡೆಯಲಿದೆ.
ಶಾಸಕ ಶಿವಗಂಗಾ ಬಸವರಾಜ್ ನಡೆ ನಿಗೂಢ
ಮಾಡಾಳ್ ಕುಟುಂಬದ ವಿರುದ್ದ ಆಕ್ರೋಶಗೊಂಡಿರುವ ಶಾಸಕ ಶಿವಗಂಗಾ ಬಸವರಾಜ್ ನಡೆ ನನಿಗೂಢವಾಗಿದೆ ಮೂಲಗಳ ಪ್ರಕಾರ ಶಿವಕುಮಾರ್ ಗೆ ಶಾಸಕರ ಬೆಂಬಲವಿದೆ.
ಆರ್ ಎಂ. ರವಿ ತಂಡದಲ್ಲಿ ಯಾರಿದ್ದಾರೆ
ಹಾಲಿ ಅಧ್ಯಕ್ಷ ಆರ್.ಎಂ. ರವಿ ತಂಡದಲ್ಲಿ ಎಂ.ಸಿ.ದೇವರಾಜ್, ಮಲ್ಲಪ್ಪ ಸಿ, ಎಂ.ಎಂ.ಚಂದ್ರಶೇಖರಪ್ಪ, ಎಂ.ಯು.ಚನ್ನಬಸಪ್ಪ, ಕೆ.ಜಿ.ಮರುಳಸಿ ದಪ್ಪ, ಜಿ.ಎಸ್.ಶಿವಮೂರ್ತಿ,
ಕೆ.ಓ.ಲಿಂಗರಾಜು ಸೇರಿ ಒಟ್ಟು 15 ಜನರು ನಾಮಪತ್ರ ಸಲ್ಲಿಸಿದ್ದಾರೆ. ಇನ್ನು ತಾಲೂಕಿನ ನಾನಾ ಭಾಗಗಳಲ್ಲಿ ಅಭ್ಯರ್ಥಿ ಗಳು ಈಗಾಗಲೇ ಅಬ್ಬರದ ಪ್ರಚಾರ ಕೈಗೊಂಡಿದ್ದಾರೆ. ಒಟ್ಟಾರೆ ಇಬ್ಬರ ಜಿದ್ದಾಜಿದ್ದಿಯಲ್ಲಿ ಮತದಾರ ಯಾರ ಮೇಲೆ ಒಲವು ತೋರುತ್ತಾನೆ ಕಾದುನೋಡಬೇಕಿದೆ.