ದಾವಣಗೆರೆ : ದಾವಣಗೆರೆಯಲ್ಲಿ ತ್ರಿಬಲ್ ಎಂಜಿನ್ ಸರಕಾರ ಬರುತ್ತದೆ ಎಂದು ಶಿಮುಲ್ ಉಪಾಧ್ಯಕ್ಷ, ದಾವಣಗೆರೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಬಸಪ್ಪ ಹೇಳಿದರು.
ನಗರದಲ್ಲಿ ನಡೆದ ಪ್ರಭಾ ಮಲ್ಲಿಕಾರ್ಜುನ್ ನಾಮ ಪತ್ರ ಮೆರವಣಿಗೆ ವೇಳೆ ಭಾಗವಹಿಸಿ ಮಾತನಾಡಿದರು. ಪ್ರಭಾ ಮಲ್ಲಿಕಾರ್ಜುನ್ ಒಬ್ಬ ವಿದ್ಯಾವಂತ ಮಹಿಳೆ. ಸಂಸತ್ ನಲ್ಲಿ ದಾವಣಗೆರೆಗೆ ಬೇಕಾದ ಅಭಿವೃದ್ಧಿ ಕೆಲಸಗಳಿಗಾಗಿ ಅನುದಾನ ತರುವ ಶಕ್ತಿ ಇದೆ. ಅಲ್ಲದೇ ಮೊದಲಿನಿಂದಲೂ ಜನರಿಗೆ ಸ್ಪಂದನೆ ಮಾಡುತ್ತಾರೆ
ದಾವಣಗೆರೆಯಲ್ಲಿ ಈಗಾಗಲೇ ಆರು ಬಾರಿ ಕಾಂಗ್ರೆಸ್ ಎಂಪಿ ಸೀಟು ಗೆದ್ದಿದೆ. ಈಗ ಪಂದ್ಯ ಟೈ ಆಗಿದೆ. ಮೋದಿ ಅಲೆ ನಡೆಯೋದಿಲ್ಲ. ದಾವಣಗೆರೆಯಲ್ಲಿ ಎಸ್.ಎಸ್.ಮಲ್ಲಿಕಾರ್ಜುನ್, ಶಾಮನೂರು ಗಾಜಿನಮನೆ, ಕುಂದುವಾಡ ಕೆರೆ ಅಭಿವೃದ್ಧಿ, ದನದ ಸಂತೆಗಾಗಿ ವಿಶಾಲವಾದ ಕೊಠಡಿ, ರಸ್ತೆ ಅಭಿವೃದ್ಧಿ ಹೀಗೆ ಹತ್ತಾರು ಕೆಲಸ ಮಾಡಿದ್ದಾರೆ. 22 ಕೆರೆಗಳಿಗೆ ನೀರು ತುಂಬಿಸಲು ಸಚಿವ ಮಲ್ಲಿಕಾರ್ಜುನ್ ಸ್ವಂತ ಹಣ ಖರ್ಚು ಮಾಡಿದ್ದರು. ತಂದೆ ಶಾಮನೂರು ದಾವಣಗೆರೆ ಏಳ್ಗೆಗೆ ಶ್ರಮಿಸಿದ್ದಾರೆ ಎಂದರು.
ಶಾಮನೂರು ಶಿವಶಂಕರಪ್ಪ ಶಾಸಕರಾಗಿದ್ದಾರೆ. ಮಗ ಸಚಿವರಾಗಿದ್ದಾರೆ. ಪ್ರಭಾರವರನ್ನು ಸಂಸತ್ ಗೆ ಕಳಿಸಿದರೆ ದಾವಣಗೆರೆಯಲ್ಲಿ ತ್ರಿಬಲ್ ಎಂಜಿನ್ ಸರಕಾರವಾಗುತ್ತದೆ. ಆಗ ದಾವಣಗೆರೆ ಏಳ್ಗೆಗೆ ಸುಗಮವಾಗುತ್ತದೆ. ಅಲ್ಲದೇ ಸಾರ್ವಜನಿಕರಿಗೆ ಉಪಯೋಗವಾಗುತ್ತದೆ. ಎಂದು ಹೇಳಿದರು.
ನಾಮ ಪತ್ರ ವೇಳೆ ಭಾರೀ ಜನಸ್ತೋಮವಿದ್ದು, ಅವರೆಲ್ಲ ಸ್ವಯಂ ಪ್ರೇರಿತರಾಗಿ ಬಂದಿದ್ದಾರೆ. ಸಚಿವ ಮಲ್ಲಿಕಾರ್ಜುನ್ ಆಡಳಿತ ಗ್ಯಾರಂಟಿ ಯೋಜನೆಗಳು ಕೈ ಹಿಡಿಯುತ್ತದೆ. ಗ್ಯಾರಂಟಿಯಿಂದ ಬಡ ಮಹಿಳೆಯರಿಗೆ ಸಾಕಷ್ಟು ಉಪಯೋಗವಾಗಿದೆ. ಎಷ್ಟೋ ಬಡ ಕುಟುಂಬಗಳಿಗೆ ಸಹಕಾರಿಯಾಗಿದೆ. ಉಚಿತ ಬಸ್ ನಿಂದ ಮಹಿಳೆಯರಿಗೆ ಸಾಕಷ್ಟು ಉಪಯೋಗವಾಗಿದೆ. ಒಟ್ಟಾರೆ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಬಸಪ್ಪ ಹೇಳಿದರು.