ದಾವಣಗೆರೆ: ಮಹಿಳಾ ಸಂಘಗಳಿಗೆ ಸ್ವಉದ್ಯೋಗವನ್ನು ಸೃಷ್ಟಿಸಿಕೊಳ್ಳಲು ಜಿಎಂಎಚ್ ಚಾರಿಟಿ ಫೌಂಡೇಶನ್ ಸಹಾಯ ಮಾಡುತ್ತಿದೆ. ಅಂತೆಯೇ ಜಿಎಂಎಚ್ ಚಾರಿಟಿ ಫೌಂಡೇಶನ್ ಸಮಾಜ ಮುಖಿ ಕಾರ್ಯಗಳನ್ನು ಮಾಡುತ್ತಿದ್ದು ಅದರಂತೆ ಎಂಸಿಸಿ ‘ಎ’ ಬ್ಲಾಕ್ನ ಮಹಿಳಾ ಸಂಘಗಳಿಗೆ ಸ್ಯಾನಿಟರಿ ಪ್ಯಾಡ್ಗಳ ಯಂತ್ರೋಪಕರಣಗಳನ್ನು ವಿತರಣೆ ಮಾಡಿತು.
ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಕೂಸಾದ ಮೇಕಿಂಗ್ ಇಂಡಿಯಾ ಅಡಿಯಲ್ಲಿ ಮತ್ತು ದಿ. ಜಿ. ಮಲ್ಲಿಕಾರ್ಜುನಪ್ಪ ಅವರ 25ನೇ ಪುಣ್ಯಸ್ಮರಣೆ ನಿಮಿತ್ತ ಫೌಂಡೇಶನ್ ಈ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಸಂಸದ ಜಿಎಂ ಸಿದ್ದೇಶ್ವರ ಪತ್ನಿ ಗಾಯತ್ರಿ ಜಿ.ಎಂ. ಸಿದ್ದೇಶ್ವರ ಸ್ಯಾನಿಟರಿ ಪ್ಯಾಡ್ಗಳನ್ನು ವಿತರಿಸಿ ಮಾತನಾಡಿ, ‘ಮೊದಲ ಹಂತದಲ್ಲಿ 20 ಸ್ವಸಹಾಯ ಮಹಿಳಾ ಸಂಘಕ್ಕೆ ಸ್ಯಾನಿಟರಿ ಪ್ಯಾಡ್ ಗಳನ್ನು ವಿತರಿಸಲಾಗುತ್ತಿದೆ.
ಪ್ರತಿ ಸ್ವಸಹಾಯ ಸಂಘಕ್ಕೆ ರೂ.75,000 ಮೊತ್ತದ ಸ್ಯಾನಿಟರಿ ಪ್ಯಾಡ್ ಯಂತ್ರೋಪಕರಣಗಳನ್ನು ಮತ್ತು 5000 ಸ್ಯಾನಿಟರಿ ಪ್ಯಾಡ್ಗಳ ಕಚ್ಚಾ ವಸ್ತುಗಳನ್ನು ನೀಡಲಾಗುತ್ತಿದೆ ಎಂದರು.
ಚಾರಿಟಿ ಫೌಂಡೇಶನ್ವತಿಯಿಂದ ರೂ. 15 ಲಕ್ಷಗಳನ್ನು ವ್ಯಯಿಸಲಾಗುತ್ತಿದ್ದು, ಪ್ರತಿಯೊಂದು ಮಹಿಳಾ ಸಂಘವು ಇದರ ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಹೇಳಿದರು. ಈ ಸಂದರ್ಭದಲ್ಲಿ ಜಿ.ಎಂ. ಸಿದ್ದೇಶ್ವರ ಅವರ ಸಹೋದರಿಯರಾದ ಪ್ರಮೀಳಾ ನಟರಾಜ್, ಗಾಯತ್ರಿ ವೈ.ಯು. ಸುಭಾಷ್, ಪಾಲಿಕೆ ಸದಸ್ಯೆ ರೇಖಾ ಗಂಡುಗಾಳೆ ಇದ್ದರು