ಧಾರವಾಡ : ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಹೇಗಾದರೂ ಮಾಡಿ, ಪಿಎಂ ಮೋದಿಯನ್ನು ಸೋಲಿಸಲೇಬೇಕು ಅಂತ ಕಾಂಗ್ರೆಸ್ 28 ಪಕ್ಷಗಳನ್ನ ಒಗ್ಗಡಿಸಿಕೊಂಡು ಮೋದಿ ನೇತೃತ್ವದ ಎನ್ಡಿಎ ಒಕ್ಕೂಟಕ್ಕೆ ಸೆಡ್ಡು ಹೊಡೆದು, ಅಧಿಕಾರ ಹಿಡಿಯುವ ಉಮೇದಿನಲ್ಲಿದೆ. ಆದರೆ, ರಾಮಮಂದಿರ ಉದ್ಘಾಟಿಸಿ, ನೂರಾರು ಯೋಜನೆಗಳನ್ನ ಜನರಿಗೆ ತಲುಪಿಸಿದ ಬಿಜೆಪಿ ಮೂರನೇ ಬಾರಿಗೆ ಅಧಿಕಾರ ಹಿಡಿಯುವ ತವಕದಲ್ಲಿದೆ.
ಎರಡು ಮೈತ್ರಿಕೂಟಗಳ ಗುದ್ದಾಟದ ನಡುವೆ ಹಲವು ರಾಷ್ಟ್ರೀಯ ಸಮೀಕ್ಷೆಗಳು ಎನ್ಡಿಎ ಅಧಿಕಾರ ಹಿಡಿಯಲಿದೆ ಅಂತ ಹೇಳಿವೆ. ಅಷ್ಟೇಅಲ್ಲ, ಮತ್ತೊಂದು ದೊಡ್ಡ ಮಾಧ್ಯಮ ಸಂಸ್ಥೆ ಭವಿಷ್ಯ ನುಡಿದೆ. ಹಾಗಾದ್ರೆ, ಟೈಮ್ಸ್ ನೌ ಮತ್ತು ಇಟಿಜಿ ಅಚ್ಚರಿಯ ಫಲಿತಾಂಶ ನೀಡಿವೆ. ಹಾಗಾದ್ರೆ, ಕೇಂದ್ರದಲ್ಲಿ ಅಧಿಕಾರ ಹಿಡಿಯುವ ಪಕ್ಷ ಯಾವುದು? ಕರ್ನಾಟಕದಲ್ಲಿ ಎನ್ಡಿಎ ಮೈತ್ರಿಕೂಟ ಎಷ್ಟು ಸ್ಥಾನಗಳನ್ನು ಗೆಲ್ಲಲಿದೆ.
2014, 2019ರ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಬೀಗಿರುವ ಎನ್ಡಿಎ ಮೈತ್ರಿಕೂಟ ಈ ಬಾರಿಯೂ ಹ್ಯಾಟ್ರಿಕ್ ಗೆಲುವಿನ ಹುಮ್ಮಸ್ಸಿನಲ್ಲಿದೆ. ಈಗಾಗಲೇ ರಣಕಹಳೆ ಊದಿರುವ ಪಿಎಂ ಮೋದಿ, ಗೆಲುವು ನಮ್ಮದೆ ಅನ್ನ ತೊಡಗಿದ್ದಾರೆ.
ಇದರ ನಡುವೆ ದೇಶದ ಅತಿದೊಡ್ಡ ಸಮೀಕ್ಷೆ ಹೊರ ಬಿದ್ದಿದೆ. ಟೈಮ್ಸ್ ನೌ ಮತ್ತು ಇಟಿಜಿ ನಡೆಸಿದ ಸಮೀಕ್ಷೆಯಲ್ಲಿ ಈ ಬಾರಿ ಎನ್ಡಿಎ ಮೈತ್ರಿಕೂಟ 386 ರಿಂದ 4೦6ಸ್ಥಾನಗಳನ್ನು ಗೆದ್ದು, ಮೂರನೇ ಬಾರಿಗೆ ಅಧಿಕಾರ ಹಿಡಿಯಲಿದೆ ಹೇಳಿದೆ. ಜೊತೆಗೆ ಇಂಡಿಯಾ ಮೈತ್ರಿಕೂಟ 108 ರಿಂದ 128 ಸ್ಥಾನಗಳನ್ನು ಗೆಲ್ಲಲಿದೆ ಎಂದು ಟೈಮ್ಸ್ ನೌ ಹೇಳಿದೆ.
ದಕ್ಷಿಣ ಭಾರತದಲ್ಲಿ ಅಧಿಕ ಸ್ಥಾನ ಗೆಲ್ಲುವತ್ತ ಗಮನ ಹರಿಸಿರುವ ಪಿಎಂ ಮೋದಿ, ಈಗಾಗಲೇ ಐದು ರಾಜ್ಯಗಳ ದಂಡಯಾತ್ರೆ ಆರಂಭಿಸಿದ್ದಾರೆ. ಕಳೆದ ದಕ್ಷಿಣ ಭಾರತದಲ್ಲಿ ಬಿಜೆಪಿ 29ಸ್ಥಾನಗಳನ್ನು ಗೆದ್ದಿತ್ತು. ಕರ್ನಾಟಕದಲ್ಲಿ ೨೫ ಹಾಗೂ ತೆಲಂಗಾಣದಲ್ಲಿ ೪ ಸ್ಥಾನಗಳನ್ನು ಗೆದ್ದಿತ್ತು. ಆದ್ರೆ, ಈ ಬಾರಿ ದಕ್ಷಿಣ ಭಾರತದಲ್ಲಿ ಎನ್ಡಿಎ ಮೈತ್ರಿಕೂಟ ೪೨ ಸ್ಥಾನಗಳನ್ನು ಗೆಲ್ಲಲಿದೆ ಅಂತ ಟೈಮ್ಸ್ ನೌ ಮತ್ತು ಇಟಿಜಿ ಸಮೀಕ್ಷೆ ಹೇಳಿದೆ.ಅಷ್ಟೇಅಲ್ಲ, ದಕ್ಷಿಣ ಭಾರತದ ಬಿಜೆಪಿ ಭದ್ರಕೋಟೆ ಕರ್ನಾಟಕದಲ್ಲಿ ೨೨ ರಿಂದ ೨೪ ಸ್ಥಾನಗಳನ್ನು ಎನ್ಡಿಎ ಮೈತ್ರಿಕೂಟ ತನ್ನದಾಗಿಸಿಕೊಳ್ಳಲಿದೆ ಅಂತ ಸಮೀಕ್ಷೆ ನುಡಿದಿದೆ.