
ದಾವಣಗೆರೆ: ಹಣಕಾಸಿನ ಸಮಸ್ಯೆಯಿಂದ ಇಲ್ಲಿನ ವಿನೋಬ ನಗರದಿಂದ ಕಾಣೆಯಾಗಿದ್ದ ಒಂದೇ ಕುಟುಂಬದ ಮೂವರು ಸುರಕ್ಷಿತ ವಾಗಿದ್ದಾರೆ ಎಂದು ಕಾಣೆಯಾದ ಕುಟುಂಬದವರ ಸದಸ್ಯರೊಬ್ಬರು ತಿಳಿಸಿದ್ದಾರೆ.
ವಿನೋಬ ನಗರದ ಅಂಜನ್ಬಾಬು(34), ಇವರ ಪತ್ನಿ ನಾಗವೇಣಿ (24) ಹಾಗೂ ಒಂದೂವರೆ ವರ್ಷದ ಮಗು ನಕ್ಷತ್ರ ಕಾಣೆಯಾಗಿರುವ ಬಗ್ಗೆ ದೂರು ನೀಡಲಾಗಿತ್ತು.
‘ನಾವು ಮೂವರು ಒಂದು ಜಾಗದಲ್ಲಿ ಸುರಕ್ಷಿತವಾಗಿದ್ದು, ವೈಯುಕ್ತಿಕ ಕಾರಣಗಳಿಂದ ಮಾನಸಿಕವಾಗಿ ನೊಂದು ಕುಟುಂಬ ಸಮೇತ ಮನೆ ಬಿಟ್ಟು ಬಂದಿರುತ್ತೇವೆ. ಸ್ವಲ್ಪ ದಿನಗಳ ಬಳಿಕ ದಾವಣಗೆರೆಗೆ ಹಿಂದಿರುಗುತ್ತೇವೆ. ಅಲ್ಲಿಯ ತನಕ ನಮ್ಮನ್ನು ಹುಡುಕುವ ಪ್ರಯತ್ನ ಮಾಡಬೇಡಿ’ ಎಂದು ರುದ್ರಮ್ಮ ಅವರಿಗೆ ತಿಳಿಸಿದ್ದು, ಬಡಾವಣೆ ಠಾಣೆಗೆ ಅವರು ಈ ಮಾಹಿತಿ ನೀಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.


ಮಹಿಳೆ ನಾಪತ್ತೆ: ಸಂತೆಬೆನ್ನೂರು ಪೊಲೀಸ್ ಠಾಣೆಯ ವ್ಯಾಪ್ತಿಯ ನವಿಲೇಹಾಳ್ ಗ್ರಾಮದಿಂದ ಗೌರಮ್ಮ (50) ಎಂಬವರು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ. ಅವರು ಮಾನಸಿಕ ಅಸ್ವಸ್ಥರಾಗಿದ್ದು, ಮಾತನಾಡಲು ಬರುವುದಿಲ್ಲ. ಮಹಿಳೆಯ ಪತ್ತೆ ಕಾರ್ಯ ಮುಂದುವರೆದಿದ್ದು, ಮಹಿಳೆ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಸಿಕ್ಕಲ್ಲಿ ಸಂತೇಬೆನ್ನೂರು ಪೊಲೀಸ್ ಠಾಣೆಗೆ ಪೋನ್: 9480803262 ಅಥವಾ ದಾವಣಗೆರೆ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ 9480803200ಗೆ ಮಾಹಿತಿ ನೀಡಲು ಕೋರಿದೆ.

