
ದಾವಣಗೆರೆ : ತತ್ವ ಸಿದ್ದಾಂತಗಳನ್ನು ಇಟ್ಟುಕೊಂಡು ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ನಿಕಟಪೂರ್ವ ರಾಜ್ಯಾಧ್ಯಕ್ಷರು ಮತ್ತು ರಾಷ್ಟ್ರೀಯ ಉಪಾಧ್ಯಕ್ಷರು ಅಖಿಲ ಭಾರತ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ಮತ್ತು ನಿಕಟಪೂರ್ವ ರಾಜ್ಯಾಧ್ಯಕ್ಷರು ರಾಜ್ಯ ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಈ ನಟರಾಜ್ ಬೆಂಗಳೂರಿನ ಶಾಂತಿನಗರದ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಈ ನಟರಾಜ್, ಈ ಚುನಾವಣೆಯಲ್ಲಿ ದಾವಣಗೆರೆ ಚಿತ್ರದುರ್ಗ ತುಮಕೂರು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಕ್ಷಕರುಗಳು, ಬೋಧಕರು ಮತ್ತು ಉಪನ್ಯಾಸಕರು ಮತದಾನ ಮಾಡಬಹುದಾಗಿದೆ.
ಈಗಾಗಲೇ ನಾನು 670ಕ್ಕೂ ಅಧಿಕ ಶಾಲಾ ಕಾಲೇಜುಗಳನ್ನು ವೈಯಕ್ತಿಕವಾಗಿ ಭೇಟಿ ನೀಡಿ ಮತವನ್ನು ಯಾಚಿಸಿರುತ್ತೇನೆ. ಆದ್ದರಿಂದ ಈ 5 ಜಿಲ್ಲೆಯ ಮತದಾರರು

ಆಸೆ ಆಮಿಷ, ಕೊಡುಗೆ ಆತಿಥ್ಯಗಳನ್ನು ಧಿಕ್ಕರಿಸಿ ನಿರಂತರ ಸೇವೆ ಮಾಡುವ ಮನೋಭಾವವುಳ್ಳ ನನ್ನಂತಹ ಅಭ್ಯರ್ಥಿಗೆ ಪ್ರಥಮ ಆದ್ಯತೆಯ ಮತ ನೀಡುವುದರೊಂದಿಗೆ ಜಯಶೀಲನನ್ನಾಗಿ ಮಾಡಿ ನಿಮ್ಮಗಳ ಸೇವೆ ಮಾಡಲು ಅವಕಾಶ ಮಾಡಿಕೊಡುವಂತೆ ಕೋರುತ್ತೇನೆ ಎಂದರು.