ದಾವಣಗೆರೆ : ದಾವಣಗೆರೆದ್ಯಾಂತ ಶಿವರಾತ್ರಿ ಸಂಭ್ರಮ ಜೋರಾಗಿದ್ದು ಒಂದು ಕಡೆಯಾದರೆ ಇನ್ನೊಂದೆಡೆ ಶಾಸಕ ಶಾಮನೂರು ಶಿವಶಂಕರಪ್ಪ ಕುಟುಂಬ ಶಾಸ್ತ್ರೋಕ್ತವಾಗಿ ಹಬ್ಬ ಆಚರಿಸಿದರು.
ಶಾಸಕ ಶಾಮನೂರ ಶಿವಶಂಕರಪ್ಪ, ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಸೊಸೆ ಪ್ರಭಾ ಮಲ್ಲಿಕಾರ್ಜುನ್, ಮೊಮ್ಮಕ್ಕಳು ಶಿವನಿಗೆ ಅಭಿಷೇಕ ಮಾಡಿ ಭಕ್ತಿ ಮೆರೆದರು. ಅಲ್ಲದೇ ಪರಮೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಅಲ್ಲದೇ ಇಡೀ ಕುಟುಂಬ ಮನೆಯಲ್ಲಿ ಶಿವರಾತ್ರಿಯನ್ನು ಶ್ರದ್ಧಾಭಕ್ತಿಗಳಿಂದ ಆಚರಿಸಲಾಯಿತು.
ಶಿವ ನಾಮಸ್ಮರಣೆ, ನಸುಕಿನಿಂದಲೇ ಶಿವನಿಗೆ ರುದ್ರಾಭಿಷೇಕ, ವಿಶೇಷ ಪೂಜೆ ನೆರವೇರಿತು. ಅಲ್ಲದೇ ದೇವರಿಗೆ ವಿಶೇಷವಾಗಿ ಅಲಂಕರಿಸಲಾಗಿತ್ತು. ಶಿವನಿಗೆ ಪ್ರಿಯವಾದ ಬಿಲ್ವಪತ್ರೆ ಮತ್ತಿತರ ಹೂಗಳಿಂದ ಪೂಜೆ ಸಲ್ಲಿಸಿದರು. ಅಲ್ಲದೇ ಎಳನೀರು, ತುಪ್ಪ, ಹಾಲಿನ ಅಭಿಷೇಕ ಮಾಡಿ ಪ್ರಾರ್ಥಿಸಿದರು.
ಸಚಿವ ಎಸ್.ಎಸ್‌ಮಲ್ಲಿಕಾರ್ಜುನ್ ಕುಟುಂಬ ಭಾಗಿ, ಶಾಸ್ತ್ರೋಕ್ತವಾಗಿ ಲಿಂಗ ಪೂಜೆ
ತಂದೆ ಶಾಮನೂರು ಶಿವಶಂಕರಪ್ಪರಿಗೆ 92 ವರ್ಷ ವಯಸ್ಸಾಗಿದ್ದರೂ, ಶಾಸ್ತ್ರೋಕ್ತವಾಗಿ ಲಿಂಗ ಪೂಜೆ ಮಾಡಿದರು. ಅವರ ಜತೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಪುತ್ರ, ಪುತ್ರಿ ಕೂಡ ಲಿಂಗ ಪೂಜೆ ಮಾಡಿಕೊಂಡರು. ಈ ಮೂಲಕ ಸಣ್ಣ ವಯಸ್ಸಿನಿಂದಲೇ ಸಂಸ್ಕಾರವನ್ನು ಶಾಮನೂರು ಶಿವಶಂಕರಪ್ಪ ಕಲಿಸಿಕೊಟ್ಟರು.