
ದಾವಣಗೆರೆ : ಪ್ರಧಾನಿ ಮೋದಿ ಅವರು ಏನ್ ದೇವರಲ್ಲ.. ಅವರು ನಮ್ಮ ನಿಮ್ಮಂತೆ ಸಾಮಾನ್ಯ ಮನುಷ್ಯರು.. ಪ್ರಜಾಪ್ರಭುತ್ವದಲ್ಲಿ ನಮಗೆ ಸಂಕಷ್ಟ ಆಗ್ತಾಯಿದೆ ಅಂದ್ರೆ ಪ್ರಧಾನಿಯವರನ್ನ ಪ್ರಶ್ನಿಸ್ಲೇಬೇಕು. ಅವರನ್ನ ಪ್ರಶ್ನೆ ಮಾಡ್ಲೇಬಾರ್ದು ಅನ್ನೋದು ಸರಿಯಲ್ಲ. ಹೀಗಂಥ ಪ್ರಧಾನಿ ಮೋದಿ ಅವರ ಬಗ್ಗೆ ಹೇಳಿರೋ ನಟ ಮತ್ತು ಪ್ರಕರ ವಾಗ್ಮಿ ಪ್ರಕಾಶ್ ರಾಜ್ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಕೆಂಡಾ ಕಾರಿದ್ದಾರೆ.
ಅಷ್ಟೇ ಅಲ್ಲ, ‘420 ನಂಬರ್ ಇರೋರು 400+ ಬಗ್ಗೆ ಮಾತಾಡ್ತಾರೆ’ ಅಂತಾನೂ ಟೀಕಿಸಿದ್ದಾರೆ. ಹಾಗಾದ್ರೆ ನಟ ಪ್ರಕಾಶ್ ರಾಜ್ ಅವರು ಮೋದಿ ಸರ್ಕಾರದ ವಿರುದ್ಧ ರೊಚ್ಚಿಗೆದ್ದಿರೋದ್ಯಾಕೆ ಗೊತ್ತಾ?
ಚುನಾವಣಾ ಬಾಂಡ್ ರಾಜಕೀಯ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡುತ್ತದೆ ಅಂತೇಳಿ ನಟ ಪ್ರಕಾಶ್ ಆಕ್ರೋಶ ಹೊರಹಾಕಿದ್ದಾರೆ. ಮಂಗಳೂರಲ್ಲಿ ಈ ಬಗ್ಗೆ ರಿಯಾಕ್ಟ್ ಮಾಡಿರೋ ಪ್ರಕಾಶ್ ರಾಜ್, ಚುನಾವಣಾ ಬಾಂಡ್ ವಿಷಯದಲ್ಲಿ ಪ್ರಧಾನ ಮಂತ್ರಿ ಮತ್ತು ಗೃಹಸಚಿವರು ಸುಳ್ಳು ಹೇಳುತ್ತಿದ್ದಾರೆ. ಪ್ರಧಾನಿ ಮೋದಿ ಅವರು ಮನ್ ಕಿ ಬಾತ್ನಲ್ಲಿ ಈ ಲೂಟಿ ಬಗ್ಗೆ ಯಾಕೆ ಹೇಳಲಿಲ್ಲ ಅಂತೇಳಿ ಪ್ರಶ್ನೆ ಮಾಡಿದ್ದಾರೆ.


ಇನ್ನ ಇದೇ ವಿಚಾರವಾಗಿ ಪ್ರಧಾನಿ ಮೋದಿ ಅವರನ್ನ ನಾನು ಮಹಾ ಪ್ರಭುಗಳೇ ಅಂಥ ಕರೆಯುತ್ತೇನೆ. .ಅವರು ದೇಶದಲ್ಲಿ ಭ್ರಷ್ಟಾಚಾರವೇ ಇಲ್ಲ ಅಂತಾರೆ. ನಾ ಖಾವುಂಗಾ, ನಾ ಖಾನೇದೂಂಗಾ ಅಂತಾರೆ. ಆದ್ರೆ ನಿಮ್ಮಲ್ಲೇ ನಡೆಯುತ್ತಿದೆಯಲ್ವಾ..? ಅದಕ್ಕೆ ಪ್ರಧಾನಿಗಳು ಉತ್ರ ಕೊಡಬೇಕಲ್ವಾ.? ನಮ್ಮ ಸಂಕಷ್ಟಗಳನ್ನ ಪರಿಹರಿಸಿಲ್ಲ ಅಂದ್ರೆ ಪ್ರಜಾಪ್ರಭುತ್ವದಲ್ಲಿ ನಾವು ನಿಮ್ಮನ್ನ ಪ್ರಶ್ನೆ ಮಾಡೇ ಮಾಡ್ತೀವಿ ಅಂತೇಳಿ ನಟ ಪ್ರಕಾಶ್ ರಾಜ್ ಹೇಳಿದ್ಧಾರೆ.
ಇನ್ನ ಪ್ರಧಾನಿ ಮೋದಿ ಹೋದಲ್ಲಿ ಬಂದಲ್ಲಿ ಈ ಸಲ NDA 400 ಸೀಟುಗಳನ್ನ ಗೆಲ್ಲುತ್ತೆ ಅಂತ ಹೇಳ್ಕೊಂಡು ತಿರುಗಾಡ್ತಾಯಿದ್ದಾರೆ. ಇದು ಏನನ್ನ ಸೂಚಿಸುತ್ತೆ.. ಜನರಲ್ಲಿ ಇಮೇಜ್ ಕ್ರಿಯೇಟ್ ಮಾಡೋದಕ್ಕಾ..? ಸರ್ವೇಗಳು ಕೂಡ ಬಿಜೆಪಿ ಪರವಾಗಿ ಬರ್ತಾಯಿರೋದ್ಯಾಕೆ ಅನ್ನೋ ಅನುಮಾನಗಳು ಹುಟ್ಕೊಂಡಿವೆ. ಈ ಬಗ್ಗೆ ನಟ ಪ್ರಕಾಶ್ ರಾಜ್ ಅವರು ಟೀಕೆ ಮಾಡಿದ್ದು ಹೇಗೆ ಗೊತ್ತಾ?
ಇನ್ನ ಪ್ರಧಾನಿ ಮೋದಿ ಜನರನ್ನ ಅದ್ಹೇಗೆ ಮಂಗ ಮಾಡ್ತಾರೆ ಗೊತ್ತಾ ಅಂತೇಳಿ ನಟ ಪ್ರಕಾಶ್ ಒಂದು ಉದಾಹರಣೆಯನ್ನ ಕೊಟ್ಟಿದ್ದಾರೆ. ಇನ್ನ ಚುನಾವಣಾ ಬಾಂಡ್ಗಳಿಂದ ನಾವು ₹ 6000 ಕೋಟಿ ತೆಗೆದುಕೊಂಡಿದ್ದೇವೆ, ಆದರೆ, 330 ಸಂಸದರು ಇದ್ದಾರೆ. ಕಡಿಮೆ ಸಂಸದರು ಇರುವ ಪಕ್ಷಗಳು ಜಾಸ್ತಿ ತೆಗೆದುಕೊಂಡಿದ್ದಾರೆ ಎನ್ನುತ್ತಾರೆ. ಇದರರ್ಥ ಏನು? ಹೆಚ್ಚು ತೆಗೆದುಕೊಂಡು ಹಂಚಿಕೊಂಡರೆ ಶಿಕ್ಷೆ ಕಡಿಮೆ ಆಗಬೇಕೆಂದೇ ಅರ್ಥನಾ ಅಂತೇಳಿ ಪ್ರಕಾಶ್ ರಾಜ್ ಕಿಡಿಕಾರಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಯಾರ ಪರವಾಗಿಯೂ ಪ್ರಚಾರ ಮಾಡುವುದಿಲ್ಲ. ಆಳುವ ಪಕ್ಷವನ್ನು ಪ್ರಶ್ನಿಸುವುದಷ್ಟೆ ನನ್ನ ಕೆಲಸ. ಜನರೂ ಅಷ್ಟೇ, ಪಕ್ಷ ನೋಡಿ ಮತ ಹಾಕಬಾರದು. ನಿಮಗೆ ಸಿಗುವ ಅಭ್ಯರ್ಥಿಯನ್ನು ಗೆಲ್ಲಿಸಲು ಪ್ರಯತ್ನಿಸಬೇಕು. ಚುನಾವಣಾ ಸಮೀಕ್ಷೆಯೂ ವ್ಯಾಪಾರ ಆಗಿದೆ. ಹಣ ಕೊಟ್ಟು ಮಾಡಿಸುತ್ತಿದ್ದಾರೆ ಎಂಬ ಸಂದೇಹ ಮೂಡುತ್ತದೆ ಎಂದಿದ್ದಾರೆ.
‘ಇಂದಿರಾ ಗಾಂಧಿ ಕಾಲದಲ್ಲಿ ಘೋಷಿತ ಸರ್ವಾಧಿಕಾರಿ ಆಡಳಿತ ಇತ್ತು. ಈಗ ಅಘೋಷಿತ ಸರ್ವಾಧಿಕಾರಿ ಆಡಳಿತ ಇದೆ. ಆಗ ಮಾಧ್ಯಮಗಳು ಸರ್ವಾಧಿಕಾರದ ವಿರುದ್ಧ ಇದ್ದವು, ಈಗ ಮಾರಿಕೊಂಡು ಸರ್ವಾಧಿಕಾರದ ಪರ ಇವೆ. ಈ ಚುನಾವಣೆಯಲ್ಲಿ ಸರ್ವಾಧಿಕಾರ ಬದಲಾಗುವ ನಂಬಿಕೆ ಇದೆ. ಒಂದೇ ಪಕ್ಷಕ್ಕೆ ಅಷ್ಟು ದೊಡ್ಡ ಬಹುಮತ ಸಿಗುವ ಸಾಧ್ಯತೆ ಇಲ್ಲ. ಆದ್ದರಿಂದಲೇ ಪ್ರಾದೇಶಿಕ ಪಕ್ಷಗಳನ್ನು ಒಡೆಯುವ ಕೆಲಸ ಮಾಡಲಾಗಿದೆ. ಉದಾಹರಣೆಗೆ ಆಂಧ್ರ ಪ್ರದೇಶಲ್ಲಿ ಮೂರು ಪಕ್ಷಗಳ ಹಿಂದೆ ಮಹಾಪ್ರಭುಗಳೇ ಇದ್ದಾರೆ’ ಅಂತೇಳಿ ಮೋದಿ ಅವರ ವಿರುದ್ಧ ಹೇಳಿಕೆ ಕೊಟ್ಟಿದ್ದಾರೆ. ಹಾಗಾದ್ರೆ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ನಟ ಪ್ರಕಾಶ್ ರಾಜ್ ಅವರು ಎತ್ತಿರೋ ಈ ಗಂಭೀರ ಪ್ರಶ್ನೆಗಳ ಬಗ್ಗೆ ನೀವೇನಂತಿರಾ?