ತೀರ್ಥಹಳ್ಳಿ : ತೀರ್ಥಹಳ್ಳಿ ಪಟ್ಟಣ ಪಂಚಾಯತಿಗೆ 27 ರಂದು ನಡೆಯಲಿರುವ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಚುನಾವಣೆಯ ತಯಾರಿ ಜೋರಾಗಿದ್ದು, ಕೈ ನಾಯಕ ಮಂಜುನಾಥ್ ಗೌಡ ನೇತೃತ್ವವಹಿಸಿಕೊಂಡಿದ್ದಾರೆ. ಈ ಹಿನ್ನೆಲೆ ರಾಜ್ಯ ಕಾಂಗ್ರೆಸ್ ನಿಂದ ವೀಕ್ಷಕರಾಗಿ MLC ರಾಮೋಜಿಗೌಡ ತೀರ್ಥಹಳ್ಳಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಮಾಜಿ ಶಿಕ್ಷಣ ಸಚಿವರು ಕಿಮ್ಮನೆ ರತ್ನಾಕರ್ ರಾಜ್ಯ ಮಲೆನಾಡು ಪ್ರದೇಶ ಮಂಡಳಿ ಅಧ್ಯಕ್ಷರು ಡಾ ಆರ್ ಎಂ ಮಂಜುನಾಥಗೌಡ ಪ್ರವಾಸಿ ಮಂದಿರದಲ್ಲಿ ಸುದೀರ್ಘ ಚರ್ಚೆ ನಡೆಸಿದರು.
ನಾಮಪತ್ರ ಸಲ್ಲಿಕೆ ಯಾವಾಗ
ಆ. 27ಕ್ಕೆ ಬೆಳಗ್ಗೆ 11 ರಿಂದ 12 ನಾಮಪತ್ರ ಸಲ್ಲಿಕೆ, 12-30ರಿಂದ 12-45 ನಾಮಪತ್ರ ಪರಿಶೀಲನೆ, 12-45ರಿಂದ 1 -00 ವರೆಗೆ ನಾಮಪತ್ರ ವಾಪಾಸ್ ಪಡೆಯಲು ಅವಕಾಶ. ನಂತರ 1 ಗಂಟೆಗೆ ಅಗತ್ಯ ಬಿದ್ದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಲಿದೆ.
ಮೀಸಲಾತಿ ಏನೇನಿದೆ?
ಪ.ಪಂ.ನ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಮಹಿಳೆಗೆ ಮೀಸಲಾಗಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಗೀತಾ ರಮೇಶ್, ಶಬನಮ್ ಹೆಸರು ಮುಂಚೂಣಿಯಲ್ಲಿದೆ.
ಅಧ್ಯಕ್ಷರ ಸ್ಥಾನಕ್ಕೆ ಯಾರು ಯಾರು ಆಕಾಂಕ್ಷಿಗಳು?
ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಅಧ್ಯಕ್ಷರ ಸ್ಥಾನಕ್ಕೆ ಜಯಪ್ರಕಾಶ್ ಶೆಟ್ಟಿ, ಗಣಪತಿ, ರಹಮತುಲ್ಲಾ ಅಸಾದಿ, ರತ್ನಾಕರ್ ಶೆಟ್ಟಿ ಹೆಸರು ಮುಂಚೂಣಿಯಲ್ಲಿದೆ. ಮಹಿಳಾ ಅಭ್ಯರ್ಥಿ ಮಂಜುಳಾ ನಾಗೇಂದ್ರ ಆಕಾಂಕ್ಷಿಯಾಗಿದ್ದಾರೆ.
ಬಿಜೆಪಿ ಮ್ಯಾಜಿಕ್ ನಡೆಯುತ್ತಾ?
6 ಪಟ್ಟಣ ಪಂಚಾಯತ್ ಸದಸ್ಯರಿದ್ದು, 1 ಎಂಪಿ, 1ಎಂಎಲ್ಎ ಮತ ಸೇರಿ 8 ಸ್ಥಾನ ಬಿಜೆಪಿ ಕೈಯಲ್ಲಿದೆ. ಇನ್ನು ಒಂದು ಸ್ಥಾನ ಅವಶ್ಯಕತೆ ಇದೆ. ಅಚ್ಚರಿ ಬೆಳೆವಣಿಗೆಯಲ್ಲಿ ಕುರ್ಚಿ ಯಾರಾ ಪಾಲಾಗುತ್ತದೆ ಕಾದು ನೋಡಬೇಕು.
2021ರಲ್ಲಿ ಕೈ ನಾಯಕತ್ವಕ್ಕೆ ಜಯ
2021ರಲ್ಲಿ ನಿರೀಕ್ಷೆಯಂತೆ ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಕಾಂಗ್ರೆಸ್ ತೆಕ್ಕೆಗೆ ಹೋಗಿತ್ತು. ಆಗ ಅಧ್ಯಕ್ಷರಾಗಿ ಕಾಂಗ್ರೆಸ್ನ ಶಬನಂ ಆಯ್ಕೆಯಾದರೆ, ಉಪಾಧ್ಯಕ್ಷರಾಗಿ ಜಯಪ್ರಕಾಶ್ ಶೆಟ್ಟಿ ಆಯ್ಕೆಯಾಗಿದ್ದರು.
ಆಗ ಆರು ತಿಂಗಳ ಹಿಂದೆಯೇ ಪಟ್ಟಣ ಪಂಚಾಯತ್ಗೆ ಚುನಾವಣೆ ನಡೆದಿತ್ತು. ಇಲ್ಲಿನ 15 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 9 ಸ್ಥಾನ ಕಾಂಗ್ರೆಸ್ ಹಾಗೂ 6 ಸ್ಥಾನವನ್ನು ಬಿಜೆಪಿ ಪಡೆದಿತ್ತು.
ಅಧ್ಯಕ್ಷ- ಉಪಾಧ್ಯಕ್ಷರ ಮೀಸಲು ಪ್ರಕಟ ಮಾಡಿದ್ರು ಸಹ ಚುನಾವಣೆಗೆ ಕಾಲ ನಿಗದಿ ಮಾಡಿರಲಿಲ್ಲ. ಸಾಕಷ್ಟು ಒತ್ತಡಗಳ ನಂತರ ಚುನಾವಣೆ ನಡೆಸಲಾಗಿತ್ತು ಅಧ್ಯಕ್ಷ ಸ್ಥಾನ ಪಡೆಯಲು ಬಿಜೆಪಿ ಸಾಕಷ್ಟು ಪ್ರಯತ್ನ ನಡೆಸಿ ವಿಫಲವಾದ ಮೇಲೆ ಸುಮ್ಮನಾಗಿತ್ತು. ಆದರೆ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಅಚ್ಚರಿಯಂತೆ ಶಬನಂ ಆಯ್ಕೆಯಾಗಿದ್ದಾರೆ. ಇಷ್ಟು ದಿನ ಗೀತಾ ರಮೇಶ್ ಅಧ್ಯಕ್ಷರಾಗುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಇನ್ನೂ ಆಪರೇಷನ್ ಕಮಲಕ್ಕೆ ಬೆದರಿದ ಕಾಂಗ್ರೆಸ್ ಕಾರ್ಯಕರ್ತರು ಉತ್ತರ ಕರ್ನಾಟಕ, ಮೈಸೂರು, ಬೆಂಗಳೂರು ಅಂತ ಟೂರ್ ಹೋಗಿ ವಾಪಸ್ ಆಗಿದ್ದರು.ಆಗ ಜಿಲ್ಲಾ ಬಿಜೆಪಿಯ ಮಟ್ಟಿಗೆ ಮುಖಭಂಗ ಆಗಿತ್ತು. ಈ ಬಾರಿ ಏನಾಗುತ್ತದೆ ಕಾದು ನೋಡಬೇಕು.