![](https://davangerevijaya.com/wp-content/uploads/2025/01/IMG-20250116-WA0145.jpg)
ಶಿವಮೊಗ್ಗ : ಎರಡು ಪುಟ್ಟ ಮಕ್ಕಳನ್ನು ಬಾವಿಗೆ ಎಸೆದು ತಾನು ಕೂಡ ಬಾವಿಗೆ ಹಾರಿ ಮಹಿಳೆಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಹೊಸನಗರ ತಾಲೂಕಿನ ಮತ್ತಿಕೈ ವ್ಯಾಪ್ತಿಯಲ್ಲಿ ನಡೆದಿದೆ.
ಚಂಪಕಾಪುರ ನಿವಾಸಿ ರಾಜೇಶ್ ಎಂಬುವವರ ಪತ್ನಿ ವಾಣ (32), ಮಕ್ಕಳಾದ ಸಮರ್ಥ(12), ಸಂಪದ (6) ಮೃತ ದುರ್ಧೈವಿಗಳು. ಗುರುವಾರ ರಾತ್ರಿ ಈ ಘಟನೆ ನಡೆದಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಗೃಹಿಣಿಯೊಬ್ಬರು ತನ್ನಿಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಇದೆ. ಬಾವಿಗೆ ಬಿದ್ದಿದ್ದ ಮೂವರನ್ನೂ ಗ್ರಾಮಸ್ಥರು ರಕ್ಷಿಸಲು ಪ್ರಯತ್ನಿಸಿದರು. ಆದರೆ, ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಬಾವಿಯಿಂದ ಹೊರ ತೆಗೆಯುವಷ್ಟರಲ್ಲಿ ಮೂವರೂ ಮೃತರಾಗಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ನಗರ ಠಾಣೆ ಪಿಎಸ್ಐ ರಮೇಶ್ ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದಾರೆ.
ವಾಣಿ ಪತಿ ರಾಜೇಶ್ ಮತ್ತಿಕೈ ಗ್ರಾಮದಲ್ಲಿ ಟಿವಿ ರಿಪೇರಿ ಕೆಲಸ ಮಾಡಿಕೊಂಡಿದ್ದು, ತನಿಖೆಯಿಂದ ವಿಷಯ ಗೊತ್ತಾಗಬೇಕಿದೆ. ಈಗಾಗಲೇ ಮೃತದೇಹವನ್ನು ಬಾವಿಯಿಂದ ಎತ್ತಲಾಗಿದ್ದು, ನಗರ ಆಸ್ಪತ್ರೆಯ ಶವಾಗಾರಕ್ಕೆ ತಂದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಇಡೀ ಗ್ರಾಮದಲ್ಲಿ ಸ್ಮಶಾನಮೌನ ಆವರಿಸಿದೆ. ಅದರಲ್ಲು ಪುಟ್ಟ ಮಕ್ಕಳು ಮೃತಪಟ್ಟ ಧಾರುಣ ಸ್ಥಿತಿ ಕರುಳು ಕಿವುಚುವಂತಾಗಿದೆ. ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಯಬೇಕಿದೆ ಎಂಬ ಒತ್ತಾಯ ಗ್ರಾಮಸ್ಥರದ್ದಾಗಿದೆ.
—
![](https://davangerevijaya.com/wp-content/uploads/2025/01/IMG-20241225-WA0105.jpg)
![](https://davangerevijaya.com/wp-content/uploads/2025/01/IMG-20250116-WA0230.jpg)
![](https://davangerevijaya.com/wp-content/uploads/2025/01/IMG-20250116-WA01462.jpg)