ದಾವಣಗೆರೆ : ರಾಜ್ಯ ಕಾಂಗ್ರೆಸ್ ಸರ್ಕಾರ ಬಡವರು, ಮಧ್ಯಮ ವರ್ಗದವರು, ಮಹಿಳೆಯರು, ವೃದ್ಧರು, ಯುವಕರು ಹೀಗೆ ಎಲ್ಲ ವರ್ಗದ ಜನರಿಗೂ ನೇರವಾಗಿ ಆಸರೆಗೆ ನಿಂತಿದೆ.. ಕೆರೆಯ ನೀರು ಕೆರೆಗೆ ಚೆಲ್ಲಿ ಅನ್ನೋ ಕಾನ್ಸೆಪ್ಟ್ ಮೇಲೆ ಜನರ ದುಡ್ಡನ್ನ ಜನರ ಕೈಗೆ ನೇರವಾಗಿ ಕೊಡ್ತಾಯಿದೆ. ಹೀಗಿದ್ರೂ ರಾಜ್ಯ ಬಿಜೆಪಿ ನಾಯಕರು ರಾಜ್ಯ ಸರ್ಕಾರವನ್ನ ಭ್ರಷ್ಟ ಸರ್ಕಾರ, ಲೂಟಿ ಸರ್ಕಾರ ಅಂತೆಲ್ಲಾ ಪ್ರಚಾರ ಮಾಡ್ತಿದ್ದಾರೆ. ಅಷ್ಠೇ ಅಲ್ಲ, ಒಂದು ಕೈಯಲ್ಲಿ ಗ್ಯಾರಂಟಿ ಯೋಜನೆಗಳನ್ನ ಕೊಟ್ಟು ಮತ್ತೊಂದು ಕೈಯಲ್ಲಿ ಕಿತ್ಕೊಂತಿದೆ ಅಂತೇಳಿ ಬೊಂಬ್ಡಾ ಬಾರಿಸ್ತಿದ್ದಾರೆ. ಹಾಗಾದ್ರೆ ಕೇಂದ್ರ ಬಿಜೆಪಿ ಸರ್ಕಾರ ಜನರ ಮೂಗಿಗೆ ತುಪ್ಪ ಸವರಿ GST ಹೆಸರಲ್ಲಿ ಕೊಳ್ಳೆ ಹೊಡೀತಿದೆಯಲ್ವಾ..? ಅದು ಯಾರಪ್ಪನ ಮನೆ ದುಡ್ಡು.? ಅದು ಹಗಲು ದರೋಡೆ ಅಲ್ವಾ ಅಂತೇಳಿ ಕಾಂಗ್ರೆಸ್ ನಾಯಕರು ಪ್ರಶ್ನೆ ಮಾಡ್ತಿದ್ದಾರೆ.
ಅಷ್ಟಕ್ಕೂ ಕರ್ನಾಟಕಕ್ಕೆ ಬಿಡಿಗಾಸೂ ಬಿಡುಗಡೆ ಮಾಡದ ಕೇಂದ್ರ ಬಿಜೆಪಿ ನಾಯಕರು ಕರ್ನಾಟಕದಿಂದ ಕಿತ್ಕೊಂತಿರೋದು ಎಷ್ಟು ಲಕ್ಷ ಕೋಟಿ ಗೊತ್ತಾ.? ಮಾರಿಕೊಂಡ ಮಾಧ್ಯಮಗಳು ಅಸಲಿ ಮ್ಯಾಟ್ರನ್ನ ಅದ್ಹೇಗೆ ಮುಚ್ಚಿಡ್ತಾಯಿವೆ ಗೊತ್ತಾ.? ಅದನ್ನ ಡೀಟೇಲಾಗಿ ತೋರಿಸ್ತೀವಿ.
ಎಚ್ಚರ.. ಮತದಾರೇ ಎಚ್ಚರ.. ಐದು ವರ್ಷಕ್ಕೊಮ್ಮೆ ಸಿಗೋ ನಿಮ್ಮ ಮತದಾನದ ಹಕ್ಕನ್ನ ತುಂಬಾ ಎಚ್ಚರಿಕೆಯಿಂದ ಚಲಾಯಿಸಿ.., ನೀವು ಆರಿಸಿಕಳಿಸಿದ ಎಂಪಿಗಳು ಮತ್ತು ಕೇಂದ್ರ ಸರ್ಕಾರ ನಿಮ್ಮ ಕಷ್ಟಕ್ಕೆ ಸ್ಪಂದಿಸಿದ್ಯಾ.? 2019ರ ಚುನಾವಣಾ ಟೈಮಲ್ಲಿ ಕೊಟ್ಟ ಮಾತಿನಂತೆ ನಡೆದುಕೊಂಡಿದ್ಯಾ ಅನ್ನೋದನ್ನ ಕ್ರಾಸ್ ಚೆಕ್ ಮಾಡ್ಕೊಳಿ.. ಈಗ ಯಾಮಾರಿದ್ರೆ ಮತ್ತೆ ಐದು ವರ್ಷ ನೀವು ಏನೂ ಮಾಡೋದಕ್ಕಾಗಲ್ಲ. ಸುಳ್ಳು ಹೇಳೋರ ಬಗ್ಗೆ, ನಿಮ್ಮನ್ನ ಯಾಮಾರಿಸೋರ ಬಗ್ಗೆ ತುಂಬಾ ಎಚ್ಚರಿಕೆಯಿಂದ ಯೋಚ್ನೆ ಮಾಡಿ ಮತ ಹಾಕಿ.
2019ರಲ್ಲಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ 2023ರ ಮೇ ವರೆಗೂ ಅಧಿಕಾರದಲ್ಲಿತ್ತು. ಕೇಂದ್ರದಲ್ಲೂ ಬಿಜೆಪಿ ಸರ್ಕಾರವೇ ಇತ್ತಲ್ವಾ.? ಅಂದ್ರೆ ಬಿಜೆಪಿಯವರೇ ಹೇಳಿಕೊಳ್ಳೋ ಹಾಗೆ ಡಬಲ್ ಇಂಜಿನ್ ಸರ್ಕರ ಇತ್ತು. ಹಾಗಾದ್ರೆ ಡಬಲ್ ಇಂಜಿನ್ ಸರ್ಕಾರ ಇದ್ರೂ 2019-20ರಲ್ಲಿ ಕರ್ನಾಟಕದಲ್ಲಿ ಉಂಟಾದ ಭೀಕರ ನೆರೆ ಪರಿಹಾರವನ್ನ ಮೋದಿ ಸರ್ಕಾರ ಅದ್ಯಾಕೆ ಬಿಡುಗಡೆ ಮಾಡ್ಲಿಲ್ಲ.? ಅಂದ್ರೆ ಡಬಲ್ ಇಂಜಿನ್ ಬಿಜೆಪಿ ಸರ್ಕಾರ ಕರ್ನಾಟಕದ ಜನರಿಗೆ ಡಬಲ್ ದೋಖಾ ಮಾಡಿದಂತಾಗಿಲ್ವೇ..? ಕೊರೊನಾ ಟೈಮಲ್ಲಿ ಕರ್ನಾಟಕಕ್ಕೆ ಸಪ್ಲೇ ಆಗಬೇಕಾಗಿದ್ದ ಆ್ಯಕ್ಸಿಜನ್ಗೆ ಕತ್ತರಿ ಹಾಕಿದ್ಯಾರು.? ಚಾಮರಾಜನಗರ ಸರ್ಕಾರಿ ಆಸ್ಪತ್ರೆಯಲ್ಲಿ 30ಕ್ಕೂ ಹೆಚ್ಚು ಜನ ಆ್ಯಕ್ಸಿಜನ್ ಇಲ್ಲದೆ ಸತ್ತಾಗ ಕರ್ನಾಟಕ ಹೈಕೋರ್ಟ್ ಕೇಂದ್ರ ಬಿಜೆಪಿ ಸರ್ಕಾರಕ್ಕೆ ಛೀಮಾರಿ ಹಾಕಿತ್ತಲ್ವಾ..? ಹಾಗಾದ್ರೆ ಬಿಜೆಪಿಗೆ ವೋಟ್ ಹಾಕಿ ಮತ್ತೆ ಕನ್ನಡಿಗರು ಯಾಮಾರ್ತಾರಾ.? ಚಾಮರಾಜನಗರ ಸರ್ಕಾರಿ ಆಸ್ಪತ್ರೆಯಲ್ಲಿ 30 ಮಂದಿ ಸಾವಿಗೆ ಕಾರಣ ಯಾರು.? ಕೇಂದ್ರ ಬಿಜೆಪಿ ಸರ್ಕಾರ ಅಲ್ವೇ.? ಆ ಸಾವನ್ನ ಕನ್ನಡಿಗರು ಮರೆತು ಹೋದ್ರಾ.? ಆ ಸಾವಿಗೆ ಬೆಲೆನೇ ಇಲ್ವಾ.? ಇನ್ನ ರಾಜ್ಯ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿ ಯೋಜನೆಗಳ ಮೂಲಕ ಪ್ರತಿ ವರ್ಷ 58 ಸಾವಿರ ಕೋಟಿಯನ್ನ ನೇರವಾಗಿ ಜನರಿಗೆ ಕೊಡ್ತಾಯಿದೆ.
ಜನರಿಗೆ ಉಚಿತ ವಿದ್ಯುತ್!!
ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ವಿದ್ಯುತ್ ಬೆಲೆಯನ್ನ ನಿರಂತರವಾಗಿ ಏರಿಸಿತ್ತಲ್ವಾ.? ಈಗ ರಾಜ್ಯ ಕಾಂಗ್ರೆಸ್ ಸರ್ಕಾರ 200 ಯೂನಿಟ್ ವರೆಗೂ ಉಚಿತವಾಗಿ ವಿದ್ಯುತ್ ಕೊಡ್ತಾಯಿದೆ. ಅದೆಷ್ಟೋ ಕಡೆ ವಿದ್ಯುತ್ ಬಿಲ್ ಝೀರೋ ಬರ್ತಾಯಿದೆ. ಹಾಗಾದ್ರೆ 40 ಪರ್ಸೆಂಟ್ ಕಮಿಷನ್ ಪಡೆದ ಕಳಂಕ ಹೊತ್ತ ಬಿಜೆಪಿ ಸರ್ಕಾರ ಗ್ರೇಟಾ.? ಜನರಿಗೆ ಉಚಿತವಾಗಿ ವಿದ್ಯುತ್ ಕೊಟ್ಟ ಕಾಂಗ್ರೆಸ್ ಸರ್ಕಾರ ಗ್ರೇಟಾ.?
ಮನೆ ಯಜಮಾನಿಯರಿಗೆ ₹2000
ಮನೆ ಯಜಮಾನಿಯರಿಗೆ ಪ್ರತಿ ತಿಂಗಳು 2000 ರೂಪಾಯಿ ಕೊಡ್ತಾಯಿದೆ ರಾಜ್ಯ ಕಾಂಗ್ರೆಸ್ ಸರ್ಕಾರ.. ಈ 2 ಸಾವಿರ ರೂಪಾಯಿ ಅದೆಷ್ಟೋ ಇಳಿ ವಯಸ್ಸಿನ ತಾಯಂದಿರಿಗೆ ಪ್ರತಿ ತಿಂಗಳು ಬಿಪಿ ಮತ್ತು ಶುಗರ್ ಮಾತ್ರೆಗಳನ್ನ ಖರೀದಿಸಲು ಸಾಧ್ಯವಾಗ್ತಾಯಿದೆ. ಇದನ್ನ ಬಿಟ್ಟಿ ಭಾಗ್ಯ ಅಂತೇಳಿ ಬಿಜೆಪಿ ನಾಯಕರು ಲೂಟಿ ಹೊಡೆದಿರೋ ಕಳಂಕ ಹೊತ್ತಿರೋರಿಗೆ ಬಡವರಿಗೆ ಸಹಾಯ ಮಾಡಿದ್ರೆ ಅದ್ಯಾಕೆ ಹೊಟ್ಟೆ ಉರಿ.?
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ!?
ಮಹಿಳೆಯರು ರಾಜ್ಯದ ಉದ್ದಗಲಕ್ಕೂ ಸರ್ಕಾರಿ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡೋಕೆ ಅವಕಾಶವನ್ನ ಮಾಡಿಕೊಟ್ಟು ರಾಜ್ಯ ಸರ್ಕಾರ ಸೈ ಎನಿಸಿಕೊಂಡಿದೆ. ಕೈಯಲ್ಲಿ ದುಡ್ಡಿಲ್ಲದಿದ್ರೂ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡೋದ್ರ ಮೂಲಕ ಧಾರ್ಮಿಕ ಕೇಂದ್ರಗಳು ಮತ್ತು ಪ್ರವಾಸಿ ಕೇಂದ್ರಗಳಿಗೆ ಭೇಟಿ ನೀಡಲು ಸಾಧ್ಯವಾಗುತ್ತಿದೆ. ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಿದ್ದೇ ತಪ್ಪು ಅನ್ನೋ ರೀತಿ ಮಾತಾಡಿದ್ರೆ ಹೇಗೆ. ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿಯವರು ಹೇಳೋ ಪ್ರಕಾರ ನಮ್ಮ ಹಳ್ಳಿ ಹೆಣ್ಣುಮಕ್ಕಳು ದಾರಿ ತಪ್ಪುತ್ತಿದ್ದಾರಂತೆ. ಅಸಲಿಗೆ ದಾರಿ ತಪ್ಪಿರೋದು ಕುಮಾರಸ್ವಾಮಿ ಅಂತೇಳಿ ಕಾಂಗ್ರೆಸ್ ನಾಯಕರು ಕುಟುಕಿದ್ದಾರೆ.
ಇದರ ಜೊತೆಗೆ ಅನ್ನಭಾಗ್ಯ, ಯುವನಿಧಿ ಸೇರಿದಂತೆ ಹತ್ತು ಹಲವು ಜನಪರ ಕಾರ್ಯಕ್ರಮಗಳನ್ನ ಕೈಗೊಂಡಿರೋ ರಾಜ್ಯ ಸರ್ಕಾರ ಅಭಿವೃದ್ಧಿ ಯೋಜನೆಗಳಿಗೂ ಹಣ ಒದಗಿಸುತ್ತಿದೆ. ಹೀಗಿದ್ರೂ ರಾಜ್ಯ ಕಾಂಗ್ರೆಸ್ ಸರ್ಕಾರವನ್ನ ಭ್ರಷ್ಟ ಸರ್ಕಾರ.. ಖಜಾನೆ ಲೂಟಿ ಹೊಡೆಯುತ್ತಿದೆ ಅಂತೇಳಿ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಪುಗಸಟ್ಟೆ ಆರೋಪ ಮಾಡ್ತಿದ್ದಾರೆ. ಅಷ್ಠೇ ಅಲ್ಲ, ರಾಜ್ಯ ಕಾಂಗ್ರೆಸ್ ಸರ್ಕಾರ ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕಿತ್ಕೊಂತಿದೆ ಅಂತೇಳಿ ಆರೋಪಿಸಿದ್ದಾರೆ. ಹಾಗಾದ್ರೆ ಕೇಂದ್ರ ಸರ್ಕಾರ ಎರಡೂ ಕೈಗಳಿಂದ ಕರ್ನಾಟಕದ ಜನರಿಗೆ ಎತ್ತಿದ್ದ ಸಹಾಯ ಮಾಡ್ತಿದ್ಯಾ.? ಮೋದಿ ಸರ್ಕಾರ ಒಂದು ಕೈಯಲ್ಲಿ ಕೊಟ್ಟು 100 ಕೈಯಲ್ಲಿ ಕಿತ್ಕೊಂತಿರೋದು ಜನರ ಗಮನಕ್ಕೆ ಯಾಕೆ ಬರ್ತಾಯಿಲ್ಲ ಗೊತ್ತಾ.? ಯಾಕಂದ್ರೆ ಬಹುತೇಕ ಮೈನ್ ಸ್ಟ್ರೀಮ್ ಮಾಧ್ಯಮಗಳು ಬಿಜೆಪಿಗೆ ಮಾರಾಟವಾಗಿವೆ ಅನ್ನೋ ಆರೋಪ ಇದೆ..
ನಿಮಗೆ ಗೊತ್ತಿರ್ಲಿ, ಮೋದಿ ಸರ್ಕಾರ ಗರೀಬ್ ಕಲ್ಯಾಣ ಯೋಜನೆಯಡಿ 5 ಕೆಜಿ ಉಚಿತವಾಗಿ ಅಕ್ಕಿಕೊಡ್ತಾಯಿದೆ. ಮತ್ತೊಂದು ಕಡೆ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ಪ್ರತಿ ವರ್ಷ 6000 ರೂಪಾಯಿ ಕೊಡ್ತಾಯಿದೆ. ಇದನ್ನೇ ತುಂಬಾ ಗ್ರೇಟ್ ಅನ್ನೋ ರೀತಿ ಬಿಜೆಪಿ ನಾಯಕರು ಮತ್ತು ಕೆಲ ಮೇನ್ ಸ್ಟ್ರೀಮ್ ಮಾಧ್ಯಮಗಳು ಬಿಂಬಿಸುತ್ತಿವೆ. ಹಾಗಾದ್ರೆ 70 ರೂಪಾಯಿ ಇದ್ದ ಲೀಟರ್ ಪೆಟ್ರೋಲ್ ಬೆಲೆಯನ್ನ 112 ರೂಪಾಯಿಗೆ ಏರಿಸಿದ್ಯಾರು.? 450ರೂಪಾಯಿ ಇದ್ದ LPG ಗ್ಯಾಸ್ ಸಿಲಿಂಡರ್ ಬೆಲೆಯನ್ನ 1000 ರೂಪಾಯಿ ಗಡಿ ದಾಟಿಸಿದ್ಯಾರು..? ಇದಷ್ಟೇ ಅಲ್ಲ, ಅಗತ್ಯ ವಸ್ತುಗಳ ಬೆಲೆಗಳು ಕೂಡ ಗಗಕ್ಕೇರಿವೆ. ಬರೀ ಪೆಟ್ರೋಲ್ ಬೆಲೆ ಏರಿಸಿದ್ರೆ ಸಾಕು. ಮೋದಿ ಸರ್ಕಾರ ಉಚಿತವಾಗಿ 5 ಕೆಜಿ ಅಕ್ಕಿಯನ್ನ ಕೊಡಬಹುದು. ಇನ್ನ ಡಿಸೇಲ್ ಬೆಲೆ, ಗ್ಯಾಸ್ ಬೆಲೆ, ಅಗತ್ಯ ವಸ್ತುಗಳ ಬೆಲೆಗಳನ್ನ ಗಗನಕ್ಕೇರಿಸಿದ್ರೆ ಇನ್ನೆಷ್ಟು ಹಣವನ್ನ ಕೇಂದ್ರ ಸರ್ಕಾರ ಗುಡ್ಡೆ ಹಾಕ್ಕೊಂತಿದೆ ಅನ್ನೋದನ್ನ ನೀವೇ ಯೋಚ್ನೆ ಮಾಡಿ. ಅಂದ್ರೆ ಕೊಡೋ ಬಿಡಿಗಾಸು ಸಹಾಯವನ್ನ ಬೂತಗನ್ನಡಿಯಲ್ಲಿ ತೋರಿಸೋ ಮಾಧ್ಯಮಗಳು ಕೇಂದ್ರ ಸರ್ಕಾರ ಕಿತ್ಕೊಂತಿರೋ ಕೋಟಿ ಕೋಟಿ ಹಣವನ್ನ ಮಾತ್ರ ತೋರಿಸ್ತಿಲ್ಲ.
ಇನ್ನ ಇದೆಲ್ಲವನ್ನೂ ಪಕ್ಕಕ್ಕಿಟ್ಟು ಬರೀ ಕರ್ನಾಟಕದ ವಿಷ್ಯವನ್ನೇ ತೆಗೆದುಕೊಂಡ್ರೆ ಕರ್ನಾಟಕ ಪ್ರತಿ ವರ್ಷ 4.5 ಲಕ್ಷ ಕೋಟಿ ತೆರಿಗೆಯನ್ನ ಕೇಂದ್ರಕ್ಕೆ ಪಾವತಿಸುತ್ತಿದೆ. ಇದ್ರಲ್ಲಿ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ವಾಪಸ್ ಕೊಡ್ತಾಯಿರೋದು ಸರಿ ಸುಮಾರು 52 ಸಾವಿರ ಕೋಟಿ ಮಾತ್ರ.. ಇನ್ನುಳಿದ 3.98 ಲಕ್ಷ ಕೋಟಿ ಕೇಂದ್ರ ಸರ್ಕಾರಕ್ಕೆ ಹೋಗ್ತಾಯಿದೆ. ಹೀಗಿದ್ರೂ ಕರ್ನಾಟಕ ನೆರೆ, ಬರ ಸಂಕಷ್ಟಕ್ಕೆ ಸಿಲುಕಿದಾಗ ಕನಿಷ್ಠ ಪರಿಹಾರವನ್ನೂ ಕೊಡದೇ ಕೇಂದ್ರ ಬಿಜೆಪಿ ಸರ್ಕಾರ ಅದೇನೋ ತಮ್ಮ ಅಪ್ಪನ ಮನೆ ಗಂಟನ್ನ ಕೊಡೋ ರೀತಿ ಮುಖ ಗಂಟಿಕ್ಕೊಂಡು ಕೂತ್ಕೊಂಡಿದೆ. ಆದ್ರೆ ಕರ್ನಾಟಕದಲ್ಲಿರೋ ಕಾಂಗ್ರೆಸ್ ಸರ್ಕಾರ ಸುಮ್ನೆ ಕೂತಿಲ್ಲ. ಬರ ಪರಿಹಾರಕ್ಕಾಗಿ ನಿರಂತರವಾಗಿ ಕೇಂದ್ರಕ್ಕೆ ಪತ್ರಗಳ ಮೇಲೆ ಪತ್ರಗಳನ್ನ ಬರೀತು. ಕೊನೆಗೆ ಸುಪ್ರೀಂಕೋರ್ಟ್ನಲ್ಲಿ ದೂರು ಕೂಡ ಸಲ್ಲಿಸಿತ್ತು.
ಸುಪ್ರೀಂಕೋರ್ಟ್ 15 ದಿನದೊಳಗೆ ಸಮಸ್ಯೆ ಬಗೆಹರಿಸಿ ಅಂದರೂ ಆಗಿರ್ಲಿಲ್ಲ. ಈಗ ಸೋಮವಾರದೊಳಗೆ ರಾಜ್ಯಕ್ಕೆ ಬರ ಪರಿಹಾರ ಕೊಡಲು ಆದೇಶ ಕೊಟ್ಟಿದೆ. ಇದು ಕೇಂದ್ರ ಬಿಜೆಪಿಗೆ ಭಾರೀ ಮುಖಭಂಗ ಅಲ್ಲದೆ ಇನ್ನೇನು.? ಕಳೆದ 6-7 ತಿಂಗಳಿಂದ ಸತಾಯಿಸಿದ್ದ ಕೇಂದ್ರ ಬಿಜೆಪಿ ಚುನಾವಣಾ ಟೈಮಲ್ಲಿ ಎಚ್ಚೆತ್ತುಕೊಂಡು ಬರ ಪರಿಹಾರ ಬಿಡುಗಡೆ ಮಾಡ್ಲೇಬೇಕಾಗಿದೆ. ಇತ್ತ ಮೀಸೆ ಮಣ್ಣಾದ್ರೂ ಏನೂ ಆಗೇ ಇಲ್ಲ ಅಂತ ವಾದಿಸುತ್ತಿರೋ ವಿಪಕ್ಷ ನಾಯಕ ಆರ್ ಅಶೋಕ್, ಬರ ಪರಿಹಾರ ಬಿಡುಗಡೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಕೇಂದ್ರಕ್ಕೆ ಯಾವುದೇ ನಿರ್ದೇಶನ ನೀಡಿಲ್ಲ. ಕೇಂದ್ರ ಸರ್ಕಾರವೇ ಚುನಾವಣಾ ಆಯೋಗದ ಅನುಮತಿ ಕೇಳಿದ್ದು, ಅದಕ್ಕೆ ಚುನಾವಣಾ ಆಯೋಗ ಅನುಮತಿ ನೀಡಿದೆ. ಈ ವಿಷಯವನ್ನು ನ್ಯಾಯಾಲಯದ ಗಮನಕ್ಕೆ ತಂದಿದೆ ಅಂತೇಳಿ ಸಮಜಾಯಿಷಿ ಕೊಟ್ಟಿದ್ದಾರೆ.
ಅದೇನೇ ಇರ್ಲಿ, ಲೋಕಸಭಾ ಚುನಾವಣಾ ಹೊಸ್ತಿಲ್ಲಿ ಕಳೆದ 10 ವರ್ಷಗಳಲ್ಲಿ ಮೋದಿ ಸರ್ಕಾರದ ಸಾಧನೆ ಏನು.? ಮೋದಿ ಸರ್ಕಾರ ಅದೇನು ಕಡೆದು ಗುಡ್ಡೆ ಹಾಕಿದೆ. ಕರ್ನಾಟಕಕ್ಕೆ ಅದ್ಹೇಗೆ ನೆರವಾಗಿದೆ ಅನ್ನೋ ವಿಷ್ಯಗಳು ಚರ್ಚೆ ಆಗ್ಬೇಕು.. ಆದ್ರೆ ಮೋದಿ ಸರ್ಕಾರದ ಸಾಧನೆ ಏನೂ ಇಲ್ವಾಲ್ಲ. ಅದಕ್ಕೆ ಹಿಂದೂ ಮುಸ್ಲಿಂ, ಪಾಕಿಸ್ತಾನ, ರಾಮಮಂದಿರ, ಮಹಿಳೆಯರ ಮಂಗಳ ಸೂತ್ರದಂತಾ ವಿಷ್ಯಗಳೇ ಹೆಚ್ಚು ಚರ್ಚೆ ಆಗ್ತಾಯಿವೆ.. ದೇಶದ ಬಹುಸಂಖ್ಯಾತ ಹಿಂದೂಗಳನ್ನ ಭಾವನಾತ್ಮಾಕವಾಗಿ ಕೆರಳಿಸಿ ವೋಟ್ ಗಿಟ್ಟಿಸಿಕೊಳ್ಳೋ ತಂತ್ರಗಾರಿಕೆಗೆ ಬಿಜೆಪಿ ಕೈ ಹಾಕಿದೆ. ಇಂಥ ವಿಷಯಗಳನ್ನ ರಾಜ್ಯದ ಪ್ರಜ್ಞಾವಂತ ಮತದಾರರು ಸೂಕ್ಷ್ಮವಾಗಿ ಗಮನಿಸಬೇಕು. ಜೊತೆಗೆ ಇಂಥ ಸೂಕ್ಷ್ಮ ಸಂಗತಿಗಳನ್ನ ಸಾಮಾನ್ಯ ಮತದಾರರ ಗಮನಕ್ಕೂ ತರಬೇಕಾಗಿದೆ ನೀವೇನಂತೀರಾ?