ನಂದೀಶ್ ಭದ್ರಾವತಿ, ದಾವಣಗೆರೆ
ಒಟಿಪಿ ಬಂದಿಲ್ಲ,ಮೇಸೆಜ್ ಕೂಡ ಬಂದಿಲ್ಲ ಆದರೆ
ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಹ್ಯಾಕರ್ ಗಳು ಡ್ರಾ ಮಾಡಿದ್ದಾರೆ.
ಒಂದಲ್ಲಾ ಎರಡಲ್ಲಾ ಸುಮಾರು 42 ಸಾವಿರ ರೂಪಾಯಿಗಳನ್ನು ವೈದ್ಯರೊಬ್ಬರ ಖಾತೆಯಿಂದ ಡ್ರಾ ಮಾಡಲಾಗಿದೆ. ಈ ಬಗ್ಗೆ ಸೈಬರ್ ಕ್ರೈಮ್ ಗೆ ದೂರು ನೀಡಿದ್ದರು ಕೂಡ ಯಾವುದೇ ಪ್ರಯೋಜನವಾಗಿಲ್ಲ.
ನಿಯಮ ಏನು ಹೇಳುತ್ತದೆ
ಆರ್ ಬಿಐ ನಿಯಮದಂತೆ ಹ್ಯಾಕರ್ ಗಳಿಂದ ಕಳೆದುಕೊಂಡ ಹಣವನ್ನು ಬ್ಯಾಂಕ್ ಪಾವತಿ ಮಾಡಬೇಕಿದೆ. ಆದರೆ ಬ್ಯಾಂಕ್ ನವರು ಯಾವುದೇ ರೀತಿ ಸ್ಪಂದಿಸುತ್ತಿಲ್ಲ ನನ್ನ ಖಾತೆಯಲ್ಲಿದ್ದ ಹಣ ಕಳೆದುಕೊಂಡು ಸುಮಾರು 40 ದಿನವಾಗಿದೆ ಎಂದು ಎಸ್ ಎಸ್ ಮೆಡಿಕಲ್ ಕಾಲೇಜಿನ ಫ್ರೋಫೆಸರ್ ಡಾ.ವಿನೋದ್ ಕುಮಾರ್ ತಮ್ಮ ಅಳಲು ತೊಡಿಕೊಂಡಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಕಳೆದ ನವೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ಆಧಾರ್ ಬೇಸ್ಡ್ ಎನೇಬಲ್ ಪೇಮೆಂಟ್ ಸಿಸ್ಟಮ್ ನಿಂದಾಗಿ ನನ್ನ ಖಾತೆಯಿಂದ 42 ಸಾವಿರ ಹಣ ಡ್ರಾ ಆಗಿದೆ.
ಸೈಬರ್ ಕ್ರೈಮ್ ಗೂ ದೂರು ದಾಖಲಿಸಿದ್ದೇನೆ ಹಾಗೂ ಎಸ್ ಬಿಐ ಬ್ರಾಂಚ್ ಗೂ ದೂರು ದಾಖಲಿಸಿದ್ದೇನೆ ಆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ವಿನೋದ್ ಕುಮಾರ್ ಹೇಳುತ್ತಾರೆ.
ಉಡಾಫೆ ಉತ್ತರ ನೀಡುವ ಬ್ಯಾಂಕ್
ಆರ್ ಬಿಐ ನಿಯಮದಂತೆ ಕೂಡಲೇ ಹಣ ನೀಡಬೇಕು ಎಂದಿದೆ. ಆದರೆ ಅವರು ಕೂಡ ಯಾವುದೇ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಸಾವಿರಾರು ಜನರಿಗೆ ಈ ರೀತಿ ಮೋಸ ಆಗಿದೆ. ಯಾರಿಗೂ ಹಣ ನೀಡಿಲ್ಲ. ಈ ಬಗ್ಗೆ ಬ್ಯಾಂಕ್ ಮ್ಯಾನೇಜರ್ ಬಳಿ ಕೇಳಿದರೆ ಅವರು ರೀಜನಲ್ ಮ್ಯಾನೇಜರ್ ಗೆ ಹೇಳುವುದಾಗಿ ಹಾಗೂ ಅವರಿಗೆ ದೂರವಾಣಿ ಮೂಲಕ ಹೇಳುವುದಾಗಿ ತಿಳಿಸಿದ್ದರು. ಆದರೆ ರೀಜನಲ್ ಮ್ಯಾನೇಜರ್ ನಮ್ಮ ಬಳಿ ಕಳಿಸಬೇಡಿ ಹಾಗೇ ಸಮಾಧಾನ ಮಾಡಿ ಕಳಿಸಿ ಎಂಬ ನಿರ್ಲಕ್ಷ್ಯದ ಉತ್ತರ ನೀಡುತ್ತಾರೆಂದರು.
ಬ್ಯಾಂಕ್ ಗೆ ಸುತ್ತಾಡಿ, ಸುತ್ತಾಡಿ ಸೋತಿದ್ದೇನೆ
ಎಷ್ಟು ಬಾರಿ ಬ್ಯಾಂಕ್ ಗೆ ಹೋದರೂ ಯಾವುದೇ ಉಪಯೋಗವಾಗಿಲ್ಲ. ಎಫ್ ಐಆರ್ ಕೂಡ ನೀಡಿದ್ದೇವೆ ಇದೂವರೆಗೂ ನಮ್ಮ ಹಣ ಬಂದಿಲ್ಲ.ಕಷ್ಟ ಪಟ್ಟು ದುಡಿದ ಹಣವನ್ನು ಸೇಫ್ ಎಂದು ಬ್ಯಾಂಕ್ ನಲ್ಲಿ ಇಡುತ್ತೇವೆ ಎಸ್ ಬಿಐ ನಂತಹ ಬ್ಯಾಂಕ್ ನಲ್ಲೇ ಸೆಕ್ಯೂರಿಟಿ ಸಿಸ್ಟಮ್ ಇಲ್ಲ. ನಮಗೇ ಗೊತ್ತಿಲ್ಲದಂತೆ ನಮ್ಮ ಹಣವನ್ನು ಡ್ರಾ ಮಾಡಲಾಗುತ್ತಿದೆ. ಒಟಿಪಿ ಬರಲ್ಲ, ನಮ್ಮ ಹಣ ಡ್ರಾ ಆಗಿರುವ ಬಗ್ಗೆ ಯಾವುದೇ ಮೇಸೇಜ್ ಕೂಡ ಬರುವುದಿಲ್ಲ.
ಹೀಗಿದ್ದಾಗ ನಾವು ಹೇಗೆ ನಮ್ಮ ಹಣವನ್ನು ಬ್ಯಾಂಕ್ ನಲ್ಲಿ ಇಡಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಎಸ್ ಬಿಐ ಬ್ಯಾಂಕ್ ಸೇಫ್ ಇದೆಯಾ
ಎಸ್ ಬಿಐ ಬ್ಯಾಂಕ್ ಸೇಫ್ ಇದೆಯಾ, .ಆರ್ ಬಿ ಐ ಸೇಫ್ ಇದೆಯಾ ನಾವು ಎಲ್ಲಿಗೆ ಹೋಗಬೇಕು ಇದಕ್ಕೆಲ್ಲಾ ಉತ್ತರ ಯಾರು ಕೊಡಬೇಕು ಎಂದು ತಮ್ಮ ಅಸಮಾಧಾನ ಹೊರಹಾಕುತ್ತಾರೆ ವಿನೋದ್ ಕುಮಾರ್, ಈ ರೀತಿ ಕೆನರಾ ಬ್ಯಾಂಕ್ ಸೇರಿದಂತೆ ಅನೇಕ ಬ್ಯಾಂಕ್ ಗಳಲ್ಲಿ ನಡೆದಿದೆ ಆದರೆ ಅವರಿಗೆ ಹಣ ಬಂದಿದೆ. ಎಸ್ ಬಿಐ ಬ್ಯಾಂಕ್ ನವರು ಯಾವುದೇ ರೀತಿ ಸ್ಪಂದಿಸುತ್ತಿಲ್ಲ. ಮ್ಯಾನೇಜರ್
ಈ ಬಗ್ಗೆ ನಾವು ಏನೂ ಮಾಡಲು ಸಾಧ್ಯವಿಲ್ಲ ಎಂಬ ಉತ್ತರ ನೀಡುತ್ತಾರೆ.ನನ್ನ ಖಾತೆಯಿಂದ 42 ಸಾವಿರ ರೂ ಡ್ರಾ ಆಗಿದೆ.ದೂರು ನೀಡಿ 40 ದಿನವಾಗಿದೆ ಆದರೂ ಯಾವ ಪ್ರತಿಕ್ರಿಯೆಯೂ ಸಿಕ್ಕಿಲ್ಲ.ಬಹಳ ಅವಶ್ಯಕತೆ ಇದ್ದವರ ಪಾಡೇನು ಎಂದು ಪ್ರಶ್ನಿಸಿದರು.
ನಮಗೇ ಗೊತ್ತಿಲ್ಲದಂತೆ ಹಣ ಡ್ರಾ ಆಗುತ್ತದೆ
ಹಣ ಡ್ರಾ ಆಗಿರುವುದು ನಮಗೆ ಗೊತ್ತಾಗುವುದಿಲ್ಲ. ಯಾಕೆಂದರೆ ನಮಗೆ ಯಾವುದೇ ಮೇಸೇಜ್ ಬರುವುದಿಲ್ಲ. ಒಟಿಪಿನೂ ಬರಲ್ಲ ಆದರೂ ಹಣ ಡ್ರಾ ಆಗಿರುತ್ತದೆ.ಪ್ರತಿ ಬಾರಿ ಖಾತೆಯಲ್ಲಿರುವ ಹಣ ಚೆಕ್ ಮಾಡಲು ಸಾಧ್ಯವಿಲ್ಲ. ಆದರೆ ಒಮ್ಮೆ ಹೀಗೆ ಚೆಕ್ ಮಾಡುವ ವೇಳೆ ಪ್ರತಿದಿನ ಹತ್ತು ಸಾವಿರದಂತೆ 42 ಸಾವಿರ ಡ್ರಾ ಮಾಡಲಾಗಿದೆ.ಆಧಾರ್ ಎನೇಬಲ್ಡ್ ಎಂಬ ಮೆಸೇಜ್ ಬಂತು ಕೂಡಲೇ ಸೈಬರ್ ಕ್ರೈಮ್ ಗೆ ದೂರು ದಾಖಲಿಸಿದೆ .ಈ ರೀತಿ ಹಣ ಡ್ರಾ ಆಗುವುದು ಜನರಿಗೆ ಗೊತ್ತಾಗುವುದೇ ಇಲ್ಲ ಆ ರೀತಿ ವಂಚಿಸಲಾಗುತ್ತಿದೆ ಎಂದು ವಿನೋದ್ ಕುಮಾರ್ ಹೇಳುತ್ತಾರೆ.
ಹೇಗೆ ನಮ್ಮ ಖಾತೆ ಹ್ಯಾಕ್ ಆಗುತ್ತದೆ?
ಸಬ್ ರಿಜಿಸ್ಟರ್ ಕಚೇರಿಯಲ್ಲಿ ಆಸ್ತಿ ಖರೀದಿ ಅಥವಾ ನೋಂದಣಿ ವೇಳೆ ನಾವು ಆಧಾರ್ ಹಾಗೂ ತಂಬ್ ನೀಡುತ್ತೇವೆ.ಈ ವೇಳೆ ದಾಖಲೆಗಳು ಸೋರಿಕೆ ಯಾಗುತ್ತಿವೆ .ಈ ರೀತಿ ಹ್ಯಾಕ್ ಮಾಡಲಾಗುತ್ತಿದೆ.
ತಂಬ್ ಡ್ಯೂಪ್ಲಿಕೇಟ್ ಮಾಡಿ ಹ್ಯಾಕ್
ಬ್ಯಾಂಕಿಂಗ್ ಸೆಕ್ಟರ್ ನಲ್ಲಿ ಸಾಫ್ಟ್ವೇರ್ ಸಿಸ್ಟಮ್ ನ ಕುಂದುಕೊರತೆಗಳಿವೆ ಇದರಿಂದ ಹ್ಯಾಕ್ ಮಾಡಲು ಸಾಧ್ಯ. ತಂಬ್ ಡ್ಯೂಪ್ಲಿಕೇಟ್ ಮಾಡಿ ಹ್ಯಾಕ್ ಮಾಡಲಾಗಿದೆ ಎಂದು ಸೈಬರ್ ಕ್ರೈಮ್ ನವರು ಹೇಳುತ್ತಾರೆ.ಆದರೆ ನಾವು ಸಬ್ ರೆಜಿಸ್ಟರ್ ಕಚೇರಿಗೆ ಕಳೆದ ಎರಡು ವರ್ಷದಿಂದ ಹೋಗಿಲ್ಲ.ಬ್ಯಾಂಕ್ ಗೆ ನನ್ನ ಹಣ ಮರುಪಾವತಿಗೆ ವಾರಕ್ಕೊಮ್ಮೆ ಹೊಗುತ್ತಿದ್ದೇನೆ ಆದರೆ ಬ್ಯಾಂಕ್ ನವರು ದಿನಾ ಬರಬೇಡಿ ಎನ್ನುತ್ತಾರೆ.
ನಮಗೆ ಹಣದ ಅವಶ್ಯಕತೆ ಇದೆ.ಆರ್ ಬಿಐ ನಿಯಮದಂತೆ ಬ್ಯಾಂಕ್ ನವರು ಕೂಡಲೇ ಹಣ ನೀಡಬೇಕಿದೆ.ದೂರು ದಾಖಲಿಸಿ 40 ದಿನವಾದರೂ ಬ್ಯಾಂಕ್ ನಿಂದ ಯಾವ ರೆಸ್ಪಾನ್ಸ್ ಇಲ್ಲ ಎಂದು ಅವರು ಹೇಳುತ್ತಾರೆ. ಇನ್ನಾದರೂ ಗ್ರಾಹಕರು ಎಚ್ಚರದಿಂದ ಇರಬೇಕಿದ್ದು, ನಿಮ್ಮ ಆಧಾರ್ ಕಾರ್ಡ್ ನ ಥಂಬ್ ಮೇಲ್ ನ್ನು ತಪ್ಪದೇ ಲಾಕ್ ಮಾಡಿ.