
ವಿಜಯೇಂದ್ರರ ಮುಂದೆ ಸಿಎಂ ಹೀಗಂತಾ ಹೇಳಿದ್ರು ಮಾಜಿ ಸಚಿವರು
—
ದಾವಣಗೆರೆ : ಸ್ವಯಂ ಘೋಷಿತ ನಾಯಕರು ಇಲಿನಾ-ಹುಲಿನಾ ಎಂದು ಮಾಜಿ ಶಾಸಕ ರೇಣುಕಾಚಾರ್ಯ ವಿರೋಧಿ ಪಡೆ ಯತ್ನಾಳ್ ಗೆ ಕೌಂಟರ್ ಕೊಟ್ಟಿದ್ದಾರೆ. ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಎಲ್ಲಾ ಮಠಾಧೀಶರ ಬೆಂಬಲ ಯಡಿಯೂರಪ್ಪ ಅವರಿಗೆ ಇದೆ. ಸ್ವಯಂ ಘೋಷಿತ ನಾಯಕರು ಇಲಿನಾ-ಹುಲಿನಾ ನೀವೇ ತೀರ್ಮಾನ ಮಾಡಿ. ಇವೆಲ್ಲ ತಿರಸ್ಕೃತ ನಾಯಕರು ಚಲಾವಣೆ ಇಲ್ಲದ ನಾಯಕರು. ಯಡಿಯೂರಪ್ಪ ವಿಜಯೇಂದ್ರ ಪರವಾಗಿ ಹೋರಾಟ ಮಾಡುತ್ತಿದ್ದೇವೆ. ಮುಂದೆ ವಿಜಯೇಂದ್ರ ಅವರನ್ನ ಸಿಎಂ ಮಾಡುತ್ತೇವೆ ಎಂದು ಯತ್ನಾಳ್‌ಗೆ ರೇಣುಕಾಚಾರ್ಯ ಕೌಂಟರ್ ಕೊಟ್ಟರು.
ದೇಶ ವಿರೋಧಿಗಳನ್ನ ಬಂಧಿಸಲು ರಾಜ್ಯ ಸರ್ಕಾರಕ್ಕೆ ಆಗಿಲ್ಲ. ರಾಜ್ಯದಲ್ಲಿ ಸರ್ಕಾರದಿಂದ ಪ್ರಜಾಪ್ರಭುತ್ವ ಕಗ್ಗೊಲೆಯಾಗುತ್ತಿದೆ. ಅಲ್ಪ ಸಂಖ್ಯಾತ ಗೂಂಡಾಗಳು ಬ್ರದರ್ಸ್ ಆಗಿದ್ದಾರೆ. ರಾಜ್ಯ ಸರ್ಕಾರ ಆಡಳಿತ ಮಾಡಲು ನಾಲಾಯಕ್. ನಮ್ಮ ರಾಜ್ಯದಲ್ಲಿ ಗೂಂಡಾಗಳು ಬಸ್‌ಗೆ ಕಲ್ಲು ತೂರಾಟ, ಹಲ್ಲೆ ಮಾಡುವುದು ಹೆಚ್ಚಾಗಿದೆ. ಕಾಂಗ್ರೆಸ್ ನವರಿಗೆ ರಾಜ್ಯದಲ್ಲಿ ಹುಟ್ಟಿದ್ದರು ಮಾತೃ ಪ್ರೇಮ ಇಲ್ಲ, ಇವರದ್ದು ಕುರ್ಚಿಗಾಗಿ ರಾಜಕಾರಣ ಎಂದು ರೇಣುಕಾಚಾರ್ಯ ಹೇಳಿದರು.
ಮೈಸೂರಿನಲ್ಲಿ 144 ಸೆಕ್ಷನ್ ಜಾರಿ ಮಾಡಿದ್ದಾರೆ, ಇದು ತುರ್ತು ಪರಿಸ್ಥಿತಿ ಏರುವ ಕೆಲಸ. ಹಲ್ಲೆಗೊಳಗಾದ ಕುಟುಂಬಕ್ಕೆ ಸಾಂತ್ವಾನ ಹೇಳಲು ಬೆಳಗಾವಿಗೆ ಸ್ಥಳೀಯ ಮುಖಂಡರು ಭೇಟಿ ಕೊಟ್ಟಿದ್ದಾರೆ, ಬಿಜೆಪಿ ನೊಂದವರ ಪರವಾಗಿದೆ. ಇನ್ನು ಯಡಿಯೂರಪ್ಪ ಅವರ ಹುಟ್ಟು ಹಬ್ಬ ಮಾಡಲು ರಾಷ್ಟ್ರೀಯ ನಾಯಕರು ಬೇಡ ಅಂದಿಲ್ಲ. ಯಡಿಯೂರಪ್ಪ ಬೇಡ ಅಂದಿದ್ದಕ್ಕೆ ಸುಮ್ಮನಾಗಿದ್ದೇವೆ. ರಾಜ್ಯ ಸರ್ಕಾರಕ್ಕೆ ಗ್ಯಾರಂಟಿ ಯೋಜನೆ ಹೊರೆಯಾಗಿದೆ, ಇದನ್ನ ಕಾಂಗ್ರೆಸ್ ಪಕ್ಷದ ಪ್ರಮುಖರೇ ಹೇಳಿಕೊಟ್ಟಿದ್ದಾರೆ. ಕಾಂಗ್ರೆಸ್ ನವರದ್ದು ಅಭಿವೃದ್ಧಿ ಶೂನ್ಯ ಸರ್ಕಾರ. ನಮ್ಮ ಲೋಪದೋಷದಿಂದ ನಾವು ಸೋತಿದ್ದೇವೆ ಕಾಂಗ್ರೆಸ್ ನವರು ಸೋಲಿಸಿಲ್ಲ. ಅಧಿಕಾರಕ್ಕೋಸ್ಕರ ಸುಳ್ಳು ಭರವಸೆ ನೀಡಿದ್ದಾರೆ, ಸರ್ಕಾರ ಟೇಕ್ ಅಪ್ ಆಗಿಲ್ಲ, ರಾಜ್ಯ ಸರ್ಕಾರ ಜೀವಂತ ಶವ. ನಾನು ಎಂದು ಹೊಂದಾಣಿಕೆ ಸರ್ಕಾರ ಮಾಡಿಲ್ಲವೆಂದು ರೇಣುಕಾಚಾರ್ಯ ಹೇಳಿದರು.

