ದಾವಣಗೆರೆ : ಡಿಸಿಸಿ ಬ್ಯಾಂಕ್ ಉಮೇದುವಾರಿಕೆ ಹಿಂತೆಗೆಯಲು ಶುಕ್ರವಾರ ಕೊನೆ ದಿನವಾಗಿದ್ದು, ಸಂಜೆ ಆರು ಗಂಟೆಯಾದರೂ ಕಣದಲ್ಲಿ ಉಳಿದವರ್ಯಾರು ಎಂಬ ಮಾಹಿತಿ ಲಭ್ಯವಾಗಲಿಲ್ಲ.
ನಾಮಪತ್ರ ಹಿಂತೆಗೆದುಕೊಳ್ಳಲು ಮೂರು ಗಂಟೆ ಸಮಯ ನೀಡಲಾಗಿತ್ತು. ಅಲ್ಲಿಯವರೆಗೂ ಹಲವರು ನಾಮಪತ್ರ ವಾಪಸ್ ಪಡೆದರು. ಬಳಿಕ ಚಿಹ್ನೆಗಳನ್ನು ನಾಲ್ಕುಗಂಟೆ ಮೇಲೆ ನೀಡಲಾಯಿತು. ಚುನಾವಣಾಧಿಕಾರಿ ನಜ್ಮಾ ಚಿಹ್ನೆಗಳನ್ನು ಹಂಚಿದರು.
ನಾಮ ಪತ್ರ ಹಿಂತೆಗೆದುಕೊಳ್ಳಲು ಒಂದೇ ಪಕ್ಷದ ಅನೇಕರು ತಂತ್ರ, ಪ್ರತಿ ತಂತ್ರ ರೂಪಿಸಿದರು.ಕೆಲ ಕಾಲ ಡಿಸಿಸಿ ಬ್ಯಾಂಕ್ ಜನರಿಂದ ತುಂಬಿ ಹೋಗಿತ್ತು.
ಇಡೀ ದಿನ ಡಿಸಿಸಿ ಬ್ಯಾಂಕ್ ನಲ್ಲಿ ಆದ ಬೆಳವಣಿಗೆಯೇನು?
ಡಿಸಿಸಿ ಬ್ಯಾಂಕ್ ಉಮೇದುವಾರಿಕೆಗೆ ಜನವರಿ 20 ರಂದು ಕೊನೆ ದಿನವಾಗಿತ್ತು. ಬೆಳಗ್ಗೆಯಿಂದ ಉಮೇದುವಾರಿಕೆ ಕಾರ್ಯ ಮುಂದುವರೆದಿತ್ತು. ಮಧ್ಯಾಹ್ನದ ನಂತರ ಚುನಾವಣಾ ಕಣ ರೋಚಕ ಘಟ್ಟಕಕ್ಕೆ ಏರಿತು. ಒಂದೇ ಪಕ್ಷದವರು ಹೆಚ್ಚು ನಾಮ ಪತ್ರ ಸಲ್ಲಿಸಿದ್ದ ಕಾರಣ ಬಣ ರಾಜಕೀಯ ಶುರುವಾಗಿತ್ತು. ಒಬ್ಬೊಬ್ಬರನ್ನೇ ಕರೆ ತಂದರೂ ಅವರು ತಪ್ಪಿಸಿಕೊಂಡು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು
ಸಿಸಿ ಕ್ಯಾಮೆರಾದಲ್ಲಿ ಎಲ್ಲ ದೃಶ್ಯಾವಳಿಗಳು
ಬ್ಯಾಂಕ್ ನಲ್ಲಿ ನಡೆಯುತ್ತಿದ್ದ ಎಲ್ಲ ದೃಶ್ಯಾವಳಿಗಳು ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಇಷ್ಟೂ ಚಿತ್ರಣಗಳು ಇಲ್ಲಿ ದಾಖಲಾಗಿದ್ದು, ಇದರ ಪರಿಶೀಲನೆ ಮಾಡಿದರೆ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ.