
ಬೆಂಗಳೂರು : ಆಡಳಿತರೂಢ ಕಾಂಗ್ರೆಸ್ ಪಕ್ಷದಲ್ಲಿ ಬಣ ರಾಜಕೀಯ ಭುಗಿಲೆದ್ದಿದೆ. ಡಿಸಿಎಂ ಡಿಕೆ ಶಿವಕುಮಾರ್ ವಿದೇಶಕ್ಕೆ ತೆರಳಿದ ವೇಳೆಯೇ ಸಚಿವ ಸತೀಶ್ ಜಾರಕಿಹೋಳಿ ನಿವಾಸದಲ್ಲಿ ಸಭೆ ನಡೆದಿರುವುದು ಭಾರೀ ಕುತೂಹಲ ಮೂಡಿಸಿದೆ. ಸಿಎಂ ಸಿದ್ದರಾಮಯ್ಯ ಸೇರಿ 35ಕ್ಕೂ ಶಾಸಕರು ಈ ಸಭೆಯಲ್ಲಿ ಭಾಗವಹಿಸಿ ಸಮಾಲೋಚನೆ ನಡೆಸಿದ್ದಾರೆ. ಹಾಗಾದ್ರೆ, ಕೆಪಿಸಿಸಿ ಅಧ್ಯಕ್ಷಗಿರಿ ಬೇರೆಯವರಿಗೆ ಕಟ್ಟಲು ಚರ್ಚಿಸಲಾಯ್ತಾ.? ಡಿಕೆಶಿಗೆ ಸೆಡ್ಡು ಹೊಡೆದ್ರಾಸತೀಶ್ ಜಾರಕಿಹೋಳಿ.? ಮತ್ತೊಂದೆಡೆ, ಸಿಎಂ ಸಿದ್ದು ಬಣದ ವಿರುದ್ಧ ಡಿಕೆಶಿ ಬಳಸಿದ ತಂತ್ರ ಯಾವುದು..?
ಬೆಳಗಾವಿ ರಾಜಕಾರಣ… ಯಾವುದೇ ಸರ್ಕಾರವನ್ನು ಬದಲಿಸುವ ತಾಕತ್ತು ಇರುವಂತಹ ಜಿಲ್ಲೆ ಇದು.. ಇಡೀ ಜಿಲ್ಲೆಯಲ್ಲಿ ಬಿಗಿ ಹಿಡಿತ ಹೊಂದಿರುವ ಜಾರಕಿಹೋಳಿ ಕುಟುಂಬದ ಸ್ವಾಭಿಮಾನಕ್ಕೆ ಬಿದ್ದಾಗಲೆಲ್ಲಾ ರಾಜ್ಯ ರಾಜಕಾರಣದಲ್ಲಿ ಒಂದಷ್ಟು ತಲ್ಲಣಗಳಾಗಿವೆ..
ಇದೀಗ ಬೆಳಗಾವಿ ರಾಜಕಾರಣದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿರುವ ಬೆನ್ನಲ್ಲೇ ಬೆಳಗಾವಿಯ ಸಾಹುಕಾರ್ ಸತೀಶ್ ಜಾರಕಿಹೋಳಿ ಸಿಡಿದು ನಿಂತಿದ್ದಾರೆ. ಮೊನ್ನೆಯಷ್ಟೇ ಕಾಂಗ್ರೆಸ್ ಬೆಳಗಾವಿ ಅಧಿವೇಶನದ ಶತಮಾನದ ಕಾರ್ಯಕ್ರಮದಲ್ಲಿ ಡಿಸಿಎಂ ಜಿಲ್ಲಾ ಉಸ್ತವಾರಿ ಸಚಿವರು ಹಾಗೂ ಸ್ಥಳೀಯ ಶಾಸಕರು, ನಾಯಕರಿಗೆ ಆದ್ಯತೆ ನೀಡದೆ ತಮ್ಮ ಇಚ್ಛೆಯಂತೆ ನಡೆಸಿದ್ದಾರೆ ಮತ್ತು ಜಿಲ್ಲಾ ನಾಯಕರನ್ನು ಕಡೆಗಣಿಸಿದ್ದಾರೆ ಎಂಬ ಅಸಮಾಧಾನ ಈಗ ಡಿನ್ನರ್ ಮೀಟಿಂಗ್ ನಡೆಯುವಂತೆ ಮಾಡಿದೆ.


ಹೌದು..ಸಚಿವ ಸತೀಶ್ ಜಾರಕಿಹೋಳಿ ಅವರು ತಮ್ಮ ನಿವಾಸದಲ್ಲಿ ಗುರುವಾರ ರಾತ್ರಿ ಅಹಿಂದ ನಾಯಕರ ಸಭೆ ನಡೆಸಿದ್ದಾರೆ. ಡಿನ್ನರ್ ನೆಪದಲ್ಲಿ ನಡೆದ ಈ ಸಭೆಯಲ್ಲಿ 35ಕ್ಕೂ ಹೆಚ್ಚು ಶಾಸಕರು, ಸಿಎಂ ಸಿದ್ದರಾಮಯ್ಯ ಭಾಗವಹಿಸುವ ಮೂಲಕ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಸಂದೇಶ ಕಳುಹಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ, ಸಿಎಂ ಅಧಿಕಾರ ಹಸ್ತಾಂತರ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ. ಒಬ್ಬರಿಗೆ ಒಂದೇ ಹುದ್ದೆ ಎಂಬ ಉದಯಪುರ ಘೋಷಣೆಯಾಗಿದ್ದು, ಕೆಪಿಸಿಸಿ ಅಧ್ಯಕ್ಷ ಸ್ಥಾನ ತಮಗೆ ನೀಡಬೇಕು ಎಂದು ಸತೀಶ್ ಜಾರಕಿಹೋಳಿ ಅಭಿಪ್ರಾಯವನ್ನು ಜಾರಕಿಹೋಳಿ ಹಂಚಿಕೊಂಡಿದ್ದಾರೆ ಎನ್ನಲಾಗಿದೆ.
ಸಿಎಂ ಹುದ್ದೆಗೆ ಡಿಸಿಎಂ ಡಿಕೆ ಶಿವಕುಮಾರ್ ಹಕ್ಕು ಮಂಡಿಸುತ್ತಿರುವ ಹಿನ್ನೆಲೆಯಲ್ಲಿ ಸಿದ್ದು ಬಣ ನಾಯಕರಿಂದ ಇಂತಹದೊಂದು ಒತ್ತಾಯ ಕೇಳಿ ಬಂದಿದೆ. ಮತ್ತೊಂದೆಡೆ, ಡಿಕೆಶಿ ಬಣದಿಂದಲೂ ಶಕ್ತಿ ಪ್ರದರ್ಶನವಾಗಿದೆ. ಜಾರಕಿಹೋಳಿ ಡಿನ್ನರ್ ಮೀಟಿಂಗ್ ಮಾಡುತ್ತಿದ್ದಂತೆ ಇತ್ತಾ ಒಕ್ಕಲಿಗರ ನಾಯಕರು ಸಭೆ ಸೇರಿದ್ದಾರೆ. ಸಚಿವ ಚಲುವರಾಯ ಸ್ವಾಮಿ ಮನೆಯಲ್ಲಿ ಸಭೆ ನಡೆಸಿ, ಸಿಎಂ ಸಿದ್ದರಾಮಯ್ಯ ಪಡೆಗೆ ಪ್ರತಿ ಸಂದೇಶ ಕಳುಹಿಸಿದ್ದಾರೆ..ಒಟ್ಟಾರೆ..ಬಿಜೆಪಿ ಕಾಂಗ್ರೆಸ್ನಲ್ಲಿ ಬಣ ರಾಜಕೀಯ ಮುಗಿಯದ ಅಧ್ಯಾಯವಾಗಿದೆ.

