ದಾವಣಗೆರೆ ; ಕೃಷಿ ಹಾಗೂ ವ್ಯಾಪಾರದಿಂದ ದುಡಿದು ಶ್ರೀಮಂತನಾಗಿದ್ದೇನೆ, ತಂದೆಯವರ ಹಾದಿಯಲ್ಲಿ ರಾಜಕೀಯಕ್ಕೆ ಬಂದು ಪ್ರಾಮಾಣಿಕವಾಗಿ ಜನರ ಸೇವೆ ಮಾಡಿದ್ದು ತೃಪ್ತಿ ತಂದಿದೆ ಎಂದು ಮಾಜಿ ಸಂಸದರಾದ ಜಿ.ಎಂ ಸಿದ್ದೇಶ್ವರ ಅವರು ತಿಳಿಸಿದರು. ನಗರದ ವಿದ್ಯಾನಗರದ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪ ಬಳಿ ಉದ್ಯಮಿ ಬಾಡದ ಆನಂದರಾಜು ಅವರ ಎಸ್.ಕೆ.ಡಿ ರಿಯಲ್ ಎಸ್ಟೇಟ್ ನೂತನ ಕಚೇರಿ ಉದ್ಘಾಟಿಸಿ ಈ ವಿಷಯ ತಿಳಿಸಿದರು.
ನಾನು ಕಳೆದ ಎರಡು ದಶಕಗಳಿಂದ ಸಂಸದನಾಗಿ ಆಯ್ಕೆ ಮಾಡಿದ್ದ ದಾವಣಗೆರೆ ಜನರ ಸೇವೆಯನ್ನು ಅತ್ಯಂತ ನಿಷ್ಠೆ ಹಾಗೂ ಪ್ರಾಮಾಣಿಕವಾಗಿ ಮಾಡಿದ್ದೇನೆ, ಜನರು ನನ್ನನ್ನು ಸೋಲಿಲ್ಲದ ಸರದಾರನನ್ನಾಗಿ ಮಾಡಿದ್ದಾರೆ.
ಇಂದಿಗೂ ಜನರ ಪ್ರೀತಿ ವಿಶ್ವಾಸ ಕಡಿಮೆಯಾಗಿಲ್ಲ, ನಿರಂತರವಾಗಿ ಜನರೊಂದಿಗೆ ಸಂಪರ್ಕದಲ್ಲಿದ್ದು ಸೇವೆ ಮಾಡುತ್ತಿದ್ದೇನೆ ಎಂದರು. ಆವರ ವಿಶ್ವಾಸ ಪ್ರೀತಿ ಒಂದಿದ್ದರೆ ಅವರ ಸೇವೆ ಮಾಡಲು ಅಧಿಕಾರ ನೆಪ ಮಾತ್ರ, ಅಧಿಕಾರವಿದ್ದರೆ ಸರ್ಕಾರದ ಸೌಲಭ್ಯ ಕಲ್ಪಿಸಬಹುದು ಆದರೆ ಸೇವೆ ನಿರಂತರವಾಗಿ ಇದ್ದೇ ಇರುತ್ತದೆ ಎಂದರು.
ಸೋತಿರಬಹುದು ಆದರೆ ಜನರಿಂದ ದೂರವಿಲ್ಲ ಇಂದಿಗೂ ನಾನು ಜನರ ಜೊತೆಯೇ ಇದ್ದೇನೆ ಎಂದರು. ನನ್ನ ಆಡಳಿತಾವಧಿಯಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳು ಇಂದು ಮಾತನಾಡುತ್ತಿವೆ ಇದೇ ನನಗೆ ತೃಪ್ತಿ ತಂದಿದೆ ಎಂದರು. ದಾವಣಗೆರೆಯೂ ಬಿಜೆಪಿ ಪಕ್ಷಕ್ಕೆ ಎಂದೆಂದಿಗೂ ಭದ್ರಕೋಟೆ, ಸೋತ ತಕ್ಷಣ ಬಿಜೆಪಿ ಕತೆ ಮುಗಿತು ಎಂದಲ್ಲಾ, ನಮ್ಮ ಪಕ್ಷಕ್ಕೆ ಕಾರ್ಯಕರ್ತರೇ ಶಕ್ತಿ ಪಕ್ಷ ಸಂಘಟನೆ ಮುಂದುವರೆಯುತ್ತದೆ ಎಂದು ಜಿ.ಎಂ. ಸಿದ್ದೇಶ್ವರರವರು ಮಾದ್ಯಮದವರೊಂದಿಗೆ ಮಾತಾಡುತಾ, ಇನ್ನೂ ಬಾಡದ ಆನಂದರಾಜು ಅವರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಅವರು ಚುನಾವಣೆ ಸಂದರ್ಭದಲ್ಲಿ ನಮ್ಮ ಪರವಾಗಿ ಬೆಂಬಲಕ್ಕೆ ನಿಂತಿದ್ದರು, ಪ್ರಾಮಾಣಿಕವಾಗಿ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡಿದ್ದಾರೆ, ಇಂದು ಉದ್ಯಮಿಯಾಗಿ ಬೆಳೆಯುತ್ತಿರುವುದು ಸಂತೋಷ ಇನ್ನೂ ಉದ್ಯಮಿಯಾಗಿ ದೊಡ್ಡಮಟ್ಟಕ್ಕೆ ಬೆಳಯಲಿ ಎಂದು ಶುಭಕೋರಿದರು. ಈ ವೇಳೆ ಶಾಸಕರಾದ ಬಿ.ಪಿ. ಹರೀಶ್, ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷರಾದ ವೀರೇಶ್ ಹನಗವಾಡಿ.ಬಿಎಸ್.ಜಗದೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ರಾಜ್ಯ ಅಹಿಂದ ಹಾಗೂ ಬಿಜೆಪಿ ಮುಖಂಡ ಎನ್.ಆರ್.ಲಕ್ಷ್ಮಿಕಾಂತ್.ಜನತಾವಾಣಿ ಸಂಪಾದಕ ಎಂಎಸ್.ವಿಕಾಶ್.ಪ್ರೆಸ್ ಕ್ಲಬ್ ಅಧ್ಯಕ್ಷ ಬಡದಾಳ್ ನಾಗರಾಜ್ ಉದ್ಯಮಿ ಎಂ.ಆನಂದ್ ರವರನ್ನ ಸನ್ಮಾನಿಸಲಾಯಿತು.