
ಭದ್ರಾವತಿ : ತಾಲೂಕು ವೀರಶೈವ ಮಹಾಸಭಾ ಚುನಾವಣೆಯಲ್ಲಿ ಅಭೂತಪೂರ್ವ ಬೆಂಬಲ ನೀಡಿದ ಸಮಸ್ತ ಸಮಾಜ ಬಂಧುಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಪರಾಜಿತ ಅಭ್ಯರ್ಥಿ ವಾಗೀಶ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಚುನಾವಣೆ ಕೇವಲ ನೆಪ ಮಾತ್ರ ಚುನಾವಣೆ ನಂತರ ಎಲ್ಲರೂ ಒಂದ ಸಮಾಜದ ಅಭಿವೃದ್ಧಿಯೇ ನಮ್ಮ ಗುರಿ. ಸಮಾಜದ ಹಿತದೃಷ್ಟಿಯಿಂದ ಎಲ್ಲರೂ ಒಟ್ಟುಗೂಡಿ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.
ನಮ್ಮ ತಂಡದಲ್ಲಿ ಐದು ಜನ ಗೆದ್ದಿದ್ದು, ಅವರಿಗೂ ನಾನು ಅಭುನಂದನೆ ಸಲ್ಲಿಸುತ್ತೇನೆ. ನನ್ನ ಎದುರಾಳಿ ತಂಡದಲ್ಲಿ ಗೆದ್ದಿರುವ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಈ ಬಾರಿ ಸಾಕಷ್ಟು ಮಳೆ ಬಂದರೂ, ಮತದಾರರು ತಾ ಮುಂದು, ನಾ ಮುಂದು ಎಂದು ಮತ ಹಾಕಿದ್ದಾರೆ. ಈ ಬಾರಿ ಮತದಾರರ ಸಂಖ್ಯೆ 1300 ಇದ್ದು, ಶೇ.95 ರಷ್ಟು ಮತದಾನವಾಗಿದೆ. ಮುಂದಿನ ಬಾರಿ ಇನ್ನಷ್ಟು ಸಮುದಾಯದ ಜನರು ಸದಸ್ಯರಾಗಲಿರುವರು ಎಂದರು.

ಜೇಡಿಕಟ್ಟೆ ನಿವಾಸಿಯಾದ ನಾನು ಕಳೆದ ೨೦ ವರ್ಷದಿಂದ ಮಹಾಸಭಾ ಸದಸ್ಯನಾಗಿ ಸಮಾಜದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಅನೇಕ ಹಿರಿಯರ ಬೆಂಬಲವಿದ್ದು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ನನ್ನನ್ನು ಬೆಂಬಲಿಸಿದರು.
ಮಹಾಸಭಾದ ಕಚೇರಿ ಸ್ಥಾಪನೆ, ಸಮಾಜದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ, ಆರ್ಥಿಕ ಸಹಕಾರ, ೨ಎ ಮೀಸಲಾತಿ, ರಾಜಕೀಯ ಪ್ರಾತಿನಿಧ್ಯಕ್ಕಾಗಿ ಶ್ರಮಿಸುವುದಾಗಿ ನಾನು ಭರವಸೆ ನೀಡಿದ್ದಾರೆ. ಒಟ್ಟಾರೆ ಗೆದ್ದವರಿಗೆ ಅಭಿನಂದನೆ ತಿಳಿಸುತ್ತಾ, ಎಲ್ಲರೂ ಒಟ್ಟುಗೂಡಿ ಕೆಲಸ ಮಾಡುವುದಷ್ಟೇ ನನ್ನ ಧ್ಯೇಯ ಎಂದಿದ್ದಾರೆ