
ಬೆಂಗಳೂರು: ಮಾಜಿ ಪ್ರಧಾನಿ ಜವಹರಲಾಲ್ ನೆಹರು ಅವರ ಜನ್ಮದಿನವಾದ ನವೆಂಬರ್ 14ರಿಂದ 20ರವರೆಗೆ ರಾಜ್ಯಾದ್ಯಂತ ಸಹಕಾರಿ ಸಪ್ತಾಹ ಆಚರಣೆಯಾಗಲಿದೆ. ಎಲ್ಲ ಸಹಕಾರಿಗಳು ಪಾಲ್ಗೊಳ್ಳುವ ಮೂಲಕ ಪಕ್ಷಾತೀತವಾಗಿ ಸಹಕಾರಿ ಹಬ್ಬ ಆಚರಿಸಲು ನಿರ್ಧರಿಸಲಾಗಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.
ರಾಜ್ಯ ಸಹಕಾರ ಮಹಾಮಂಡಳ ಹಾಗೂ ವಿವಿಧ ರಾಜ್ಯ ಮಟ್ಟದ ಸಹಕಾರಿ ಒಕ್ಕೂಟಗಳೊಂದಿಗೆ ವಿಧಾನಸೌಧದಲ್ಲಿ ಪೂರ್ವಭಾವಿ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರದಿಂದ ಖರ್ಚುವೆಚ್ಚ ಪಡೆಯದೆ ಸಹಕಾರಿ ಸಂಸ್ಥೆಗಳೇ ಎಲ್ಲವನ್ನೂ ಭರಿಸಲಿವೆ. 7 ದಿನಗಳ ಆಚರಣೆ ವೇಳೆ ಪರಿಣಿತರಿಂದ ಸಹಕಾರಿ ಕ್ಷೇತ್ರದ ಬಗ್ಗೆ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಯಾವುದೇಸಹಕಾರಿರತ್ನ ಪ್ರಶಸ್ತಿಗೆ ಭಾಜನವಾಗುವವರ ಪಟ್ಟಿ ಬಗ್ಗೆ ಮುಂದಿನ ದಿನಗಳಲ್ಲಿ ವಿವರ ಒದಗಿಸಲಾಗುವುದು.
ಕಳೆದೊಂದು ದಶಕದಲ್ಲಿ ಸಹಕಾರಿ ಕ್ಷೇತ್ರದಲ್ಲಿನ ಆಗುಹೋಗುಗಳ ಕುರಿತು ಪ್ರತಿಕ್ರಿಯಿಸಿದ ಸಚಿವರು. ಸಹಕಾರಿ ಸಂಸ್ಥೆಗಳ ಆರ್ಥಿಕ ವ್ಯವಸ್ಥೆ ನಿಯಂತ್ರಣ ಸರ್ಕಾರದ ವ್ಯವಸ್ಥೆ ಗೆ ಬರುತ್ತದೆ. ಕೆಲವು ಸಹಕಾರಿ ಬ್ಯಾಂಕ್ಗಳಲ್ಲಿ ಆಗಿರುವ ಅವ್ಯವಹಾರ ಗಮನಕ್ಕೆ ಬಂದಿದ್ದು, ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಚ್ಚರಿಸಿದರು.

ಸೌಹಾರ್ದ ಸಹಕಾರಿ ಸಂಸ್ಥೆಗಳಲ್ಲಿ ಹಣ ದುರ್ಬಳಕೆ ಆಗುತ್ತಿರುವ ಬಗ್ಗೆ ಸಾಕಷ್ಟು ನಿಯಂತ್ರಣಕ್ಕೆ ಬರಲ್ಲ, ಸೌಹಾರ್ದ ಒಕ್ಕೂಟವೇ ಕಾಯ್ದೆ ಮಾಡಿಕೊಂಡಿದೆ. ರೈತರ ಭೂಮಿ ಮತ್ತು ಬೆಳೆ ಆಧರಿಸಿ ಸಾಲದ ಪ್ರಮಾಣವನ್ನು ನಿಗದಿಗೊಳಿಸಲಾಗುತ್ತದೆ ಎಂದರು. ಮಹಾಮಂಡಲದ ಅಧ್ಯಕ್ಷ ರಾಜೇಂದ್ರ ಕುಮಾರ್, ಸಿ.ಎಸ್.ನಾಡಗೌಡ ಜಗದೀಶ್, ಸೇರಿದಂತೆ ಇತರರು ಇದ್ದರು.