
ಬಿಜೆಪಿಯಲ್ಲಿನ ಎಲ್ಲಾ ಗೊಂದಲಗಳು ಫೆ.20ರೊಳಗೆ ಬಗೆಹರಿಸುವ ಲಕ್ಷಣಗಳು ಕಾಣಿಸತೊಡಗಿವೆ. ಭಿನ್ನ ಬಣದ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದರ ಜೊತೆಗೆ ಪಕ್ಷದೊಳಗಿನ ಬಣ ರಾಜಕೀಯಕ್ಕೆ ಬ್ರೇಕ್ ಹಾಕುವುದಕ್ಕೆ ಹೈಕಮಾಂಡ್ ಸಿದ್ಧತೆ ನಡೆಸಿದೆ. ಇದರ ಜೊತೆಗೆ ಈ ವಾರದೊಳಗೆ ಅಂತಿಮ ನಿರ್ಣಯ ಹೊರಬೀಳುವ ಸಾಧ್ಯತೆ ಇದೆ. ಪಕ್ಷದ ನಾಯಕರ ವಿರೋಧದ ನಡುವೆಯೇ ಬಿ.ವೈ.ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಮುಂದುವರಿಯುವ ನಿರೀಕ್ಷೆಯಿದೆ.
ರಾಜ್ಯ ಬಿಜೆಪಿಯಲ್ಲಿನ ಬಿಕ್ಕಟ್ಟಿಗೆ ಮದ್ದರಿಯಲು ಮುಂದಾಗಿರುವ ಕೇಂದ್ರ ಬಿಜೆಪಿ ನಾಯಕರು
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಶೋಕಾಸ್ ನೋಟಿಸ್ ನೀಡಿ ಬಂಡಾಯಕ್ಕೆ ಕಡಿವಾಣ ಹಾಕಿದಂತಿದೆ.
ಭವಿಷ್ಯದಲ್ಲಿ ಬಿಜೆಪಿಯನ್ನು ಗೆಲುವಿನತ್ತ ಕೊಂಡೊಯ್ಯುವ ನಾಯಕತ್ವದ ಗುಣ ಬಂಡಾಯ ನಾಯಕರಿಗೆ ಇದೆಯಾ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ವಿಜಯೇಂದ್ರ ಅವರು ಗಳಿಸಿದ ಯಶಸ್ಸನ್ನು ಅವರು ಗಳಿಸಬಹುದೇ ಲೆಕ್ಕಾಚಾರದಲ್ಲಿ ಹೈಕಮಾಂಡ್ ನಾಯಕರು ಇದ್ದಾರೆ.


ಕೇಂದ್ರ ಸಚಿವ ವಿ ಸೋಮಣ್ಣ ಅವರ ವಯಸ್ಸು ಮತ್ತು ನಿಷ್ಠೆಯಿಂದ ಸಂದೇಹ ಎದುರಿಸಿತ್ತಿದ್ದಾರೆ. ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಅವರ ಪ್ರಭಾವಳಿ ಕುಂದಿಸುವ ಸಾಮರ್ಥ್ಯ ಸೋಮಣ್ಣ ಅವರಿಗಿದೆಯೇ ಎಂಬುದು ಬಹುದೊಡ್ಡ ಪ್ರಶ್ನೆಯಾಗಿದೆ. ರಾಜಕೀಯ ಭದ್ರತೆಗಾಗಿ ಕಾಂಗ್ರೆಸ್ ಜೊತೆಗಿನ ಅವರ ಹಿಂದಿನ ಒಡನಾಟಗಳು ಸಂಶಯ ಹುಟ್ಟುಹಾಕಿದೆ.
ಇನ್ನು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆರೋಗ್ಯದ ಕಾರಣದಿಂದ ನಾಯಕತ್ವದ ರೇಸ್ ನಿಂದ ಹೊರಗುಳಿದಿದ್ದಾರೆ, ಏಕೆಂದರೆ ಯಾವುದೇ ಲಿಂಗಾಯತ ನಾಯಕನ ಬದಲಿಗೆ ಮತ್ತೊಂದು ಲಿಂಗಾಯತ ನಾಯಕನನ್ನೇ ಆಯ್ಕೆಮಾಡಬೇಕಾಗುತ್ತದೆ. ಈ ಮಾನದಂಡ ಶಾಸಕ ಸುನಿಲ್ ಕುಮಾರ್ ಅವರಿಗೆ ಕೈತಪ್ಪುವಂತೆ ಮಾಡಿದೆ.
ಎಸ್ಟಿ ಸಮುದಾಯದ ಪ್ರಭಾವಿ ನಾಯಕ ಬಿ ಶ್ರೀರಾಮುಲು ಆದ್ಯತೆಯಾಗಿದ್ದಾರೆ. ಆದರೆ, ಕೇವಲ ಎಸ್‌ಸ್ಟಿ ಮೀಸಲು ಕ್ಷೇತ್ರಗಳು ಇರುವುದು 15 ಕ್ಷೇತ್ರಗಳು ಮಾತ್ರ. ಉತ್ತರ ಕರ್ನಾಟಕದ ಬಹುತೇಕ ಕ್ಷೇತ್ರಗಳಲ್ಲಿ ಲಿಂಗಾಯತರೇ ನಿರ್ಣಾಯಕ. ಯಾರು ಶಾಸಕರು ಆಗಬೇಕು ಎಂಬುವುದನ್ನು ಈ ಸಮುದಾಯವೇ ನಿರ್ಧರಿಸುತ್ತದೆ.ಒಟ್ಟಾರೆ.. ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ಅವರ ಮುಂದುವರಿಕೆ ಬಹುತೇಕ ಖಚಿತವಾಗಿದೆ.
1 Comment
ಇದರಲ್ಲಿ ಬರುವ ಎಲ್ಲಾ ವಿಷಯಗಳು ತುಂಬಾ ಆಳವಾಗಿ ಜನರನ್ನು ತಲುಪುತ್ತದೆ….