ನ್ಯಾಮತಿ.; ತಾಲೂಕಿನ ಗೋವಿನಕೋವಿ ಗ್ರಾಮದ ಹಾಲಸ್ವಾಮೀಜಿಯ ಬೃಹನ್ಮಠದ ಲಿಂಗೈಕ್ಯ ಶ್ರೀ ಸದ್ಗುರು ಶಿವಯೋಗಿ ಮಹಾಲಿಂಗ ಹಾಲಸ್ವಾಮೀಜಿ , ಸಣ್ಣಹಾಲಸ್ವಾಮೀಜಿಯವರ ಪುಣ್ಯರಾಧನೆಯ ಅಂಗವಾಗಿ ಭಾವ ಚಿತ್ರ ಭವ್ಯ ಮೆರವಣಿಗೆ ಗ್ರಾಮದ ರಾಜ ಬೀದಿಯಲ್ಲಿ ನಡೆಯಿತು.
ಲಿಂಗೈಕ್ಯ ಶ್ರೀ ಸದ್ಗುರು ಶಿವಯೋಗಿ ಮಹಾಲಿಂಗ ಹಾಲಸ್ವಾಮೀಜಿಯ 30ನೇ ವರ್ಷದ ಹಾಗೂ ಸಣ್ಣ ಹಾಲಸ್ವಾಮೀಜಿಯ 12ನೇ ವರ್ಷದ ಪುಣ್ಯರಾಧನೆ ಕಾರ್ಯಕ್ರಮ ಅಂಗವಾಗಿ ಹೊನ್ನಾಳಿ ಹಿರೆಕಲ್ಮಠದ ಡಾ.ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿಯವರ ಇಷ್ಟಲಿಂಗ ಮಹಾ ಪೂಜೆ ಹಾಗೂ ಶ್ರೀ ಹಾಲಸ್ವಾಮಿ ಮಠದ ಕರ್ತೃಗದ್ದಿಗೆಗಳಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ , ಮಹಾ ಮಂಗಳಾರತಿ, ಗಂಗಾಪೂಜಾ, ಗಣಪತಿ, ಗುರುಕಲಶ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಹಾಲಸ್ವಾಮೀಜಿ ಮಠದ ನಿಯೋಜಿತ ಶಿವಯೋಗಿ ಮಹಾಲಿಂಗ ಹಾಲ ಸ್ವಾಮೀಜಿಯ ನೇತೃತ್ವದಲ್ಲಿ ಮಂತ್ರಘೋಷಣೆಯಲ್ಲಿ ನಡೆಸಲಾಯಿತು.
ರಾಜ ಬೀದಿಗಳಲ್ಲಿ ಮೆರವಣಿಗೆ
ಪೂಜೆಯ ಬಳಿಕ ಹಾಲ ಸ್ವಾಮೀಜಿಯ ಬೃಹನ್ಮಠದ ಲಿಂಗೈಕ್ಯ ಶ್ರೀ ಸದ್ಗುರು ಶಿವಯೋಗಿ ಮಹಾಲಿಂಗ ಹಾಲ ಸ್ವಾಮೀಜಿ , ಸಣ್ಣ ಹಾಲಸ್ವಾಮೀಜಿಯವರ ಭಾವ ಚಿತ್ರವನ್ನು ಅಲಂಕೃತ ಪಲ್ಲಕಿಯಲ್ಲಿ ಇಟ್ಟು ಗ್ರಾಮದ ರಾಜ ಬೀದಿಯಲ್ಲಿ ಮೆರವಣಿಗೆಯನ್ನು ಸಕಲ ಜನಪದ ಮಂಗಳ ವಾದ್ಯಗಳೊಂದಿಗೆ ನಡೆಸಲಾಯಿತು.
ಹಾಲಸ್ವಾಮಿ ಸೇವಾ ಸಮಿತಿಯ ಗೌರವಾಧ್ಯಕ್ಷ ಎಚ್. ಪಾಲಾಕ್ಷಪ್ಪ ಗೌಡ್ರು, ಅಧ್ಯಕ ಎಸ್.ಇ.ರಮೇಶ್, ಕಾರ್ಯದರ್ಶಿ ವಿ.ಎಚ್. ರುದ್ರೇಶ, ಹಾಲಸ್ವಾಮಿ ಸೇವಾ ಸಮಿತಿ ಪದಾಕಾರಿಗಳಾದ ಶಿವಮೂರ್ತಿಪ್ಪ, ಮಧು , ರಾಜೇಶ್ ಗೌಡ , ಡಿ.ಎಸ್.ಸುರೇಂದ್ರಗೌಡ, ಹೊನ್ನಾಳಿ ತಾಲೂಕು ಬೇಡ ಜಂಗಮ ಸೇವಾ ಸಮಾಜದ ಅಧ್ಯಕ್ಷ ಬೈರನಹಳ್ಳಿ ಪಂಚಾಕ್ಷರಯ್ಯ , ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಗಂಗಾಧರಯ್ಯ , ಕಾರ್ಯ ನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ಸಂಚಾಲಕ ಹೊನ್ನಾಳಿ ಎಂ.ಎಸ್.ಶಾಸ್ತ್ರಿಹೊಳೆಮಠ್, ಸದಾಶಿವಯ್ಯ ಹಿರೇಮಠ್, ಎಪಿಎಂಸಿ ಮಾಜಿ ಅಧ್ಯಕ್ಷ ದಿಡಗೂರು ಪ್ರಕಾಶ್ ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು