ದಾವಣಗೆರೆ : ದೇವರಪೂಜೆಯಲ್ಲಿಆರತಿಗೆ ಮಹತ್ವದ ಸ್ಥಾನವಿದೆ. ಆರತಿ ಬೆಳಗುವುದಕ್ಕೂ ಧಾರ್ಮಿಕ ಗ್ರಂಥ ಮತ್ತು ಪುರಾಣಗಳಲ್ಲಿ ಕೆಲವೊಂದುವಿಶೇಷನಿಯಮಗಳನ್ನು, ಉಲ್ಲೇಖಿಸಲಾಗಿದೆ. ದೀಪವನ್ನು ಯಾವ ದಿಕ್ಕಿನಲ್ಲಿ ಇಡಬೇಕು. ಎಷ್ಟು ಬಾರಿ ದೇವರಿಗೆ ಆರತಿ ಮಾಡಬೇಕು, ಹೇಗೆ ಆರತಿ ಮಾಡಬೇಕು ಎಂಬೆಲ್ಲಾ ನಿಯಮಗಳನ್ನು ಶಾಸ್ತ್ರದಲ್ಲಿ ನೋಡಬಹುದು. ಈ ನಿಯಮಗಳನ್ನು ಪಾಲಿಸುವ ಮೂಲಕ ದೇವರ ಪೂಜೆಯನ್ನು ಸಾಂಗವಾಗಿಮಾಡಬಹುದಾಗಿದೆ
🪔,ಆರತಿಯಮಹತ್ವಯಾವುದೇ, ಪೂಜೆ, ಹೋಮ ಅಥವಾ ಇತರ ದೇವತಾಕಾರ್ಯದ ಬಳಿಕ ದೇವರಿಗೆ ಆರತಿ ಬೆಳಗಿದಾಗ ಮಾತ್ರಅದುಪೂರ್ಣಗೊಳ್ಳುತ್ತದೆ ಎಂಬ ನಂಬಿಕೆ ಇದೆ. ಸನಾತನ ಹಿಂದೂಧಾರ್ಮಿಕನಂಬಿಕೆಗಳಲ್ಲಿ ಆರತಿಗೂಅದರದ್ದೇಆದಮಹತ್ವ ಮತ್ತುನಿಯಮಾವಳಿಗಳೂಇವೆ.
🪔ಸರಿಯಾದ ವಿಧಾನದಲ್ಲಿ ಮತ್ತು ನಿಯಮಗಳೊಂದಿಗೆ ಶ್ರದ್ಧೆಯೊಂದಿಗೆ ಮಾಡುವ ಆರತಿಯನ್ನು ದೇವರು ಸ್ವೀಕರಿಸುತ್ತಾರೆ ಎಂಬುದನ್ನು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಆರತಿ ಪಂಚಭೂತಗಳ ಸಂಕೇತ ಕೂಡಾ ಹೌದು. ಈ ಜಗತ್ತು ಭೂಮಿ, ನೀರು, ಅಗ್ನಿ, ವಾಯು ಮತ್ತುಆಕಾಶಎಂಬಪಂಚಭೂತಗಳಿಂದ ಸೃಷ್ಟಿಯಾಗಿದೆ.
🪔ಅಂತೆಯೇ, ಆರತಿಯಲ್ಲೂ ನಾವು ಇದರ ಸಂಕೇತವನ್ನು ನೋಡಬಹುದು. ಕರ್ಪೂರ ಭೂಮಿಯ ಸುಗಂಧವನ್ನು ಪ್ರತಿನಿಧಿಸಿದರೆ, ತುಪ್ಪ ನೀರಿನ ಹರಿವು, ಪ್ರಜ್ವಲಿಸುವ ಜ್ವಾಲೆ ಅಗ್ನಿಯನ್ನೂ, ಜ್ವಾಲೆಯ ಚಲನೆ ಗಾಳಿಯನ್ನೂ, ಗಂಟೆ, ಶಂಖ ಮಂಗಳವಾದ್ಯಗಳ ನಿನಾದ ಆಕಾಶವನ್ನೂ ಪ್ರತಿನಿಧಿಸುತ್ತವೆ.
🪔ಆರತಿಯ ನಿಯಮಒಂದೇ ಸ್ಥಳದಲ್ಲಿ ನಿಂತು ದೇವರ ಆರತಿ ಮಾಡಬೇಕು. ಅದೂ ಅಲ್ಲದೆ, ಆರತಿಮಾಡುವಾಗಯಾವಾಗಲೂ, ಸ್ವಲ್ಪ ನಮಸ್ಕರಿಸಿ ಆರತಿ ಮಾಡಿ. ಸದಾ ಭಗವಂತನ ಪಾದದಿಂದ ಆರತಿಯನ್ನು ಆರಂಭಿಸಬೇಕು. ಮೊದಲು ದೇವರ ಪಾದಕ್ಕೆ ನಾಲ್ಕು ಬಾರಿ, ಎರಡು ಬಾರಿ ಹೊಕ್ಕುಳ ಕಡೆಗೆ, ಒಂದು ಸಲ ಮುಖದ ಕಡೆಗೆ ಮತ್ತು ಏಳು ಬಾರಿ ದೇವರ ಎಲ್ಲಾ ಭಾಗಗಳಿಗೆ ಆಗುವಂತೆ ಆರತಿ ಬೆಳಗಿ. ಅಂದರೆ, ಈ ಒಟ್ಟು ಹದಿನಾಲ್ಕು ಸಂಖ್ಯೆ ಹದಿನಾಲ್ಕು ಭುವನಗಳನ್ನು ಪ್ರತಿನಿಧಿಸುತ್ತದೆ. ಹೀಗೆ ಮಾಡುವುದರಿಂದ ನಿಮ್ಮ ಪೂಜೆ, ಭಕ್ತಿಯು ದೇವರಲ್ಲಿ ಲೀನವಾಗಿರುವ ಹದಿನಾಲ್ಕು ಭುವನಗಳನ್ನು ತಲುಪುತ್ತದೆ ಎಂಬುದು ನಂಬಿಕೆ.
🪔ಆರತಿಯಿಂದ ಪೂಜಾಫಲ
ದೇವರ ಪಾದಕಮಲಗಳನ್ನು ಮನಸ್ಸಿನಲ್ಲಿಟ್ಟುಕೊಂಡು
ಪೂರ್ಣಭಕ್ತಿಮತ್ತುನಂಬಿಕೆಯಿಂದ,ಆರತಿಮಾಡಿ.ಏಕಭಕ್ತಿಯಿಂದ ನೀವು ಮಾಡುವ ಪೂಜೆ ಭಗವಂತನನ್ನು ತಲುಪುತ್ತದೆ. ಇಂತಹ ಮನೆಯಲ್ಲಿ ದೇವರು ನೆಲೆಯಾಗಿರುತ್ತಾನೆ ಎಂಬುದು ನಂಬಿಕೆ.ಎಲ್ಲರಿಗೂಪೂಜಾ
ಮಂತ್ರ ತಿಳಿದಿರುವುದಿಲ್ಲ. ಆದರೆ, ದೇವರ ಪೂಜಾ ಕೈಂಕರ್ಯದ ಸಂದರ್ಭದಲ್ಲಿ ಭಕ್ತಿಯಿಂದ ಆರತಿ ಮಾಡಿದರೆ ಆತನ ಪೂಜೆಯನ್ನು ದೇವರು ಸ್ವೀಕರಿಸುತ್ತಾರೆ ಎಂಬ ವಿಶೇಷ ನಿಯಮವನ್ನುಸ್ಕಂದಪುರಾಣದಲ್ಲೂ,ಉಲ್ಲೇಖಿಸಲಾಗಿದೆ. ಇದು ಆರತಿಗೆ ಇರುವ ಮಹತ್ವವನ್ನೂ ತಿಳಿಸುತ್ತದೆ.
🪔ಆರತಿಯಿಂದಒಳಿತುತುಪ್ಪದ ದೀಪದಿಂದಆರತಿಮಾಡುವವರು,ಸ್ವರ್ಗದಲ್ಲಿಸ್ಥಾನಪಡೆಯುತ್ತಾರೆ,ಎನ್ನುತ್ತದೆ ಶಾಸ್ತ್ರ. ಕರ್ಪೂರದಿಂದ ಆರತಿ ಮಾಡುವುದರಿಂದ ಅವರು ಅನಂತತೆಗೆ ಪ್ರವೇಶ ಪಡೆಯುತ್ತಾರೆ. ಪೂಜೆಯ ಸಂದರ್ಭದಲ್ಲಿ ಮಾಡುವ ಆರತಿಯನ್ನು ನೋಡುವವರು ಪರಮಸ್ಥಾನವನ್ನುಪಡೆಯುತ್ತಾರೆ, ಎನ್ನುತ್ತದೆ ಶಾಸ್ತ್ರ, ಪುರಾಣ.
🪔,ಅಲ್ಲದೆ, ಶ್ರದ್ಧಾ ಭಕ್ತಿಯಿಂದ ಆರತಿಯನ್ನುತೆಗೆದುಕೊಳ್ಳುವುದರಿಂದ, ಭಕ್ತರು ಆಧ್ಯಾತ್ಮಿಕ ಉನ್ನತಿಯನ್ನು ಪಡೆಯುತ್ತಾರೆ. ಈ ಭಕ್ತಿ ಭಾವ ಮನಸ್ಸಿನಲ್ಲೂ ನೆಮ್ಮದಿ ಮೂಡಿಸುತ್ತದೆ. ಬೆಳಗುವ ಆರತಿಯಲ್ಲಿ ಕಾಣುವ ದೇವರ ಸುಂದರ ನೋಟವೂ ಮನಸ್ಸಿಗೆ ಆನಂದ ನೀಡುತ್ತದೆ. ಹೀಗಾಗಿ, ಆರತಿಗೆ ಪೂಜೆಯಲ್ಲಿ ಸಾಕಷ್ಟು ಮಹತ್ವವಿದೆ.
🪔ಪಂಚಮುಖಿ, ಸಪ್ತಮುಖಿ
ಪೂಜೆಯ ಸಂದರ್ಭದಲ್ಲಿ ಪಂಚಮುಖಿ ಜ್ಯೋತಿ ಅಥವಾ ಸಪ್ತಮುಖಿ ಜ್ಯೋತಿಯೊಂದಿಗೆ ಆರತಿ ಬೆಳಗುವುದು ಕೂಡಾ ಉತ್ತಮಎಂಬುದನ್ನುಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಅಂದರೆ, ದೀಪದಲ್ಲಿ ಐದು ಅಥವಾ ಏಳು ಬತ್ತಿಗಳನ್ನು ಇಟ್ಟು ದೇವರಿಗೆ ಆರತಿ ಮಾಡಬೇಕು. ಶಂಖ ಮತ್ತು ಜಾಗಟೆ ಅಥವಾ ಗಂಟೆಯನ್ನು ಆರತಿಯ ವೇಳೆ ಬಳಸಬೇಕು.ಆರತಿಯಮಧ್ಯದಲ್ಲಿ, ಶಂಖವನ್ನು ಊದುವುದು ಒಳ್ಳೆಯದು.
🔔ಆರತಿಯ ನಂತರ ಎರಡೂ ಕೈಗಳಿಂದ ಸ್ವೀಕರಿಸಬೇಕೆಂಬ ನಿಯಮವಿದೆ. ಆರತಿಯ ಬೆಳಕಿನಲ್ಲಿ ದೇವರ ಶಕ್ತಿ ಹೀರಲ್ಪಡುತ್ತದೆ ಎಂಬುದು ನಂಬಿಕೆ. ಇದರಿಂದ ಭಕ್ತರು ತಮ್ಮ ಕೈಗಳನ್ನು ದೀಪದ ಮೇಲ್ಭಾಗದಲ್ಲಿ ತಿರುಗಿಸಿ ತಮ್ಮ ತಲೆಯಮೇಲೆತೆಗೆದುಕೊಳ್ಳುತ್ತಾರೆ. ಈ ಭಕ್ತಿ ಭಾವ ಆಸ್ತಿಕರಿಗೆ ಮಾನಸಿಕ ನೆಮ್ಮದಿಯನ್ನೂ ತರುತ್ತದೆ, 🙏
🚩 ಭಗವಂತ ಶ್ರೀ ಪರಶುರಾಮ🚩
ಇಂತಿ ಜ್ಯೋತಿಷ್ಯ ಸೇವೆಯಲ್ಲಿ ತಮ್ಮವ ಪ್ರಾಚೀನಶಾಸ್ತ್ರಾಸಕ್ತ
🌸ಡಾ.ಬಿ.ಜಿ.ಏಕಾಕ್ಷರಪ್ಪ, 9448554426