ದಾವಣಗೆರೆ : ಸೂರ್ಯಚಂದ್ರ ಇರೋದು ಎಷ್ಟು ಸತ್ಯವೋ ಸಿದ್ದರಾಮಯ್ಯ ರಾಜೀನಾಮೆ ನೀಡೋದು ಅಷ್ಟೆ ಸತ್ಯ ಎಂದು ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಹೇಳಿದರು.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,
ಸರ್ಕಾರ ಕೊನೆ ದಿನಗಳನ್ನ ಎಣಿಸುತ್ತಿದೆ.ಕಾಂಗ್ರೆಸ್ ಸರ್ಕಾರ ಟೇಕ್ ಆಫ್ ಆಗಿಲ್ಲ. ಐಸಿಯುವಿನಲ್ಲಿ ಸರ್ಕಾರ ಯಾವಾಗಾದ್ರೂ ಪತನ ಆಗಬಹುದು. ಈಗಾಗಲೇ ಈಡಿ ನೋಟಿಸ್ ಕೊಟ್ಟಿದೆ. ಸಿಎಂ ಕುಟುಂಬದವರನ್ನ ವಿಚಾರಣೆ ನಡೆಸುತ್ತಿದೆ. ಅದಕ್ಕಾಗಿ ಚಾಮರಾಜನಗರದಲ್ಲಿ ರಾಜಕೀಯ ಕೊನೆ ದಿನಗಳ ಬಗ್ಗೆ ಮಾತನಾಡಿದ್ದಾರೆ. ಸೂರ್ಯ ಚಂದ್ರ ಇರೋದು ಎಷ್ಟು ಸತ್ಯವೋ ಹಗರಣಗಳ ವಿಚಾರವಾಗ ಸಿದ್ದರಾಮಯ್ಯ ರಾಜೀನಾಮೆ ನೀಡೋದು ಅಷ್ಟೆ ಸತ್ಯ.ಎಲ್ಲಾ ಭ್ರಷ್ಟಾಚಾರ ವನ್ನು ಮುಚ್ಚಿಹಾಕಿಕೊಳ್ಳಲು ಹಾಸನದಲ್ಲಿ ಸಮಾವೇಶ ಮಾಡಿದ್ದಾರೆ. ಮತಾಂದ ಜಮೀರ್ ಸೂಚನೆ ಮೇರೆಗೆ ವಕ್ಫ್ ಗೆ ಭೂಮಿಯನ್ನು ಸೇರಿಸಿದ್ದಾರೆ ಎಂದರು.
7 ತಿಂಗಳಲ್ಲಿ ದಾವಣಗೆರೆಯಲ್ಲಿ 135 ನವಜಾತ ಶಿಶುಗಳು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ 300 ಬಾಣಂತಿಯರ ಸಾವಾಗಿದೆ. ಇಷ್ಟೇಲ್ಲ ಲೋಪಗಳು ಇದ್ದರೂ ಹಾಸನದಲ್ಲಿ ನಿಮ್ಮನ್ನು ನೀವು ವೈಭವಿಕರಿಸಿದ್ದಾರೆ. ಶಿಶು ಬಾಣಂತಿಯರು ಸಾವನ್ನಪ್ಪಿದ ಅಸ್ಪತ್ರೆಗೆ ನೀವು ಭೇಟಿ ನೀಡಿಲ್ಲ.ದಾವಣಗೆರೆ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿಲ್ಲ ಸಭೆ ನಡೆಸಿಲ್ಲ. ನಕಲಿ ಔಷಧಿ ಪೂರೈಕೆ ಮಾಡಿ ಮಹಿಳೆಯರ ಸಾವಿಗೆ ಕಾರಣವಾಗಿದೆ.ನಕಲಿ ಔಷಧಿ ಬಗ್ಗೆ ತನಿಖೆ ನಡೆಸಲು ಒತ್ತಾಯಿಸುತ್ತೇನೆ.
ಯಾರು ಪೂರೈಕೆ ಮಾಡಿದ್ದಾರೆ ಎನ್ನುವುದರ ಬಗ್ಗೆ ತನಿಖೆ ನಡೆಸಿ. ಕೂಡಲೇ ಶರಣು ಪ್ರಕಾಶ್ ಪಾಟೀಲ್ ,ದಿನೇಶ್ ಗುಂಡುರಾವ್ ರಾಜೀನಾಮೇ ನೀಡಬೇಕು ಎಂದರು.
ಯತ್ನಾಳ್ ವಿರುದ್ದ ಸಾಪ್ಟ್ ಕಾರ್ನರ್ ತೋರಿದ ರೇಣುಕಾಚಾರ್ಯ, ಇದರ ಬಗ್ಗೆ ನಾವು ಬಹಳ ಹೇಳೋದಿಲ್ಲ. ಪಕ್ಷದ ವರಿಷ್ಟರ ಮುಂದೆ ಎಲ್ಲಾವನ್ನು ಹೇಳಿದ್ದೇವೆ. ಪರ ವಿರೋಧಗಳು ಚರ್ಚೆ ಗಳು ಈಗ ಬೇಡಾ. ರಾಜ್ಯ ನಾಯಕರಿಗೆ ರಾಷ್ಟ್ರೀಯ ನಾಯಕರಿಗೆ ಮುಜುಗರ ಮಾಡುವ ಕೆಲಸ ಮಾಡೋಲ್ಲ ಎಂದು ರೇಣುಕಾಚಾರ್ಯ ಹೇಳಿದರು