ಶಿವಮೊಗ್ಗ : ಯಾರು ತಿಪ್ಪರ್ಲಾಗ ಹೊಡೆದರೂ ಸಿದ್ದರಾಮಯ್ಯ ರಾಜೀನಾಮೆ ಕೊಡಲ್ಲ ಎಂದು ಸಚಿವ ಮಧು ಬಂಗಾರಪ್ಪ ಬಿಜೆಪಿಗೆ ಎಚ್ಚರಿಕೆ ನೀಡಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಕಚೇರಿಗಳನ್ನು ಉದ್ಘಾಟನೆ ಮಾಡುತ್ತಿದ್ದೇವೆ.ಗ್ಯಾರಂಟಿ ಯೋಜನೆಗಳ ಬಗ್ಗೆ ವಿರೋಧ ಪಕ್ಷದವರು ಹಗುರವಾಗಿ ಮಾತನಾಡುತ್ತಿದ್ದರು
ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ ಕೊಟ್ಟ ಮಾತನ್ನು ನಡೆಸಿಕೊಂಡು ಹೋಗುತ್ತದೆ.ದೇವರಾಜ್ ಅರಸು ಹಾಗೂ ಸಿದ್ದರಾಮಯ್ಯ ಮುಂದೆಯೂ ಜನರ ಪರವಾಗಿರುತ್ತಾರೆ ಎಂದರು.
ಬಿಜೆಪಿ ನಾಯಕರಿಂದ ಮೂಡಾ ಹಗರಣದಲ್ಲಿ ಸಿಎಂ ರಾಜೀನಾಮೆ ಆಗ್ರಹಿಸಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವ ಮಧುಬಂಗಾರಪ್ಪ, ಯಾರು ಸಿಟಿ ರವಿ? ಯಾರು ನಾರಾಯಣಸ್ವಾಮಿ ?ಕಾಂಗ್ರೆಸ್ ಪಕ್ಷದವರಾ? ಸಿಎಂ ರಾಜೀನಾಮೆ ಬಗ್ಗೆ ಕಾಂಗ್ರೆಸ್ ಪಕ್ಷದ ಹೈ ಕಮಾಂಡ್ ತೀರ್ಮಾನ ಮಾಡಬೇಕು.
ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲ ನಡೆಸುವ ಪ್ರಯತ್ನ ಸಂವಿಧಾನಕ್ಕೆ ವಿರುದ್ಧವಾದದ್ದು, ಹೊಟ್ಟೆ ಕಿಚ್ಚಿಗೆ ಬಿಜೆಪಿಯವರು ಶುರು ಮಾಡಿದ್ದಾರೆ ಅದಕ್ಕೆ ಜೆಡಿಎಸ್ ಅವರು ಸೇರಿದ್ದಾರೆ. ಇದಕ್ಕಾಗಿ ರಾಜ್ಯಪಾಲರ ಕಚೇರಿಯನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿಯ 67 ಶಾಸಕರೆಲ್ಲಿ ಕಾಂಗ್ರೆಸ್ ನ 137 ಶಾಸಕರೆಲ್ಲಿ ಎಂದು ತಿರುಗೇಟು ನೀಡಿದರು.
ಡಿಡಿಪಿಐ, ಬಿಇಒ ವರ್ಗಾವಣೆಗೆ ಲಂಚ ನಿಗದಿಪಡಿಸಲಾಗಿದೆ ಎಂಬ ವಿಜಯೇಂದ್ರ ಆರೋಪ ವಿಚಾರಕ್ಕೆ ಉತ್ತರಿಸಿದ ಸಚಿವ ಅವರ ಅಪ್ಪ ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ಎಷ್ಟು ಲಂಚ ಹೊಡೆದಿದ್ದಾರೆ. ಯಡಿಯೂರಪ್ಪನವರು ಯಾಕೆ ಜೈಲಿಗೆ ಹೋದರು. ಇದೇ ವಿಜೇಂದ್ರನ ಸವಾಸಕ್ಕೆ ಯಡಿಯೂರಪ್ಪ ಜೈಲಿಗೆ ಹೋದರು
ಪ್ರತಿ ಸಾರಿ ಮೂರು, ಮೂರುವರೆ ವರ್ಷವಷ್ಟೇ ಯಡಿಯೂರಪ್ಪ ಅಧಿಕಾರದಲ್ಲಿರುತ್ತಾರೆ. ಅಷ್ಟಕ್ಕೂ ನಮಗ್ಯಾಕೆ ಪ್ರಶ್ನೆ ಕೇಳ್ತಿರಾ, ನಿಮ್ಮ ಪಕ್ಷದ ನಾಯಕ ಯತ್ನಾಳ್ಗೆ ಉತ್ತರ ಕೊಡಿ. ಅವರೇನು ಹಿರಿಯರು ಅಂತೆ, ಹಿರಿಯರ ಕೈಯಲ್ಲಿ ಬೈಯಸಿಕೊಳ್ಳಲು ನಾಚಿಕೆ ಆಗಲ್ವಾ.
ಯಾರಾದ್ರೂ ವರ್ಗಾವಣೆಗೆ ಹಣ ಪಡೆದಿದ್ದಾರೆ ಎಂದರೆ ಅವನು ಏಜೆಂಟ್ ಇರಲಿ ಯಾರೇ ಇರಲಿ ಎರಡು ನಿಮಿಷದಲ್ಲಿ ಕಿತ್ತು ಬಿಸಾಕುತ್ತೇನೆ. ಶಿಕ್ಷಕರ ಸಮಸ್ಯೆಗೆ ನಾವು ಸ್ಪಂದಿಸುತ್ತೇವೆ ಅವರ ಬೇಡಿಕೆಗಳ ಈಡೇರಿಕೆಗೆ ಪ್ರಯತ್ನ ನಡೆಸುತ್ತೇವೆ.ಶಿಕ್ಷಕರ ಬೇಡಿಕೆಗೆ ರಾಜ್ಯಮಟ್ಟದಲ್ಲಿ ಕಾನೂನಿನ ತಿದ್ದುಪಡಿಯ ಅಗತ್ಯವಿದೆ. ನಾವು ಯಾವುದೇ ವರ್ಗಾವಣೆ ಮಾಡುವುದಿಲ್ಲ ಎಲ್ಲವೂ ಕೌನ್ಸಿಲಿಂಗ್ ಮೂಲಕ ನಡೆಯುತ್ತದೆ.
ವಿಮಾನ ನಿಲ್ದಾಣಕ್ಕೆ ನೈಟ್ ಲ್ಯಾಂಡಿಂಗ್ ಬಗ್ಗೆ ಕುಮಾರಸ್ವಾಮಿಯವರಿಗೆ ಮನವಿ ನೀಡಿದ್ದಾರೆ ಎಂಬ ಪ್ರಶ್ನೆಗೆ, ಅವರಿಗೆ ಯಾಕೆ ಮನವಿ ಕೊಡುತ್ತಾರೆ ರಾಜ್ಯ ಸರ್ಕಾರದ ತೆರಿಗೆ ಹಣದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಿದೆ ಎಂದರು.
ಒಂದು ವರ್ಷದಲ್ಲಿ ಸಚಿವರು ಜಿಲ್ಲೆಯಲ್ಲಿ ಏನು ಅಭಿವೃದ್ಧಿ ಮಾಡಿದ್ದಾರೆ ಎಂಬ ಬಿ ವೈ ರಾಘವೇಂದ್ರ ಪ್ರಶ್ನೆಗೆ ಆಕ್ರೋಶ ವ್ಯಕ್ತಪಡಿಸಿದ ಸಚಿವ ಮಧುಬಂಗಾರಪ್ಪ, ಗ್ಯಾರೆಂಟಿ ಯೋಜನೆಗಳ ಮೂಲಕ ಒಂದು ಗ್ರಾಮ ಪಂಚಾಯಿತಿ 9 ಕೋಟಿ ಹೋಗುತ್ತದೆ. ಇದು ಅಭಿವೃದ್ಧಿ ಅಲ್ಲವಾ?ಬಡವರಿಗೆ ಹಣ ಕೊಡುತ್ತೇವೆ, ಮಹಿಳೆಯರು ಬಸ್ ನಲ್ಲಿ ಫ್ರೀ ಓಡಾಡುತ್ತಾರೆ ಎಂಬುದಕ್ಕೆ ಅವರಿಗೆ ಹೊಟ್ಟೆ ಉರಿ ಎಂದರು.
ಪರಿಷತ್ ನಾಯಕ ನಾರಾಯಣಸ್ವಾಮಿ ಹೇಳಿಕೆಗಳಿಗೆ ಮಹತ್ವ ಕೊಡುವ ಅಗತ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿಯವರಿಂದ ವಿಮಾನ ನಿಲ್ದಾಣ ಉದ್ಘಾಟನೆ ಮಾಡಿಸಿದರು. ಆದರೆ ವಿಮಾನಗಳು ಲ್ಯಾಂಡಿಂಗ್ ಆರಂಭವಾಗಿದ್ದು ನಮ್ಮ ಸರ್ಕಾರ ಬಂದ ಮೇಲೆ ನಡೆದಿದೆ.
ಲೋಕಸಭಾ ಅಧಿವೇಶನದಲ್ಲಿ 10 ವರ್ಷದಲ್ಲಿ ಸಂಸದರಾಗಿ ರಾಘವೇಂದ್ರ ಶರಾವತಿ ಸಂತ್ರಸ್ತರ ಬಗ್ಗೆ ಮಾತನಾಡಿದ್ದಾರಾ ?ಅಷ್ಟಕ್ಕೂ ಏರ್ಪೋರ್ಟ್ ನಿರ್ಮಾಣಗೊಂಡಿರುವುದು ರಾಜ್ಯ ಸರ್ಕಾರದ ಹಣದಿಂದ ಎಂದು ಮಧು ಬಂಗಾರಪ್ಪ ಹೇಳಿದರು.