ಶಿವಮೊಗ್ಗ : ಎರಡನೇ ಹಂತದ ಮತದಾನಕ್ಕೆ ಕೆಲ ದಿನಗಳು ಮಾತ್ರ ಬಾಕಿಯಿದೆ. 14 ಲೋಕಸಭೆ ಕ್ಷೇತ್ರಗಳಿಗೆ ಮೇ.7ರಂದು ಮತದಾನ ನಡೆಯಲಿದ್ದು, ಉತ್ತರ ಕರ್ನಾಟಕದಲ್ಲಿಅಧಿಪತ್ಯ ಸಾಧಿಸಲು ಬಿಜೆಪಿ ಹಾಗೂ ಕಾಂಗ್ರೆಸ್ತೊಡೆತಟ್ಟಿ ನಿಂತಿವೆ. ಅದರಲ್ಲೂ, ಎರಡನೇ ಹಂತದಲ್ಲಿ ನಾಲ್ಕು ಲೋಕಸಭೆ ಕ್ಷೇತ್ರಗಳು ಜನರ ಗಮನ ಸೆಳೆದಿವೆ.
ಹಾಗಾದ್ರೆ, ಈ ಪ್ರತಿಷ್ಠಿತ ಕ್ಷೇತ್ರಗಲ್ಲಿ ಗೆಲ್ಲುವ ಪಕ್ಷ ಯಾವುದು ? 4ನೇ ಬಾರಿಗೆ ಗೆಲುವು ಸಾಧಿಸ್ತಾರಾ ಬಿ.ವೈ.ರಾಘವೇಂದ್ರ? ದಾವಣಗೆರೆ, ಗುಲ್ಬರ್ಗಾ, ಬೆಳಗಾವಿಯಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಳ್ಳುತ್ತಾ? ಜರ್ಮನಿಗೆ ಪರಾರಿಯಾದ್ರಾ ಆ ಯುವ ನಾಯಕ..?
ಮೊದಲ ಹಂತದ ಮತದಾನ ಮುಗಿಸಿರುವ ಬಿಜೆಪಿ ಕಾಂಗ್ರೆಸ್ ನಾಯಕರು ಈಗ ಉತ್ತ ರ ಕರ್ನಾಟಕಕ್ಕೆ ದೌಡಾಯಿಸಿದ್ದಾರೆ. 2019ರಲ್ಲಿ 14 ಲೋಕಸಭೆ ಕ್ಷೇತ್ರಗಳನ್ನ ಗೆದ್ದು ಬೀಗಿದ್ದ ಬಿಜೆಪಿ, ಕಳೆದ ಚುನಾವಣೆ ಫಲಿತಾಂಶ ಮರುಕಳಿಸುವುದಕ್ಕೆ ಸಜ್ಜಾಗಿ ಅಖಾಡಕ್ಕೆ ಇಳಿದಿದೆ.
ಇದರ ನಡುವೆ ಎರಡನೇ ಹಂತದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದು, ಶಿವಮೊಗ್ಗ, ಗುಲ್ಬರ್ಗಾ, ಬೆಳಗಾವಿ, ದಾವಣಗೆರೆ ಲೋಕಸಭೆ ಕ್ಷೇತ್ರಗಳು.. ಮೊದಲನೇದಾಗಿ ಶಿವಮೊಗ್ಗ ಭಾರೀ ಸೌಂಡ್ ಮಾಡ್ತಿದೆ.. ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕೆ.ಎಸ್.ಈಶ್ವರಪ್ಪ ಅಖಾಡಕ್ಕೆ ಇಳಿದಿರುವುದು ಕೇಸರಿ ಕಲಿಗಳಿಗೆ ಸಣ್ಣ ಮೆಟ್ಟಗಿನ ತಳಮಳ ಶುರುವಾಗಿದೆಯಾದರೂ ವಿಜಯ ಆತ್ಮವಿಶ್ವಾಸ ಜೋರಾಗಿದೆ..
ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್, ಗೆದ್ರೆ ಸಿಗುವುದಿಲ್ಲ ಎಂಬುದು ಮೈನಸ್ ಪಾಯಿಂಟ್ ಆದ್ರೆ, ಅಭಿವೃದ್ಧಿ ಕೆಲಸಗಳು, ಮೋದಿ ಅಲೆ, ಸಂಘಟನೆಗೆ ಹಾಗೂ ಅವರ ಕಾರ್ಯಚಟುವಟಿಕೆ ಬಿವೈ ರಾಘವೇಂದ್ರ ಅವರಿಗೆ ಪ್ಲಸ್ ಪಾಯಿಂಟ್ ಆಗಿದ್ದು, ಗೆಲುವಿಗೆ ಯಾವುದೇ ಭಂಗವಾಗುವುದಿಲ್ಲ ಎನ್ನಲಾಗ್ತಿದೆ.. ಅದರಲ್ಲೂ, ರಾಘವೇಂದ್ರ 3 ಲಕ್ಷಗಳ ಅಂತರದಿಂದ ಗೆಲ್ತಾರೆ ರಾಜಾಹುಲಿ ಯಡಿಯೂರಪ್ಪ ಹೇಳಿದ್ದಾರೆ.
ಮತ್ತೊಂದು ಗುಲ್ಬರ್ಗಾದಲ್ಲಿ ಕಾಂಗ್ರೆಸ್ ಬಿಜೆಪಿ ನಡುವೆ ಪೈಪೋಟಿ ಇದೆ. ತವರು ಕ್ಷೇತ್ರ ಮರುವಶಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಪಣ ತೊಟ್ಟದ್ರೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಕಾಂಗ್ರೆಸ್ ಗೆಲ್ಲಿಸದಿದ್ರೆ ನನ್ನ ಮಣ್ಣಿಗೆ ಬನ್ನಿ ಅಂತ ಭಾವನಾತ್ಮಕ ಅಸ್ತ್ರ ಪ್ರಯೋಗಿಸಿದ್ದಾರೆ. ಇದರಿಂದ ಪೈಪೋಟಿ ಜೋರಾಗಿದ್ದು, ಫಿಪ್ಟಿ ಪಿಫ್ಟಿ ವಾತವರಣವಿದೆ..
ಜಗದೀಶ್ ಶೆಟ್ಟರ್ಗೆ ಆರಂಭದಲ್ಲಿ ಎದುರಾದ ಹಿನ್ನಡೆ ಈಗ ಮಾಯವಾಗಿದೆ. ಮೋದಿ ಸಮಾವೇಶ ಹಾಗೂ ಯಡಿಯೂರಪ್ಪ ಅವರ ಬಿರುಸಿನ ಪ್ರಚಾರದಿಂದ ಬೆಳಗಾವಿ ಲೋಕಸಭೆ ಕ್ಷೇತ್ರ ಬಿಜೆಪಿ ಪಾಲಾಗುವ ಸಾಧ್ಯತೆ ಹೆಚ್ಚಾಗಿದೆ.. ಇನ್ನ ಫಿಪ್ಟಿ ಪಿಫ್ಟಿ ವಾತವರಣವಿದ್ದ ದಾವಣಗೆರೆ ಕಮಲ ಅರಳುವುದು ದಟ್ಟವಾಗಿದೆ ಎಂಬ ವರದಿಗಳು ಬರ್ತಿವೆ..ಒಟ್ಟಾರೆ.. ಉತ್ತರ ಕರ್ನಾಟಕ ಮರುವಶಕ್ಕೆ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ದೃಢ ಹೆಜ್ಜೆ ಇಟ್ಟಿದ್ದಾರೆ..