ದಾವಣಗೆರೆ : ದಾವಣಗೆರೆಯಲ್ಲಿ ಪಕ್ಷಾತೀತವಾಗಿ ರಚಿಸಿಕೊಂಡ ಎರಡು ಗುಂಪುಗಳ ನಡುವೆ ಇಬ್ಬರು ಸ್ವತಂತ್ರವಾಗಿ ಸ್ಪರ್ಧೆ ಮಾಡಿದ್ದಾರೆ. ಮಾಜಿ ಅಧ್ಯಕ್ಷರಾದ ಜಗದೀಶಪ್ಪ ಬಣಕಾರ್, ಎಚ್. ಕೆ.ಪಾಲಾಕ್ಷಪ್ಪ, ಹಾಲಿ ಉಪಾಧ್ಯಕ್ಷ ಎಚ್.ಕೆ. ಬಸಪ್ಪ, ವೈ.ಎಂ.ಅನಿಲ್ ಕುಮಾರ್ ಒಂದು ಗುಂಪಿನಲ್ಲಿದ್ದಾರೆ. ಶಿಮುಲ್ ಪ್ರತಿನಿಧಿಸಿದ ಅನುಭವ ಮತ್ತು ಸಂಪರ್ಕವನ್ನು ಬಳಸಿಕೊಂಡು ಚುನಾವಣೆ ಪ್ರಚಾರ ನಡೆಸುತ್ತಿದ್ದಾರೆ. ಮತ್ತೊಂದು ಗುಂಪಿನಲ್ಲಿರುವ ಬಿ.ಜಿ.ಬಸವರಾಜಪ್ಪ, ನಾಗರಾಜ್, ಡಿ.ಸಿ.ಶಾಂತವೀರಪ್ಪ ಮತ್ತು ಚೇತನ್ ಎಸ್.ನಾಡಿಗರ ಹಿರಿಯ ಸಹಕಾರಿಗಳ ವಿರುದ್ಧ ತೊಡೆ ತಟ್ಟಿದ್ದಾರೆ. ಇವರ ನಡುವೆ ತಾವೇನೂ ಕಡಿಮೆ ಇಲ್ಲ ಎಂಬಂತೆ ಬಿ.ಎಂ.ಬಸವರಾಜಪ್ಪ ಮತ್ತು ಕೆ.ಜಿ.ಸುರೇಶ್ ಸಹ ಸ್ಪರ್ಧೆಯೊಡ್ಡಿದ್ದಾರೆ. ಶಿಮುಲ್ ಚುನಾವಣೆ ಭರ್ಜರಿಯಾಗಿ ನಡೆಯುತ್ತಿದ್ದು, ಚನ್ನಗಿರಿ ಕ್ಷೇತ್ರದಿಂದ ಹಾಲಿ ಉಪಾಧ್ಯಕ್ಷ ಎಚ್.ಕೆ.ಬಸಪ್ಪ ಕತ್ತಲಗೆರೆ ನಾಗರಾಜಪ್ಪ ವಿರುದ್ದ ಭಾರೀ ಮುನ್ನಡೆ ಸಾಧಿಸಿದ್ದಾರೆ. ಇನ್ನು ಹೊನ್ನಾಳಿ ಕ್ಷೇತ್ರದಿಂದ ಅನಿಲ್ ಕುಮಾರ್ ಹನುಮನಹಳ್ಳಿ ಬಸವರಾಜಪ್ಪ ಸ್ಪರ್ಧೆ ಮಾಡಿದ್ದು, 12 ಮತಗಳಿಂದ ಅನಿಲ್ ಕುಮಾರ್ ಮುನ್ನಡೆಯಲ್ಲಿದ್ದಾರೆ. ಇನ್ನೂ ಹಾಲಿ ನಿರ್ದೇಶಕ ಜಗದೀಶಪ್ಪ ಬಣಕಾರ್ ಬಹುತೇಕ ಗೆಲುವಿನ ಹಾದಿಯಲ್ಲಿದ್ದಾರೆ.