
ಶಿವಮೊಗ್ಗ : ನಮ್ಮೆಲ್ಲರ ಅಚ್ಚುಮೆಚ್ಚಿನ ವಿನಾಯಕ್ ಬಾಯರಿ(47) ರವರು ಇಂದು ನಮ್ಮನ್ನ ಅಗಲಿದ್ದಾರೆ. ಆಪ ರಾಮಭಟ್ಟರ ಶಿಷ್ಯರಾಗಿದ್ದ ಇವರು ದೇವಸ್ಥಾನ ಸಮಾಜಮುಖಿ ಕಾರ್ಯಗಳಲ್ಲಿ ಹೇಗೆ ತೊಡಗಿಸಿ ಕೊಳ್ಳಬೇಕೆಂದು ತೋರಿಸಿ ಕೊಟ್ಟಿದ್ದರು.
ಶ್ರೀಯುತರು ಶುಭಮಂಗಳ ಕಲ್ಯಾಣಮಂದಿರದ ಪಕ್ಕದಲ್ಲಿರುವ ಶನೀಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾಗಿದ್ದರು.
ವೈದಿಕವೃತ್ತಿಯನ್ನು ಬಹಳಷ್ಟು ಶ್ರದ್ಧೆಯಿಂದ ನೆರವೇರಿಸುತ್ತಾ ಹಲವಾರು ಶಿಷ್ಯವೃಂದವನ್ನು ರಚಿಸಿಕೊಂಡಿದ್ದರು. ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತ ಯಜ್ಙ-ಯಾಗವನ್ನು ನೆರವೇರಿಸಿದ್ದರು. ವೇದಬ್ರಹ್ಮ ಎಂದು ಹೆಸರಾಂಕಿತರಾಗಿದ್ದರು. ಜನಮಾನಸದಲ್ಲಿ ಉಳಿಯುವಂತಹ ಹಲವಾರು ಕಾರ್ಯಕ್ರಮಗಳನ್ನು ಮಾಡಿ ಚಿರಂಜೀವಿಗಳಾಗಿದ್ದಾರೆ.
ಸಾಹಸ ಕ್ರೀಡೆಗಳ ಬಗ್ಗೆ ಒಲವಿದ್ದ ಇವರು ಶಿಮೊಗ್ಗದಲ್ಲಿ ಬೈಕ್ ಕ್ಲಬ್ ಸ್ಥಾಪಿಸಿ ಬೈಕ್ ಕ್ಲಬ್ ನಿಂದ ಹಲವಾರು ರಾಷ್ಟ್ರೀಯ ಅಂತರಾಷ್ಟ್ರೀಯ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು. ನೇಪಾಳಕ್ಕೆ ಬೈಕ್ ನಲ್ಲಿ ಪ್ರವಾಸಕೈಗೊಂಡಿದ್ದರು. ಸೈಕಲ್ ಕ್ಲಬ್ ಸದಸ್ಯರಾಗಿ ಹಲವಾರು ಜಾಗಗಳಲ್ಲಿ ಭಾಗವಹಿಸಿದ್ದರು.
ಇಂದು ಸಂಜೆ ರೋಟರಿ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ.


ಇವರ ಆತ್ಮಕ್ಕೆ ಚಿರಶಾಂತಿ ಕೋರಿ ಅರ್ಚಕವೃಂದ, ಬೈಕ್ ಕ್ಲಬ್, ಯೂತ್ ಹಾಸ್ಟೆಲ್ಸ್, ಸೈಕಲ್ ಕ್ಲಬ್ ಸದಸ್ಯರು, ಭಜನಾ ಮಂಡಳಿ ಸದಸ್ಯರು, ಬಿಜೆಪಿಯ ವಿಜಯೇಂದ್ರ, ಕಾಂತೇಶ ಸೇರಿದಂತೆ, ಯೂತ್ ಹಾಸ್ಟೆಲ್ ನ ಆ.ನಾ.ವಿಜಯೇಂದ್ರ, ಎನ್.ಗೋಪಿನಾಥ್, ವಿನಯ್, ಆದಿತ್ಯಪ್ರಸಾದ್, ಜಿ.ವಿಜಯಕುಮಾರ್, ವಾಗೇಶ್, ಕೆ.ಜಿ. ವೆಂಕಟೇಶ
ಹಾಗೂ ಹಲವಾರು ಭಕ್ತಾದಿಗಳನ್ನು, ಸ್ನೇಹಿತರನ್ನು, ಬಂಧು ಬಾದವರು ಅಂತಿಮ ದಶ್ನ ಪಡೆದರು. ಅಗಲಿದ ಇವರಿಗೆ ಹೆಂಡತಿ, ಇಬ್ಬರು ಹೆಣ್ಣು ಮಕ್ಕಳಿದ್ದಾರೆ.