ಶಿವಮೊಗ್ಗ : ಶರಣ್ಯ ಸಂಸ್ಥೆಯು ನಿರಾಶಿತ ರೋಗಿಗಳಿಗೆ ವೈದ್ಯಕೀಯ ಸೌಲಭ್ಯಗಳೊಂದಿಗೆ ಸೇವೆ ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಕಿರಣ್ ಕುಮಾರ್ ಅಭಿಪ್ರಾಯ ಪಟ್ಟರು.
ಶಿವಮೊಗ್ಗ ವ್ಯಾಪ್ತಿಯ ಗಾಜನೂರಿನಲ್ಲಿರುವ ಶರಣ್ಯ ಆರೈಕೆ ಕೇಂದ್ರಕ್ಕೆ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಹಾಗೂ ಆನ್ಸ್ ಕ್ಲಬ್ ಸದಸ್ಯರು ಭೇಟಿ ನೀಡಿ, ಶರಣ್ಯ ಸಂಸ್ಥೆಯು ರೋಗಿಗಳನ್ನು ಆರೈಕೆ ಮಾಡುತ್ತಿರುವ ರೋಗಿಗಳಿಗೆ ಉಪಚರಿಸಿ ಸಂತ್ರಸ್ಥರ ಜೊತೆ ಇದ್ದು ಸಾಂತ್ವಾನಿಸಿ ಶರಣ್ಯ ಸಂಸ್ಥೆಯ ಅಧ್ಯಕ್ಷರು ಹಾಗೂ ಸಿಬ್ಬಂದಿಗಳೊಂದಿಗೆ ಸಂಸ್ಥೆ ನೀಡುತ್ತಿರುವ ಸೇವೆಗಳ ಬಗ್ಗೆ ಮಾಹಿತಿ ತಿಳಿಸಿದರು.
ಅನುಭವಿ ವೈದ್ಯರು ಹಾಗೂ ವೈದಿಕೀಯ ತಂಡ ಇಲ್ಲಿರುವುದು, ರೋಗಿಗಳಿಗೆ ಮನೆಯ ವಾತಾವರಣದೊಂದಿಗೆ ನೋಡಿಕೊಳ್ಳುತ್ತಿರುವುದು ನಮ್ಮ ಶಿವಮೊಗ್ಗ ನಗರಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.
ಶರಣ್ಯ ಸಂಸ್ಥೆಯ ಅಧ್ಯಕ್ಷ ಮಂಜುನಾಥ್, ಸಂಸ್ಥೆ ನೀಡುತ್ತಿರುವ ಎಲ್ಲಾ ಸೌಕರ್ಯಗಳ ಬಗ್ಗೆ ರೋಟರಿ ಸಂಸ್ಥೆಯ ಸದಸ್ಯರಿಗೆ ತಿಳಿಸಿ, ಶುಭ ಸಮಾರಂಭಗಳನ್ನು ರೋಗಿಗಳೊಂದಿಗೆ ಆಚರಿಸುವುದು ರೋಗಿಗಳಿಗೂ ಒಂದು ಉತ್ಸಾಹ ನೀಡುತ್ತದೆ. ಆದ್ದರಿಂದ ಯಾವುದೇ ಶುಭ ಸಂದರ್ಭಗಳಿಗೆ ನಮ್ಮ ಸಂಸ್ಥೆ ಕಾರ್ಯಕ್ರಮ ನಡೆಸಿಕೊಡುವುದಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಸಂಸ್ಥೆಯ ವೈದ್ಯ ಡಾ. ತಾನಾಜಿ ಮಾತನಾಡಿ, ರೋಗಿಗಳನ್ನು ನೋಡಿಕೊಳ್ಳಲಾಗದ ಸ್ಥಿತಿಯಲ್ಲಿ ನಮ್ಮ ಸಂಸ್ಥೆಗೆ ತರುತ್ತಾರೆ, ಆಗ ತುಂಬಾ ಹಾರೈಕೆಯಿಂದ ನೋಡಿಕೊಳ್ಳುತ್ತೇವೆ. ತುಂಬಾ ಜನರು ಗುಣಮುಖರಾಗಿ ಮತ್ತೆ ಮನೆಗೆ ಹೋಗಿದ ಉದಾಹರಣೆಗಳೂ ಕೂಡ ಸಾಕಷ್ಟಿದೆ ಎಂದರು.
ಇದೇ ಸಂದರ್ಭದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ವತಿಯಿಂದ ಶರಣ್ಯ ಆರೈಕೆ ಕೇಂದ್ರಕ್ಕೆ ರೋಟರಿಯನ್ ಕಿರಣ್ ಕುಮಾರ್ ಹಾಗೂ ರೋಟರಿಯನ್ ಧರ್ಮೇಂದ್ರ ಸಿಂಗ್ ಆರ್ಥಿಕ ನೆರವು ಮತ್ತು ಗಣೇಶ್ ಎಂ ಅಂಗಡಿಯವರಿಂದ ವಾಕರ್ ನ್ನು ಕೊಡುಗೆಯಾಗಿ ನೀಡಿದರು. ರಾಜಶ್ರೀ ಬಸವರಾಜ್ ಮತ್ತು ರೋಟರಿಯನ್ ದೀಪ ಜೈಶೀಲ್ ಶೆಟ್ಟಿ, ಜ್ಯೋತಿ ಶ್ರೀರಾಮ್ ಅವರು ಆರೈಕೆ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಲಘು ಉಪಹಾರ ನೀಡಿದರು. ಹಾಗೆಯೇ ಆನ್ಸ್ ಕ್ಲಬ್ ನ ಅಧ್ಯಕ್ಷೆ ಗೀತಾ ಅವರು ಆರೈಕೆ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವರಿಗೆ ಬಟ್ಟೆಗಳನ್ನು ನೀಡಿದರು.
ಈ ವೇಳೆ ಕಾರ್ಯದರ್ಶಿ ಈಶ್ವರ್.ಬಿ.ವಿ, ಬಸವರಾಜ್, ಅಸಿಸ್ಟೆಂಟ್ ಗವರ್ನರ್ ರವಿ ಕೋಟೋಜಿ, ಜೋನಲ್ ಲೆಫ್ಟಿನೆಂಟ್ ಮಂಜುನಾಥ್ ಕದಂ, ಜೈಷೀಲ್ ಶೆಟ್ಟಿ , ಗುರುರಾಜ್, ಮಂಜುನಾಥ್ ಹೆಗಡೆ, ಬಲರಾಮ್, ಸಂತೋಷ್, ಗಣೇಶ್ ಅಂಗಡಿ, ರಾಜಶ್ರೀ ಬಸವರಾಜ್, ದೀಪ ಜೈಷೀಲ್ ಶೆಟ್ಟಿ, ಜ್ಯೋತಿ ಶ್ರೀರಾಮ್, ಆನ್ಸ್ ಕ್ಲಬ್ ಅಧ್ಯಕ್ಷೆ ಗೀತಾ ಜಗದೀಶ್, ಕಾರ್ಯದರ್ಶಿ ಶುಭ ಚಿದಾನಂದ್ ಹಾಗೂ ಶರಣ್ಯ ಸಿಬ್ಬಂದಿ ವರ್ಗದವರು ಆಡಳಿತ ಮಂಡಳಿಯ ಸದಸ್ಯರು ಇತರೆ ಸದಸ್ಯರು ಉಪಸ್ಥಿತರಿದ್ದರು.
================