
ಭದ್ರಾವತಿ: ಭದ್ರಾವಾಹಿನಿ ದಿನಪತ್ರಿಕೆಯ ಸ್ಥಾಪಕ ಸಂಪಾದಕ ಎನ್.ಗಣೇಶ್‌ರಾವ್ ಸಿಂದ್ಯಾ(75) ಅಲ್ಪಕಾಲದ ಅನಾರೋಗ್ಯದಿಂದ ಇಂದು ಬೆಳಿಗ್ಗೆ ನಿಧನರಾದರು.ಮೃತರು ಪತ್ನಿ, ಪತ್ರಕರ್ತ ಸುಭಾಶ್‌ರಾವ್ ಸಿಂದ್ಯಾ ಸೇರಿದಂತೆ ಒಟ್ಟು ಮೂವರು ಪುತ್ರರು, ಓರ್ವಪುತ್ರಿ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ, ಮುದ್ರಣ ಮಾಲಿಕರ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ತರೀಕೆರೆ ರಸ್ತೆಯ ಭದ್ರಾನರ್ಸಿಂಗ್ ಹೋo ಸಮೀಪ ವಾಸಿ ಕಿರಿಯ ಪುತ್ರನ ಜೊತೆ ನೆಲೆಸಿದ್ದರು.

ಪತ್ರಕರ್ತರ ಸಂಘ ಸೇರಿದಂತೆ ಅನೇಕ ಸಂಘ ಸಂಸ್ಥೆ ಮೃತರ ಸಂತಾಪ ಸೂಚಿಸಿದ್ದಾರೆ.