ನ್ಯಾಮತಿ.; ಶ್ರಾವಣ ಮಾಸದಲ್ಲಿ ಪೂಜೆ, ಭಜನೆ, ಪುರಾಣ ಪ್ರವಚನದಂತಹ ದೇವರ ಆರಾಧನೆಯಲ್ಲಿ ಇಷ್ಟಲಿಂಗ ಪೂಜೆ ಮಾಡುವಲ್ಲಿ ತೋಡಗಿಕೊಳ್ಳುವ ಮೂಲಕ ಭಗವಂತನ ಕೃಪೆಗೆ ಪಾತ್ರರಾಗುವಲ್ಲಿ ಶಾವಣ ಮಾಸವು ವಿಷೇಶವಾಗಿದೆ ಎಂದು ಗೋವಿನಕೋವಿ ಶ್ರೀಹಾಲಸ್ವಾಮಿ ಬೃಹನ್ಮಠದ ಶ್ರೀಸದ್ಗುರು ಶಿವಯೋಗಿ ವಿಶ್ವಾರಾಧ್ಯ ಮಹಾಲಿಂಗ ಸ್ವಾಮಿ ಆಶೀರ್ವಚನ ನೀಡಿದರು.
ತಾಲೂಕಿನ ಗೋವಿನಕೋವಿ ಶ್ರೀಹಾಲಸ್ವಾಮಿ ಬೃಹನ್ಮಠದಲ್ಲಿ ನಾಗರ ಅಮವಾಸ್ಯೆ ಕಾರ್ಯಕ್ರಮದ ವಿಶೇಷ ಪೂಜಾ ಕೈಂಕರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ಶ್ರಾವಣ ಮಾಸದಲ್ಲಿ ತಮ್ಮ ಇಷ್ಟಾರ್ಥಗಳನ್ನು ಕಾರ್ಯಸಿದ್ಧಿಗಾಗಿ ವ್ರತಾಚರಣೆಗಳನ್ನು ಅರ್ಥಪೂರ್ಣವಾಗಿ ಶ್ರದ್ಧಾಭಕ್ತಿಯಿಂದ ಕಟ್ಟುನಿಟ್ಟಾಗಿ ಆಚರಿಸುವ ಮೂಲಕ ಭಗವಂತನ ಒಲಿಸಿಕೊಳ್ಳಬಹುದಾಗಿದ್ದು ಎಲ್ಲರು ಶ್ರಾವಣಮಾಸವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡುವಂತೆ ಹೇಳಿದರು
.ಗೌರಿ ಅಮವಾಸ್ಯೆ ವಿಶೇಷ ಆಚರಣೆ
ಲೋಕ ಕಲ್ಯಾಣಾರ್ಥವಾಗಿ ಕ್ರೋಧಿನಾಮ ಸಂವತ್ಸರದ ಶುದ್ಧ ಪ್ರತಿಪದ ಆ ೫ರ ಸೋಮವಾರದಿಂದ ಸೆ೨ರ ಸೋಮವಾರದ ವರೆಗೂ ಕೈಗೊಂಡಿರುವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾಹಿತಿ ನೀಡಿದ ಅವರು ಸೆ೨ರ ಗೌರಿ ಅಮವಾಸ್ಯೆ ಅಂಗವಾಗಿ ತ್ರಿಕಾಲ ಇಷ್ಟಲಿಂಗ ಪೂಜಾನುಸ್ಥಾನ ಕರ್ತೃಗದ್ದಿಗೆಗಳಿಗೆ ಹಾಗೂ ಶಕ್ತಿ ಮಾತೆ ಗುಳ್ಳೆಮ್ಮ ದೇವಿಗೆ ಬಿಲ್ವಾರ್ಚನೆ ಮುತ್ತೆöÊದೆಯರಿಗೆ ಉಡಿತುಂಬುವ ಕಾರ್ಯ, ಗುಳ್ಳಮ್ಮ ದೇವಿಗೆ ಪ್ರಸಾದ ಎಡೆ ಕಾರ್ಯಕ್ರಮ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆದು ಬರುವ ಭಕ್ತರಿಗೆ ಪ್ರಸಾದ ವ್ಯವಸ್ಥೆ ನಡೆಯಲಿದೆ.
ಕಾರ್ಯಕ್ರಮದಲ್ಲಿ ದೇವಿಕೊಪ್ಪದ ಶ್ರೀಬಸವೇಶ್ವರ ಮಹಿಳಾ ಭಜನಾ ಸಂಘದವರಿಂದ ಭಜನಾ ಕಾರ್ಯಕ್ರಮ ನೆಡೆಯಿತು.
ಈ ಒಂದು ನಾಗರ ಅಮವಾಸ್ಯೆ ಕಾರ್ಯಕ್ರಮದಲ್ಲಿ ಹಾಲುಸ್ವಾಮಿ ಮಠದ ಸೇವಾ ಸಮಿತಿ ಸದಸ್ಯರು, ಸುತ್ತಮುತ್ತಲಿನ ಗ್ರಾಮದ ಭಕ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.