


ದಾವಣಗೆರೆ : ಸತ್ಪುರುಷ ರಾಮನಿಗೆ ವನವಾಸ ತಪ್ಪಿದ್ದಲ್ಲ, ಇನ್ನೂ ಸತ್ಯವನ್ನೇ ನುಡಿಯುತ್ತಿದ್ದ ಹರಿಶ್ಚಂದ್ರನಿಗೂ ಸಂಕಷ್ಟ ತಪ್ಪಿದ್ದಲ್ಲ. ಪುರಾಣ ರಾಮಾಯಣ ಸೇರಿದಂತೆ ಇತಿಹಾಸದಲ್ಲಿ ಸತ್ಯವಂತರು, ಪುಣ್ಯ ಪುರುಷರಿಗೆ ಮಾತ್ರ ಕಷ್ಟಗಳು ಎದುರಾಗುವುದನ್ನ ನೋಡಿದ್ದೇವೆ. ಅದೇ ರೀತಿ ರಾಜಕಾರಣದಲ್ಲಿ ಕಂಡ ಅಪರೂಪದ ಧೀಮಂತ ರಾಜಕಾರಣಿ ಪಕ್ಷಕ್ಕಾಗಿ ನಿಷ್ಠಯಿಂದ ಕಾರ್ಯಕರ್ತರು ಹಾಗೂ ಹಿಂದೂಗಳ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಬಿಜೆಪಿ ಹಿರಿಯ ನಾಯಕರು ಹಾಗೂ ಶಾಸಕರಾದ ಬಸವನ ಗೌಡ ಪಾಟೀಲ್ ಯತ್ನಳ್ ಅವರನ್ನು ಉಚ್ಛಾಟನೆ ಮಾಡಿರುವುದು ಯಾವ ನ್ಯಾಯ ಎಂದು ಶೋಷಿತ ವರ್ಗಗಳ ಮುಖಂಡರಾದ ಬಾಡದ ಆನಂದರಾಜು ಪ್ರಶ್ನೆ ಮಾಡಿದ್ದಾರೆ.
ವಿಧಾನಸಭೆಯಲ್ಲಿ ವಿರೋಧ ಪಕ್ಷದಲ್ಲಿರುವ ಬಿಜೆಪಿ ಆಡಳಿತ ಪಕ್ಷದ ವೈಫಲ್ಯ ಎತ್ತಿ ಹಿಡಿಯುವಲ್ಲಿ ವಿಫಲವಾಗಿದ್ದು, ಇಂಥ ಸಂದರ್ಭದಲ್ಲಿ ಆಡಳಿತ ಪಕ್ಷದವನ್ನು ಪ್ರಶ್ನೆ ಮಾಡಿ ಹೆದರಿಸುತ್ತಿದ್ದ ಏಕೈಕ ಬಿಜೆಪಿ ಶಾಸಕ ಬಸವನ ಗೌಡ ಪಾಟೀಲ್ ಯತ್ನಾಳ್ ಅವರನ್ನು ಉಚ್ಛಾಟನೆ ಮಾಡಿರುವುದು ಸರಿಯಲ್ಲ ಎಂದಿದ್ದಾರೆ.

ಹಿಂದೂಗಳ ಪರವಾಗಿ ಹೋರಾಟ ಮಾಡಿ ಅವರ ಬೆಂಬಲಕ್ಕೆ ನಿಂತಿದ್ದು ತಪ್ಪಾ, ಭಷ್ಟಚಾರ ವಿರುದ್ಧ ಧ್ವನಿ ಎತ್ತುವುದು ತಪ್ಪಾ, ಪಕ್ಷದಲ್ಲಿ ಕುಟುಂಬ ರಾಜಕಾರಣಕ್ಕೆ ಅಂತ್ಯವಾಡಿ ನಿಷ್ಠಾವಂತ ಕಾರ್ಯಕರ್ತನಿಗೆ ಅಧಿಕಾರ ಸಿಗಬೇಕು ಎಂದಿದ್ದೇ ತಪ್ಪು ಎನ್ನುವುದಾದರೆ ಬಿಜೆಪಿ ಪಕ್ಷದಲ್ಲಿ ನಿಷ್ಠಾವಂತರಿಗೆ ಬೆಲೆಯೇ ಇಲ್ಲ ಎಂಬಂತಾಗಿದೆ ಎಂದು ಬಾಡದ ಆನಂದರಾಜು ಹೈಕಮಾಂಡ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಜೆಪಿಯಲ್ಲಿ ನೆಲೆ ಇಲ್ಲದೆ ಸೋತು ಮನೆಗೆ ಕೂತಿರುವ ಸ್ವಯಂ ನಾಯಕರೆಂದು ಘೋಷಣೆ ಮಾಡಿಕೊಂಡು ಪಕ್ಷದ ವಿರುದ್ಧ ಪಿತೂರಿ ಮಾಡಿದವರ ಮಾತುಗಳನ್ನ ಕೇಳಿ ಬಸವನ ಗೌಡ ಪಾಟೀಲ್ ರಂತ ನಾಯಕರನ್ನು ಪಕ್ಷದಿಂದ ಉಚ್ಛಾಟನೆ ಮಾಡಿರುವುದು ಶೋಬೆ ತರುವುದಿಲ್ಲ ಎಂದು ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಈ ಬಗ್ಗೆ ಸಮಾಲೋಚನೆ ನಡೆಸದೇ, ಪಕ್ಷದ ನಾಯಕರಲ್ಲಿನ ಭಿನ್ನಾಭಿಪ್ರಾಯವನ್ನು ಶಮನ ಮಾಡದೇ ಇಂಥ ನಿರ್ಧಾರಕ್ಕೆ ಒಪ್ಪುವುದಾದರೆ ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡುವುದಾದರೂ ಹೇಗೆ ? ಹಾಗಾದರೆ ಭ್ರಷ್ಟಾಚಾರದ ಬಗ್ಗೆ ಯಾರು ಧ್ವನಿ ಎತ್ತಬೇಕು, ರಾಜ್ಯದಲ್ಲಿ ಪಕ್ಷ ಸಂಘಟನೆಯ ಹೊಣೆ ಯಾರು ಹೊರುತ್ತಾರೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.
ಕೇವಲ ವಿರೋಧಿ ಗುಂಪಿನ ಮಾತುಗಳನ್ನು ಕೇಳಿ ಇಂಥ ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದರೆ ಇದರಲ್ಲಿ ಬಸವನ ಗೌಡ ಪಾಟೀಲ್ ಯತ್ನಾಳ್ ಶ್ರಮ ಕೂಡ ಅಡಗಿದೆ. ರಾಜ್ಯದಲ್ಲಿ ಬಿಜೆಪಿ ಪಕ್ಷ ಗಟ್ಟಿಯಾಗಿದೆ ಎಂದರೆ ಅದಕ್ಕೆ ಕಾರಣ ಯತ್ನಾಳ್ ಅವರು ಎಂಬುದನ್ನ ಬಿಜೆಪಿ ಮರೆಯಬಾರದು, ದೆಹಲಿಯಲ್ಲಿ ಎಸಿ ರೂಂಲ್ಲಿ ಕೂತು ತಾವೇ ಅಧಿಕಾರಿ ಶಾಹಿಯಂತೆ ತಮ್ಮ ಇಷ್ಟಕ್ಕೆ ಬಂದಂತೆ ನಿರ್ಧಾರ ತೆಗೆದುಕೊಳ್ಳುವುದಾದರೆ ಪಕ್ಷಕ್ಕೆ ದುಡಿದವರ ಗತಿ ಏನು. ಇದು ಭ್ರಷ್ಟಾಚಾರ ಕುಮ್ಮಕ್ಕು ನೀಡುವುದು ಮತ್ತು ಪ್ರಾಮಾಣಿಕತೆಯನ್ನ ಕುಗ್ಗಿಸುವ ಕೆಲಸವನ್ನು ಪಕ್ಷದ ವರಿಷ್ಠರು ಮಾಡುತ್ತಿದ್ದಾರೆ. ಕೂಡಲೇ ಬಸವನ ಗೌಡ ಪಾಟೀಲ್ ಯತ್ನಾಳ್ ಅವರ ಉಚ್ಛಾಟನೆಯನ್ನು ಹಿಂಪಡೆಯಬೇಕು ಇಲ್ಲವಾದರೆ ರಾಜ್ಯಾದ್ಯಂತ ಕಾರ್ಯಕರ್ತರು ಹೋರಾಟಕ್ಕೆ ಬೀದಿಗಿಳಿಯುವುದು ತಪ್ಪಲ್ಲ ಎಂದು ಖಡಕ್ ಎಚ್ಚರಿಕೆಯನ್ನು ನೀಡುವ ಮೂಲಕ ಪಕ್ಷದ ವರಿಷ್ಠರಿಗೆ ಬಾಡದ ಆನಂದರಾಜು ತಿಳಿಸಿದ್ದಾರೆ.