


ದಾವಣಗೆರೆ : ಕಾಂಗ್ರೆಸ್ನಲ್ಲಿನ ಹನಿಟ್ರ್ಯಾಪ್ ತಲ್ಲಣ, ಪೋನ್ ಕದ್ದಾಳಿಕೆ ವಿಷಯ ಈಗ ಜೋರಾಗಿ ಸದ್ದು ಮಾಡ್ತಿದೆ.. ಜೊತೆಗೆ ಡಿಸಿಎಂ ಡಿಕೆ ಶಿವಕುಮಾರ್ ಅವರ ಸಂವಿಧಾನ ಬದಲಾವಣೆ ಹೇಳಿಕೆ ಕೂಡ ದೇಶಾದ್ಯಂತ ಸೌಂಡ್ ಮಾಡ್ತಿದೆ. ಇದರ ನಡುವೆ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರ ಘೋಷಣೆ ಈ ತಿಂಗಳೊಳಗಾಗಿ ಆಗುವುದು ಬಹತೇಕ ಪಕ್ಕ ಆಗಿದೆ. ಹಾಗಾದ್ರೆ, ಕೇಂದ್ರ ಗೃಹ ಸಚಿವ ಅಮಿತ್ ಪಡೆದ ಸರ್ವೇಯಲ್ಲಿ ಏನಿದೆ.? ವಿಜಯೇಂದ್ರ ಯಡಿಯೂರಪ್ಪ ಮರು ಆಯ್ಕೆ ಆಗ್ತಾರಾ.?
ಕಾಂಗ್ರೆಸ್ನ ಹನಿಟ್ರ್ಯಾಪ್ ವಿಚಾರ, ಡಿಸಿಎಂ ಡಿಕೆ ಶಿವಕುಮಾರ್ ಅವರ ಸಂವಿಧಾನ ಬದಲಾವಣೆ ಹೇಳಿಕೆ ಈಗ ದೇಶದಲ್ಲಿ ಕೋಲಾಹಲ ಎಬ್ಬಿಸಿದೆ. ಡಿಸಿಎಂ ಡಿಕೆಶಿ ರಾಜೀನಾಮೆಗೆ ಎಲ್ಲೆಡೆ ಒತ್ತಾಯ ಕೇಳಿ ಬರತೊಡಗಿದೆ. ಇದರ ನಡುವೆ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಆಯ್ಕೆಗೆ ಸದ್ದಿಲ್ಲದೆ ಕಸರತ್ತು ನಡೆದಿದೆ.

ಯತ್ನಾಳ್ ಟೀಂ ಹಾಗೂ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ನೇತೃತ್ವದ ಬಣದ ತಿಕ್ಕಾಟದಿಂದ ಬೇಸತ್ತಿರುವ ಬಿಜೆಪಿ ಹೈಕಮಾಂಡ್ ನಾಯಕರು ಹೊಸ ತಂತ್ರ ಮೊರೆ ಹೋಗಿದ್ದಾರೆ. ಅದರಲ್ಲೂ ವಿಶೇಷವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಾಧ್ಯಕ್ಷರ ಆಯ್ಕೆ ಕುರಿತಂತೆ ಸದ್ದಿಲ್ಲದೆ ತಮ್ಮದೇ ಸರ್ವೇ ನಡೆಸಿ, ರಿಪೋರ್ಟ್ ತೆಗೆದುಕೊಂಡಿದ್ದಾರೆ.

ಈ ರಿಪೋರ್ಟ್ನಲ್ಲಿ ಬಹುತೇಕರು ಹಾಲಿ ಅಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ಅವರನ್ನು ಮುಂದುವರಿಸಬೇಕು ಎಂದು ಶೇ.80 ನಾಯಕರು, ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಹಾಲಿ ವಿಜಯೇಂದ್ರ ಯಡಿಯೂರಪ್ಪ ಅವರು ಮುಂದುವರಿವುದು ಪಕ್ಕವಾಗಿದೆ. ಶಾ ಅವರು ಸಹಮತ ಇರುವುದರಿಂದ ಇನ್ನೇನು ಕೆಲ ದಿನಗಳಲ್ಲಿ ಮರು ಆಯ್ಕೆ ಘೋಷಣೆ ಆಗುವ ಸಾಧ್ಯತೆ ಹೆಚ್ಚಿದೆ..
ವಿಜಯೇಂದ್ರ ಯಡಿಯೂರಪ್ಪ ಅವರನ್ನು ಮುಂದುವರಿಸಲು ಹೈಕಮಾಂಡ್ ತೀರ್ಮಾನ ಮಾಡುತ್ತಿದ್ದಂತೆ ಯತ್ನಾಳ್ ತಂಡ ಸದ್ಯಕ್ಕೆ ಸೈಲೆಂಟ್ ಆಗಿದೆ. ಮರುಆಯ್ಕೆ ವಿರೋಧಿಸುತ್ತಿದ್ದರೂ ಅಮಿತ್ ಶಾ ಅವರು ಹಾಲಿ ಅಧ್ಯಕ್ಷರನ್ನು ಮುಂದುವರಿಸುವುದಕ್ಕೆ ಬದ್ಧರಾಗಿರುವುದರಿಂದ ಇನ್ನಾರು ತಿಂಗಳಲ್ಲಿ ವಿಜಯೇಂದ್ರ ವಿರುದ್ಧ ಹೋರಾಟ ಚುರುಕುಗೊಳಿಸುವುದಕ್ಕೆ ಸಿದ್ಧತೆ ನಡೆಸಿದೆ ಎನ್ನಲಾಗಿದೆ.