ದಾವಣಗೆರೆ : ದಾವಣಗೆರೆ ಗ್ರಾಮಾಂತರ ಸೇರಿದಂತೆ ಹಲವಾರು ಠಾಣೆಗಳಲ್ಲಿ ಕಾರ್ಯನಿರ್ವಹಿಸಿದ ಸಂತೆಬೆನ್ನೂರು ಸೂಪರ್ ಕಾಪ್ ಲಿಂಗನಗೌಡರಿಗೆ ಸಿಎಂ ಪದಕ ದೊರಕಿದೆ.
ಸಂತೆಬೆನ್ನೂರಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಾಲು ಇವರ ಪಾತ್ರ ಪ್ರಮುಖವಾಗಿದ್ದು, ಇಸ್ಪೀಟ್ ಅಡ್ಡೆಗಳು ಸೇರಿದಂತೆ ಸಾಕಷ್ಟು ಪ್ರಕರಣಗಳನ್ನು ಬೇದಿಸುವಲ್ಲಿ ಇವರ ಪಾತ್ರ ಅನನ್ಯ. ಲಿಂಗನಗೌಡ ನೆಗಳೂರು ಪ್ರಸ್ತುತ ಸಂತೆಬೆನ್ನೂರು ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು
ವಿಜಯನಗರ ಜಿಲ್ಲೆ, ಹೂವಿನ ಹಡಗಲಿ ತಾಲೂಕು ಹೊಳಲು ಗ್ರಾಮದಲ್ಲಿ ಜುಲೈ 1, 1979ರಲ್ಲಿ ದಿ/ಬಸವನಗೌಡ ನೆಗಳೂರು ಮತ್ತು ಮಲ್ಲಮ್ಮ ನೆಗಳೂರು ದಂಪತಿಗಳಿಗೆ ನಾಲ್ಕನೆಯ ಮಗನಾಗಿದ್ದಾರೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಹೊಳಲು ಗ್ರಾಮದಲ್ಲಿ ಮುಗಿಸಿ. ಪಿಯುಸಿ ವಿಜ್ಞಾನ ವಿಧ್ಯಾಭ್ಯಾಸವನ್ನು ಕೊಟ್ಟೂರಿನಲ್ಲಿ ಮುಗಿಸಿದ್ದು ನಂತರ. ಬಿ.ಎಸ್ಸಿ (ಕೃಷಿ) ಸ್ನಾತಕ ಪದವಿಯನ್ನು ರಾಯಚೂರಿನಲ್ಲಿ ಮುಗಿಸಿ ನಂತರ, ಎಂ.ಎಸ್ಸಿ ಸ್ನಾತಕೋತ್ತರ ಪದವಿಯನ್ನು ಧಾರವಾಡ ಕೃಷಿ ವಿಶ್ವವಿಧ್ಯಾಲಯದಲ್ಲಿ ಮುಗಿಸಿರುತ್ತಾರೆ. ಬಳಿಕ ಪೊಲೀಸ್ ಇಲಾಖೆಯಲಿ ಸೆ.20, 2003ರಲ್ಲಿ ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಉಪ ನಿರೀಕ್ಷಕರಾಗಿ ನೇರ ನೇಮಕಾತಿ ಹೊಂದಿ, ಕಲಬುರ್ಗಿ ಪೊಲೀಸ್ ತರಬೇತಿ ಕಾಲೇಜಿನಲ್ಲಿ ತರಬೇತಿ ಮುಗಿಸಿ ನಂತರ ಬೆಂಗಳೂರು ನಗರದ ಮೈಕೋ ಲೇಔಟ್ ಪೊಲೀಸ್ ಠಾಣೆ ಮತ್ತು ದಾವಣಗೆರೆ ಜಿಲ್ಲೆಯ ಬಸವನಗರ, ಮಲೆಬೆನ್ನೂರು, ಸಂತೇಬೆನ್ನೂರು ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿರುತ್ತಾರೆ.
ನವೆಂಬರ್ 29, 2011 ರಲ್ಲಿ ಪೊಲೀಸ್ ನಿರೀಕ್ಷಕರಾಗಿ ಮುಂಬಡ್ತಿ ಹೊಂದಿ ನಂತರ ರಾಜ್ಯ ಗುಪ್ತ ವಿಭಾಗ, ಬಳ್ಳಾರಿ ಜಿಲ್ಲೆಯ ಕಂಪ್ಲಿ ವೃತ್ತ, ವಿಜಯನಗರ ಜಿಲ್ಲೆಯ ಹೊಸಪೇಟೆ ನಗರ ಪೊಲೀಸ್ ಠಾಣೆ, ಹಾವೇರಿ ಜಿಲ್ಲೆಯ ರಾಣೇಬೆನ್ನೂರು ಗ್ರಾಮಾಂತರ ವೃತ್ತ ಮತ್ತು ರಾಣೇಬೆನ್ನೂರು ನಗರ ವೃತ್ತ ಹಾಗೂ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ, ಅತ್ಯುತ್ತಮ ಕರ್ತವ್ಯ ನಿರ್ವಹಿಸಿ. ಪ್ರಸ್ತುತ ದಾವಣಗೆರೆ ಜಿಲ್ಲೆಯ ಸಂತೇಬೆನ್ನೂರು ವೃತ್ತದಲ್ಲಿ ಪೊಲೀಸ್ ವೃತ್ತ ನಿರೀಕ್ಷಕರಾಗಿ ದಿ:03-08-2023 ರಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಪ್ರೋಆಕ್ಟಿವ್
ನಿಂಗನಗೌಡ ಮುಂಜಾಗ್ರತೆಯಾಗಿ (ಪ್ರೋ ಆಕ್ಟಿವ್) ಕಾರ್ಯನಿರ್ವಹಿಸುವ ಅಧಿಕಾರಿಯಾಗಿದ್ದು, ವಿಶೇಷವಾಗಿ ಅಪರಾಧ ಪತ್ತೆ ಕಾರ್ಯದಲ್ಲಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಹೆಚ್ಚಿನ ಮುತುವರ್ಜಿಯನ್ನು ವಹಿಸಿರುತ್ತಾರೆ. ಅನೇಕ ಕ್ಲಿಷ್ಟಕರ ಘೋರಾಪರಾಧ ಪ್ರಕರಣಗಳು ಸೇರಿದಂತೆ ಅನೇಕ ಅಪರಾಧ ಪ್ರಕರಣಗಳ ಆರೋಪಿಗಳನ್ನು ವೈಜ್ಞಾನಿಕ ಮತ್ತು ತಾಂತ್ರಿಕ ವಿಧಾನಗಳನ್ನು ಬಳಸಿ, ಚಾಣಾಕ್ಷತನದಿಂದ ಪತ್ತೆ ಮಾಡಿ ಮೇಲಾಧಿಕಾರಿಗಳಿಂದ ಪ್ರಶಂಸನೆಯನ್ನು ಹಾಗೂ ಬಹುಮಾನಗಳನ್ನು ಪಡೆದುಕೊಂಡಿರುತ್ತಾರೆ. ಅಲ್ಲದೇ ಲಿಂಗನಗೌಡ ನೆಗಳೂರು, ಪೊಲೀಸ್ ನಿರೀಕ್ಷಕ ರವರು ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಕಾಲದಲ್ಲಿ ಹಲವಾರು ಪ್ರಶಂಸನೀಯ ಕಾರ್ಯಗಳನ್ನು ನಿರ್ವಹಿಸಿದ್ದಾರೆ.
ಕ್ಲೀಷ್ಠಕರ ಕೇಸ್ ಭೇದಿಸಿದ ಲಿಂಗನಗೌಡ
2023 ನೇ ಸಾಲಿನಲ್ಲಿ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸಿದ ಅವಧಿಯಲ್ಲಿ ಆನಗೋಡಿನಲ್ಲಿ ಮೂವರು ಯುವಕರು ಸಂಶಯಾಸ್ಪದವಾಗಿ ಮೃತಪಟ್ಟಿರುತ್ತಾರೆ. ನಂತರ ಪ್ರಕರಣ ದಾಖಲಿಸಿಕೊಂಡ ಲಿಂಗನಗೌಡ ಪ್ರಕರಣದ ಬೆನ್ನೆತ್ತಿ ಹೋದಾಗ ಉತ್ತರಪ್ರದೇಶದ ಕಂಟೇನರ್ ಲಾರಿ ಚಾಲಕ ಈ ಯುವಕರ ಮೇಲೆ ಲಾರಿಹರಿಸಿ ಕೊಲೆ ಮಾಡಿರುತ್ತಾನೆ.
ನಂತರ ಮುಂದುವರೆದು ಈ ಚಾಲಕನನ್ನು ದಾವಣಗೆರೆಯಿಂದ ಹೋಗಿ ಚೆನ್ನೈ ನಲ್ಲಿ ಬಂಧಿಸುತ್ತಾರೆ. ಬಳಿಕ ಪ್ರಕರಣದ ಬಗ್ಗೆ ವಿವರಣೆ ನೀಡಿದ ಲಾರಿ ಚಾಲಕ ನಾನು ಲಾರಿ ಡ್ರೈವಿಂಗ್ ಮಾಡಿ ಸುಸ್ತಾಗಿದ್ದೇ. ವಿಶ್ರಾಂತಿಗೆಂದು ಆನಗೋಡಿನ ಬಳಿ ಇಳಿದಾಗ ಆರು ಜನ ಯುವಕರು ಬಂದು ಡಕಾಯಿತಿ ಮಾಡಿದ್ದು, ನನ್ನ ಬಳಿ ಇದ್ದ ಎಲ್ಲವಸ್ತುಗಳನ್ನು ತೆಗೆದುಕೊಂಡುಹೋಗಿದ್ದರು. ಆದ್ದರಿಂದ ನಾನು ಮೂರು ಯುವಕರ ಮೆಲೆ ಲಾರಿ ಹತ್ತಿಸಿದೆ ಎಂದು ಹೇಳಿಕೆ ನೀಡುತ್ತಾನೆ. ಈತ ಇನ್ನು ಜೈಲಿನಲ್ಲಿದ್ದಾನೆ. ಉತ್ತರ ಪ್ರದೇಶ ಈತನನ್ನು ಪತ್ತೆ ಮಾಡಲು ಎನ್.ಹೆಚ್-48 ಪುಣಿ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ದಾವಣಗೆರೆಯಿಂದ ಚೆನ್ನೈ ವರೆಗಿನ ಎಲ್ಲಾ ಟೋಲ್ ಗಳಲ್ಲಿ ಆರೋಪಿತನ ವಾಹನ ಹಾದು ಹೋಗಿರುವ ಬಗ್ಗೆ ಪರಿಶೀಲನೆ ಮಾಡಿ ಹಾಗೂ ಆರೋಪಿಯ ಸಿಡಿಆರ್ ಹಾಗೂ ಟವರ್ ಡಂಪ್ ಮೂಲಕ ಮಾಹಿತಿಯನ್ನು ಪಡೆದುಕೊಂಡು ವೈಜ್ಞಾನಿಕ ತಂತ್ರಜ್ಞಾನದ ಮೂಲಕ ಪರಿಶೀಲನೆ ಮಾಡಿ ಚೆನೈನಿಂದ ಕರೆತರಲಾಗಿತ್ತು.
ವಿಧಾನ ಸಭೆ ಎಲೆಕ್ಷನ್ ಅಹಿತಕರ ಘಟನೆ ನಡೆಯದಂತೆ ಕರ್ತವ್ಯ
ಲಿಂಗನಗೌಡ 2023 ನೇ ಸಾಲಿನ ವಿಧಾನ ಸಭಾ ಚುನಾವಣೆಯಲ್ಲಿ ದಾವಣಗೆರೆ ಉತ್ತರ ವಿಧಾನ ಸಭಾ ಕ್ಷೇತ್ರಕ್ಕೆ ಪೊಲೀಸ್ ನೋಡಲ್ ಅಧೀಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದು, ಉತ್ತಮ ಕರ್ತವ್ಯ ನಿರ್ವಹಿಸಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮತ್ತು ಶಾಂತ ರೀತಿ ಮತದಾನವಾಗುವಂತೆ ನೋಡಿಕೊಂಡಿರುತ್ತಾರೆ.
2023 ನೇ ಸಾಲಿನಲ್ಲಿ ಸಂತೇಬೆನ್ನೂರು ವೃತ್ತದಲ್ಲಿ ಪೊಲೀಸ್ ವೃತ್ತ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅವಧಿಯಲ್ಲಿ ಅನೇಕ ಸ್ವತ್ತು ಪ್ರಕರಣಗಳು, ಪೋಕ್ಸೋಪ್ರಕರಣಗಳು ಮತ್ತು ಅನೇಕ ಸುಲಿಗೆ ಮತ್ತು ಕೊಲೆ ಪ್ರಕರಣಗಳಲ್ಲಿ ಆರೋಪಿತರನ್ನು ಪತ್ತೆ ಮಾಡಿ ಮಾಲನ್ನು ವಶಪಡಿಸಿಕೊಂಡಿರುತ್ತಾರೆ. ಮತ್ತು ಸಂತೇಬೆನ್ನೂರು ಠಾಣಾ ಗುನ್ನೆ ನಂ- 137/2023 ಕಲಂ-457.380 ಐಪಿಸಿ ಪ್ರಕರಣದಲ್ಲಿ ಬಸವಾಪಟ್ಟಣ, ಚನ್ನಗಿರಿ ಹಾಗೂ ನ್ಯಾಮತಿ ಪೊಲೀಸ್ ಠಾಣೆಯ ಒಟ್ಟು 07 ಪ್ರಕರಣಗಳಲ್ಲಿ ಮಾಲು ಮತ್ತು ಆರೋಪಿತರನ್ನು ಪತ್ತೆ ಮಾಡಿ ಕಳವಾದ 6.5 ಲಕ್ಷ ರೂ ಮೌಲ್ಯದ ಶ್ರೀಗಂಧದ ತುಂಡುಗಳನ್ನು ವಶಪಡಿಸಿಕೊಂಡಿದ್ದರು.
2023 ನೇ ಸಾಲಿನಲ್ಲಿ ಸಂತೆಬೆನ್ನೂರಿನಲ್ಲಿ ದಾಖಲಾಗಿದ್ದ ಅಡಕೆ ಪ್ರಕರಣ ಭೇದಿಸಿ ಮಾಲು ಮತ್ತು ಆರೋಪಿತರನ್ನು ದಸ್ತಗಿರಿ ಮಾಡಿ ಸುಮಾರು 05 ಕ್ವಿಂಟಾಲ್ ಅಡಿಕೆ ಹಾಗೂ ಗೂಡ್ಸ್ ಆಟೋ ಒಟ್ಟು ಮೌಲ್ಯ ನಾಲ್ಕುವರೆ ಲಕ್ಷ ರೂ ಗಳನ್ನು ವಶಪಡಿಸಿಕೊಂಡಿದ್ದರು. ಒಟ್ಟಾರೆ ನಿಂಗನಗೌಡ ನೆಗಳೂರು. ಪೊಲೀಸ್ ನಿರೀಕ್ಷಕರ ರವರು ಅತ್ಯುತ್ತಮ ಅಧಿಕಾರಿಯಾಗಿದ್ದು, ತಮ್ಮ ಸೇವಾ ಅವಧಿಯಲ್ಲಿ ಹೆಚ್ಚಿನ ಕಾರ್ಯ ತತ್ಪರತೆ, ನಿಷ್ಠೆ ಮತ್ತು ಕರ್ತವ್ಯದಲ್ಲಿ ದಕ್ಷತೆಯನ್ನು ಪ್ರದರ್ಶಿಸುತ್ತಾ ಬಂದಿದ್ದಾರೆ. ಇನ್ನು ಸ್ಪಷ್ಠಕರ ಸನ್ನಿವೇಶಗಳನ್ನು ನಿಭಾಯಿಸುವ ಜಾಣೆ ಹೊಂದಿರುತ್ತಾರೆ. ಇವರ ಸೇವಾ ದಾಖಲೆಗಳನ್ನು ಪರಿಶೀಲಿಸಲಾಗಿ ಸಾರ್ವಜನಿಕರ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಅಧಿಕಾರಿಯಾಗಿದ್ದು, ಉತ್ತಮ ನಾಯಕತ್ವದ ಗುಣ ಉಳ್ಳವರಾಗಿರುತ್ತಾರೆ. ಅಪರಾಧ ಪತ್ತೆ ಹಚ್ಚುವಲ್ಲಿ ಮತ್ತು ನಿಯಂತ್ರಿಸುವಲ್ಲಿ ಉತ್ತಮಕರ್ತವ್ಯ ನಿರ್ವಹಿಸುವ ಇವರಿಗೆ ಹಿರಿಯಪೊಲೀಸ್ ಅಧಿಕಾರಿಗಳಿಂದ ಶ್ಲಾಘನೆ ಮತ್ತು ಬಹುಮಾನಗಳು ದೊರೆತಿವೆ. ಆದ್ದರಿಂದ ಈ ಎಲ್ಲಅಂಶಗಳನ್ನು ಪರಿಗಣಿಸಿ ಶ್ರೀ, ನಿಂಗನಗೌಡ ನೆಗಳೂರು ಪೊಲೀಸ್ ನಿರೀಕ್ಷಕರವರಿಗೆ 2023ನೇ ಸಾಲಿನಲ್ಲಿ ಸಿಎಂ ಪದಕ ನೀಡಿದ್ದಾರೆ.