ದಾವಣಗೆರೆ: ಸರಕಾರ ಸಕಾಲ ಯೋಜನೆಯಡಿ ಈಗಾಗಲೇ ಮಾಹಿತಿ ನೀಡುತ್ತಿದ್ದು, ಈಗ ಒಂದಿಷ್ಟು ಬದಲಾವಣೆ ಮಾಡಿದೆ.
ಈಗ ಸಕಾಲ ದಡಿ ಅರ್ಜಿ ತಿರಸ್ಕೃತಗೊಂಡಿದ್ದಲ್ಲಿ ಅರ್ಜಿದಾರರು ಸಕ್ಷಮ ಪ್ರಾಧಿಕಾರಿಗೆ ಪ್ರಥಮ ಮೇಲ್ಮನವಿಯನ್ನು ಸಲ್ಲಿಸಲು ಸಕಾಲ ಮಿಷನ್ ಅವಕಾಶ ಕಲ್ಪಿಸಿದೆ.
ಸಕಾಲ ಅಧಿಸೂಚಿತ ಸೇವೆಗಳ ಅಡಿಯಲ್ಲಿ ಸಲ್ಲಿಸುವ ಅರ್ಜಿಗಳು ತಿರಸ್ಕ್ರತಗೊಂಡಿದ್ದರೆ ಅಂತವರ ನೋಂದಾಯಿತ ಮೊಬೈಲ್ ಸಂಖ್ಯೆ ಗೆ ಪ್ರಥಮ ಮೇಲ್ಮನವಿ ಸಲ್ಲಿಸಲು ಅನುಕೂಲವಾಗುವಂತೆ ಲಿಂಕ್ ಗಳನ್ನು ಕಳುಹಿಸುವ ವ್ಯವಸ್ಥೆ ಯನ್ನು ಸಕಾಲ ಮಿಷನ್ ಜಾರಿಗೆ ತಂದಿದೆ.
ಅರ್ಜಿ ತಿರಸ್ಕೃತ ಗೊಂಡಿದ್ದಲ್ಲಿ ಅರ್ಜಿದಾರರು ಸಕ್ಷಮ ಪ್ರಾಧಿಕಾರಿಗೆ ಪ್ರಥಮ ಮೇಲ್ಮನವಿ ಯನ್ನು ಸಲ್ಲಿಸಲು ಸಕಾಲ ಮಿಷನ್ ಅವಕಾಶ ಕಲ್ಪಿಸಿದೆ.
ಈ ಎಸ್ಎಂಎಸ್ ಸ್ವಯಂ ಚಾಲಿತವಾಗಿ ತಿರಸ್ಕೃತಗೊಂಡ ಅರ್ಜಿದಾರರಿಗೆ ಹೋಗುತ್ತದೆ . ಸೆಪ್ಟೆಂಬರ್ ತಿಂಗಳಿಂದ ಇದನ್ನು ಚಾಲನೆಗೊಳಿಸಲಾಗಿದೆ.