
ಶಿವಮೊಗ್ಗ: ಮಾರ್ಚ್ 1 ರಂದು ಸಾಗರದ ಗಾಂಧಿ ಮೈದಾನದಲ್ಲಿ ಸಾಗರ ತಾಲೂಕು ಮಟ್ಟದ 12ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅನಂದಪುರ ಕನ್ನಡ ಪರ ಸಂಘಟನೆಗಳನ್ನು ಆಹ್ವಾನಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ವಿ.ಟಿ.ಸ್ವಾಮಿ ಮಾತನಾಡಿ, ಸಮ್ಮೇಳನ ಬೆಳಗ್ಗೆ 9ರಿಂದ ಧ್ವಜಾರೋಹಣದಿಂದ ಆರಂಭಿಸಿ ಸಂಜೆ ಸಾಂಸ್ಕೃತಿಕ ವೈಭವದ ಕಾರ್ಯಕ್ರಮ ನಡೆಯಲಿದೆ.ಈ ಸಮ್ಮೇಳನದಲ್ಲಿ ಹಲವಾರು ಗೋಷ್ಠಿಗಳು, ಸಾಧಕರಿಗೆ ಸನ್ಮಾನ ನಡೆಯಲಿದ್ದು ಈ ಸಮ್ಮೇಳನಕ್ಕೆ ಜನಪ್ರತಿನಿಧಿಗಳು, ಸಾಹಿತಿಗಳು, ಕಲಾವಿದರು, ನೌಕರರು, ವಿದ್ಯಾರ್ಥಿಗಳು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿದರು.ಈ ಸಂದರ್ಭದಲ್ಲಿ ಪ್ರಮುಖರಾದ ಡಾ.ಪ್ರಸನ್ನ ಟಿ, ಗುಡವಿ ಸ್ವಾಮಿರಾವ್, ವೆಂಕಟೇಶ್ ಚಂದಳ್ಳಿ, ಗಣಪತಿ ಯಡೇಹಳ್ಳಿ, ರಾಘವೇಂದ್ರ ಆಚಾರ್, ಸುಬ್ರಹ್ಮಣ್ಯ ಆಚಾರ್, ಜಮೀಲ್, ಚಂದ್ರಶೇಖರ್ ಮೊದಲಾದವರು ಉಪಸ್ಥಿತರಿದ್ದರು.