
ಶಿವಮೊಗ್ಗ: ಗಂಗಾಮತ ಸಮಾಜದ ಮುಖಂಡರಾದ ಎಸ್.ಬಿ. ಮಂಜಪ್ಪ ಇಂದು ನಿಧನರಾಗಿದ್ದಾರೆ. ಅವರಿಗೆ 68 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಪುತ್ರಿ, ಪುತ್ರ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಎಸ್.ಬಿ. ಮಂಜಪ್ಪ ಅವರು ಕಾಂಗ್ರೆಸ್ ಮುಖಂಡರಾದ ಎಸ್.ಬಿ. ಕೇಶವಪ್ಪ ಅವರ ಸಹೋದರರಾಗಿದ್ದಾರೆ. ಗಂಗಾಮತ ಸಮಾಜದ ಮುಖಂಡರಾಗಿ ಸಮಾಜದ ಏಳಿಗೆಗೆ ಕೆಲಸ ಮಾಡಿದ್ದಾರೆ. ಇಂದು ಅವರ ಅಂತ್ಯಕ್ರಿಯೆ ನಡೆಯಿತು. ಜಿಲ್ಲಾ ಗಂಗಾಮತ ಸಂಘ ಹಾಗೂ ಸಮಾಜದ ಮುಖಂಡರು ಎಸ್.ಬಿ. ಮಂಜಪ್ಪ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.