ಶಿವಮೊಗ್ಗ : ಇದೇ ಮೊದಲ ಬಾರಿಗೆ ರೋಟರಿ ಕ್ಲಬ್ ಸೆಂಟ್ರಲ್‍ನಲ್ಲಿ ಅವರವರ ಕುಟುಂಬ ಸದಸ್ಯರೊಂದಿಗೆ ಅದ್ದೂರಿಯಾಗಿ ಗಣಪತಿ ಹಬ್ಬವನ್ನು ಆಚರಿಸಲಾಯಿತು. ಮತ್ತು ಅದ್ದೂರಿ ಮೆರವಣಿಗೆಯೊಂದಿಗೆ ಗಣಪತಿಯನ್ನು ವಿಸರ್ಜಿಸಲಾಯಿತು.
ಗಣಪತಿ ವಿಸರ್ಜನಾ ಕಾರ್ಯಕ್ರಮದಲ್ಲಿ ಡೊಳ್ಳು ಕುಣಿತ ವಿಶೇಷವಾಗಿತ್ತು. ರೋಟರಿ ಗಣಪತಿ ಎಂದು ಹೆಸರಿಸಲಾಗಿದ್ದು, ಸೆಂಟ್ರಲ್ ಕ್ಲಬ್‍ನ ಎಲ್ಲಾ ಸದಸ್ಯರ ಕುಟುಂಬದವರು ಸೇರಿ ವಿಜೃಂಭಣೆಯಿಂದ ಗಣಪತಿ ಹಬ್ಬವನ್ನು ಆಚರಿಸಲಾಯಿತು. ಇದರ ಜೊತೆಗೆ ಗಣಪತಿಗೆ ಅಲಂಕಾರವಾಗಿ ರೋಟರಿಯ ವೀಲ್ ಮತ್ತು ಸೆವೆನ್ ಏರಿಯಾ ಪೋಕಸ್ ಬಹಳ ವಿಶೇಷವಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಿರಣ್ ಕುಮಾರ್.ಜಿ ಮಾತನಾಡಿ, ಗಣೇಶ ಹಬ್ಬವನ್ನು ಎಲ್ಲರೂ ಅವರವರ ಮನೆಯಲ್ಲಿ ಆಚರಿಸುತ್ತಾರೆ. ಆದರೆ ಕ್ಲಬ್ ನಲ್ಲಿ ಎಲ್ಲಾ ಕುಟುಂಬಗಳು ಸೇರಿ ಹಬ್ಬವನ್ನು ಆಚರಿಸುತ್ತಿರುವುದು ವಿಶೇಷವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಈಶ್ವರ್, ಬಸವರಾಜ್, ರವಿ ಕೋಟೊಜಿ, ಪಿಡಿಜಿ ಪ್ರಕಾಶ್, ಸುರೇಖಾ ಮುರಳಿಧರ್, ರಮಾನಂದ ಗಿರಿ, ಇಂದ್ರೇಶ್, ಸಂತೋμï.ಎಸ್.ಕೆ, ಕುಮಾರ್, ಧಮೇರ್ಂದ್ರ ಸಿಂಗ್, ಗೀತಾ ಜಗದೀಶ್, ಶುಭಾ ಚಿದಾನಂದ್, ಜಯಶೀಲ ಶೆಟ್ಟಿ ಹಾಗೂ ಜೋನಲ್ ಲೆಫ್ಟಿನೆಂಟ್ ಮಂಜುನಾಥ್ ಕದಂ, ರೋಟರಿ ಈಸ್ಟ್ ಅಧ್ಯಕ್ಷ ಅರುಣ್, ದೀಕ್ಷಿತ್ ಮತ್ತು ಎಸ್‍ಪಿ ಶಂಕರ್ ಹಾಗೂ ರೋಟರಿ ಕ್ಲಬ್ ಸೆಂಟ್ರಲ್‍ನ ಎಲ್ಲಾ ಸದಸ್ಯರು ಮತ್ತು ಅವರ ಕುಟುಂಬದವರು ಉಪಸ್ಥಿತರಿದ್ದರು.
==============